ಬೆಂಗಳೂರು, ಜೂನ್ 9: ದಲಿತ ಹೋರಾಟಗಳ ಮೂಲಕ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಪ್ರವೇಶ ಬಯಸಿದ್ದಾರೆ.
ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಸೋಮವಾರ(ಜೂನ್ 8)ದಂದು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಖರ್ಗೆ ಅವರ ಅಫಿಡವಿಟ್ ಪ್ರಕಾರ ಖರ್ಗೆ ಅವರಿಗಿಂತ ಅವರ ಪತ್ನಿ ರಾಧಾಭಾಯಿ ಅವರೇ ಹೆಚ್ಚು ಶ್ರೀಮಂತರೆನಿಸಿದ್ದಾರೆ. ಖರ್ಗೆ ಅವರ ಬಳಿ ಸ್ವಂತ ಜಮೀನು, ಕಾರು ಇಲ್ಲ ಎಂದು 2020ರಲ್ಲಿ ನೀಡಿದ ಅಫಿಡವಿಟ್ ನಂತೆ ಸೂಚಿಸಿದ್ದಾರೆ.
ಖರ್ಗೆ ಅವರು ನಾಮಪತ್ರದ ಜೊತೆಗೆ ನಿಯಮಾನುಸಾರ ತಮ್ಮ ಆಸ್ತಿ ಸೇರಿದಂತೆ ಹಲವು ಮಾಹಿತಿಗಳನ್ನು ಆಯೋಗಕ್ಕೆ ನೀಡಿದ್ದಾರೆ . ಅದರಂತೆ, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ, ಅವರು ಬಿಎ, ಎಲ್ಎಲ್ಬಿ ಓದಿದ್ದಾರೆ. ಖರ್ಗೆ ಅವರ ಸ್ಥಿರಾಸ್ತಿ, ಚರಾಸ್ತಿ, ಇನ್ನಿತರ ವಿವರಗಳು ಮುಂದಿವೆ..