Ultimate magazine theme for WordPress.

ಸ್ಪೇನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 4-1 ಜಯ, ಸರಣಿ ಸಮ

6,311

ಮ್ಯಾಡ್ರೀಡ್ : ನಾಯಕಿ ರಾಣಿ ರಾಂಪಾಲ್ ಹಾಗೂ ಡಿಪೆಂಡರ್ ಗುರ್ಜಿತ್ ಕೌರ್ ಅವರ ಅಮೋಘ ಆಟದ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ಸ್ಪೇನ್ ತಂಡವನ್ನು 4-1 ಅಂತರಿಂದ ಮಣಿಸಿದ್ದು, ಸರಣಿ 2-2 ಅಂತರದಿಂದ ಸಮವಾಗಿದೆ.

ಕಾಂಸೆಜೊ ಸುಪಿರಿಯರ್ ಡಿ ಡಿಪೋರ್ಟ್ಸ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 33 ಹಾಗೂ 37ನೇ ನಿಮಿಷದಲ್ಲಿ ರಾಣಿ ಗಳಿಸಿದ ಎರಡು ಗೋಲುಗಳಿಂದ ಪಂದ್ಯದ ಮೇಲೆ ಭಾರತ ಪ್ರಾಬಲ್ಯ ಸಾಧಿಸಿತ್ತು.

ನಂತರ 44 ಹಾಗೂ 50 ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಎರಡು ಗೋಲು ಗಳಿಸುವ ಮೂಲಕ ಪಂದ್ಯವನ್ನು ಜಯದ ಹಾದಿಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

ಆದಾಗ್ಯೂ, 58 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಸ್ಪೇನ್ ನ ಲಾರಾ ರಿಯಾರಾ ಗೋಲು ಗಳಿಸುವ ಮೂಲಕ ಭಾರತಕ್ಕೆ ಸವಾಲು ನೀಡಲು ಪ್ರಯತ್ನಿಸಿತ್ತು. ಆದರೆ, ಪಂದ್ಯ 4-1 ಅಂತರದಿಂದ ಅಂತ್ಯಗೊಂಡಿತ್ತು. ಭಾರತ 2-2 ಅಂತರದಿಂದ ಸರಣಿ ಜಯ ಸಾಧಿಸಿತು.

Leave A Reply

Your email address will not be published.