Ultimate magazine theme for WordPress.

Rohit Sharma: ಆರ್​ಸಿಬಿ ಟೀಂ ಬಗ್ಗೆ ನನಗೆ ಭಯ ಶುರುವಾಗಿದೆ ಎಂದ ರೋಹಿತ್; ಯಾಕೆ ಗೊತ್ತಾ?

0

ಲಾಕ್​​ಡೌನ್ ವೇಳೆಯಲ್ಲಿ ಹೆಚ್ಚಾಗಿ ಇನ್​ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಶುಕ್ರವಾರ ಆಸೀಸ್ ಕ್ರಿಕೆಟರ್ ಡೇವಿಡ್ ವಾರ್ನರ್ ಜೊತೆ ಲೈವ್ ಬಂದಿದ್ದರು. ಈ ವೇಳೆ ಸಹಜವಾಗಿಯೇ ಐಪಿಎಲ್ ಬಗ್ಗೆ ಒಂದಷ್ಟು ವಿಚಾರಗಳು ಪ್ರಸ್ತಾಪವಾಗಿದೆ.ಲೈವ್ ವೇಳೆ ಅಭಿಮಾನಿಯೊಬ್ಬರು ಆರ್​ಸಿಬಿ ಬಗ್ಗೆ ಈ ಇಬ್ಬರೂ ಖ್ಯಾತ ಆಟಗಾರರ ಅಭಿಪ್ರಾಯ ಕೇಳಿದ್ದಾರೆ.

‘ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು ತಂಡ ಅದ್ಭುತವಾಗಿದೆ. ಬಲಿಷ್ಠ ಬ್ಯಾಟಿಂಗ್ ಲೈನ್​ಅಪ್ ಹೊಂದಿದೆ’ ಎಂದು ವಾರ್ನರ್ ಹೇಳಿದ್ದಾರೆ. ಇದಕ್ಕೆ ದನಿಗೂಡಿಸಿದ ರೋಹಿತ್ ಶರ್ಮಾ, ‘ಆರ್​ಸಿಬಿ ವಿರುದ್ಧದ ಪಂದ್ಯ ಇದ್ದಾಗ ನಾವು ಉಳಿದೆಲ್ಲಾ ಪಂದ್ಯಕ್ಕಿಂತ ಕೊಂಚ ಹೆಚ್ಚೇ ತಯಾರಿ ಮಾಡಿಕೊಳ್ಳುತ್ತೇವೆ’ ಎಂದಿದ್ದಾರೆ.

‘ಆರ್​ಸಿಬಿ ವಿರುದ್ಧ ನಮ್ಮ ಪಂದ್ಯವಿದ್ದಾಗ ತಂಡದ ಮೀಟಿಂಗ್ ಗಂಟೆಗಳಿಗೂ ಅಧಿಕವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ತಂಡದ ಘಟಾನುಘಟಿ ಆಟಗಾರರು. ಆರ್​ಸಿಬಿ ಬಲಿಷ್ಠ ಎದುರಾಳಿ ಎನ್ನುವುದರಲ್ಲಿ ಎರಡು ಮಾತಿಲ್ಲ’ ಎಂದು ರೋಹಿತ್ ಹೇಳಿದ್ದಾರೆ.

‘ಇನ್ನು ಈ ಬಾರಿ ಐಪಿಎಲ್ ನಡೆದರೆ ಆರ್​ಸಿಬಿ ಕಪ್ ಗೆಲ್ಲಬಹುದೇ ಎನ್ನುವುದನ್ನು ಹೇಳೋದು ಕಷ್ಟ. ಸದ್ಯ ಟೂರ್ನಿ ಮುಂದೂಡಿಕೆಯಾಗಿರುವುದು ದುರದೃಷ್ಟಕರ. ಆರ್​ಸಿಬಿ ಈ ಬಾರಿ ಅತ್ಯಂತ ಬಲಿಷ್ಠ ತಂಡವಾಗಿ ಗೋಚರಿಸುತ್ತಿದೆ. ಈ ಕಾರಣಕ್ಕೆ ಟೂರ್ನಿ ಬಗ್ಗೆ ನನಗೆ ವೈಯಕ್ತಿಕವಾಗಿ ಹೆಚ್ಚಿನ ಕುತೂಹಲವಿದೆ’ ಎನ್ನುವುದು ರೋಹಿತ್ ಮಾತು.

Leave A Reply

Your email address will not be published.