EBM News Kannada
Leading News Portal in Kannada

ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಸಚಿವರ ಸೂಚನೆ, ಸಮಿತಿ ವರದಿ ನಂತರವೇ ನಿರ್ಧಾರ ಎಂದ ಡಿಕೆ ಶಿವಕುಮಾರ್ – Kannada News | Karnataka cabinet meet DK Shivakumar says pending bills of contractors to be released after panel report

0


ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿ ಆರೋಪದಿಂದ ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಹೇಳಿದ ಸಚಿವರು, ಬಾಕಿ ಬಿಲ್ ಬಿಡುಗಡೆಗೆ ಸೂಚಿಸಿದ್ದಾರೆ.

ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಸಚಿವರ ಸೂಚನೆ, ಸಮಿತಿ ವರದಿ ನಂತರವೇ ನಿರ್ಧಾರ ಎಂದ ಡಿಕೆ ಶಿವಕುಮಾರ್

ಸಮಿತಿ ವರದಿ ನಂತರವೇ ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ನಿರ್ಧಾರ ಎಂದ ಡಿಕೆ ಶಿವಕುಮಾರ್

Image Credit source: PTI

ಬೆಂಗಳೂರು, ಆಗಸ್ಟ್ 10: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಬಿಬಿಎಂಪಿ (BBMP) ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಚರ್ಚೆ ನಡೆದಿದ್ದು, ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಕೆಲವು ಸಚಿವರು ಸೂಚಿಸಿದ್ದಾರೆ. ವಿಪಕ್ಷ ಬಿಜೆಪಿ ಆರೋಪದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ (D. K. Shivakumar), ಸಮಿತಿ ವರದಿ ಸಿಕ್ಕ ನಂತರವೇ ಬಿಡುಗಡೆ ಮಾಡಲಾಗುವುದು ಎಂದರು.

ಕಾಮಗಾರಿ ಪೂರ್ತಿಗೊಳಿಸಿದ ಗುತ್ತಿಗೆದಾರರಿಗೆ ಕೂಡಲೇ ಹಣ ಬಿಡುಗಡೆ ಮಾಡಿ. ಬಿಜೆಪಿ ನಾಯಕರು ಈ ವಿಚಾರವನ್ನೇ ದೊಡ್ಡದು ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಎಂದು ಕೆಲವು ಸಚಿವರು ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರ ಡಿ.ಕೆ.ಶಿವಕುಮಾರ್, ಅನೇಕ ಕಡೆ ಕಾಮಗಾರಿಗಳೇ ಅಗಿಲ್ಲ, ಬಿಲ್ ಹೇಗೆ ಕೊಡುವುದು ಎಂದು ಪ್ರಶ್ನಿಸಿದರು. ಅಲ್ಲದೆ, ಕಾಮಗಾರಿ ಆಗಿದೆಯಾ, ಇಲ್ಲವಾ ಅಂತಾ ತಿಳಿಯಲು ಸಮಿತಿ ರಚನೆ ಮಾಡಲಾಗಿದೆ. ಸಮಿತಿ ವರದಿ ಬಂದ ಮೇಲೆ ಬಿಲ್ ಬಿಡುಗಡೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಬಾಕಿ ಬಿಲ್ ವಿಚಾರವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ನನಗೆ ಗೊತ್ತಿದೆ. ಕಾಮಗಾರಿ ನಡೆದಿದೆಯಾ ಇಲ್ಲವಾ ಅಂತಾ ತನಿಖೆ ನಡೆಯುತ್ತಿದೆ. ನಂತರ ಎಲ್ಲವೂ ಹೊರಗೆ ಬರುತ್ತದೆ. ನಾವು 40 ಪರ್ಸೆಂಟ್ ಆರೋಪ ಮಾಡಿದ್ದಕ್ಕೆ 15 ಪರ್ಸೆಂಟ್ ಆರೋಪ ಮಾಡುತ್ತಿದ್ದಾರೆ. ಇದನ್ನು ರಾಜಕೀಯವಾಗಿಯೇ ಎದುರಿಸೋಣ ಎಂದರು.

Published On – 3:24 pm, Thu, 10 August 23

ತಾಜಾ ಸುದ್ದಿ

Leave A Reply

Your email address will not be published.