Ultimate magazine theme for WordPress.

ರಾಮನಗರ ಜಿ.ಪಂ. ಸಿಇಒ ಇಕ್ರಂ ಕಾರ್ಯವೈಖರಿಗೆ ಜನಮೆಚ್ಚುಗೆ; ಕೊರೋನಾ ಸಂತ್ರಸ್ತರಿಗೆ ಸಹಾಯವಾಣಿ

0

ರಾಮನಗರ: ಕೊರೋನಾ ವೈರಸ್​ನಿಂದ ಇಡೀ ವಿಶ್ವವೇ ಸಂಪೂರ್ಣ ಸ್ತಬ್ಧವಾಗಿದೆ. ಬಡವರಿರಲಿ, ಶ್ರೀಮಂತರಿರಲಿ ಎಲ್ಲರಿಗೂ ಕೊರೋನಾ ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯ ಜನರಿಗೆ ದಿನನಿತ್ಯದ ಅಗತ್ಯ ವಸ್ತುಗಳು ಸಿಗದೇ ಸಾಕಷ್ಟು ತೊಂದರೆಯಾಗಿದೆ. ಆದರೆ ರಾಮನಗರ ಜಿಲ್ಲಾ ಪಂಚಾಯಿತಿ ಸಿಇಓ ಇಕ್ರಂರವರು ಇದಕ್ಕಾಗಿ ಒಂದು ಸಹಾಯವಾಣಿ ಪ್ರಾರಂಭಿಸಿದ್ದಾರೆ.

ಕೊರೋನಾ ಕರ್ಫ್ಯೂ ಇರುವ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಸಹಾಯವಾಣಿ ನಂಬರ್ ನೀಡಲಾಗಿದ್ದು, ಸಾರ್ವಜನಿಕರು 8277517672 ಈ ನಂಬರ್​ಗೆ ಕರೆ ಮಾಡಿ ತಮಗೆ ಬೇಕಾದ ದಿನನಿತ್ಯದ ಅಗತ್ಯ ವಸ್ತುಗಳನ್ನ ಖರೀದಿ ಮಾಡಬಹುದಾಗಿದೆ.

ಈ ಬಗ್ಗೆ ಸಿಇಓ ಇಕ್ರಂರವರು ಮಾತನಾಡಿ, ಸಾರ್ವಜನಿಕರು ಈ ಸಹಾಯವಾಣಿಯ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಜನರಿಗಾಗಿ ಈ ನೂತನ ಯೋಜನೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.