EBM News Kannada
Leading News Portal in Kannada

ಯಡಿಯೂರಪ್ಪ ಭೇಟಿಯಾದ ಬಿಬಿಎಂಪಿ ಗುತ್ತಿಗೆದಾರರ ಸಂಘ, ರಾಜಕೀಯ ಸ್ವರೂಪ ಪಡೆದುಕೊಳ್ತಾ? – Kannada News | Bbmp contractors association Meets BJP Leader BS Yediyurappa And Seeks support For bill Clear

0


ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಗುತ್ತಿಗೆದಾರರ ಸಂಘಟ ಸಿಡಿದೆದ್ದಿದೆ. ಡಿಕೆ ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಮಾಡಿರುವ ಬಿಬಿಎಂಪಿ ಗುತ್ತಿಗೆದಾರರು, ಬಾಕಿ ಬಿಲ್​ ಬಿಡುಗಡೆ ಮಾಡುವಂತೆ ಸೂಚಿಸಲು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಇದೀಗ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಸಹಕೋರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ದಾರೆ.

ಯಡಿಯೂರಪ್ಪ ಭೇಟಿಯಾದ ಬಿಬಿಎಂಪಿ ಗುತ್ತಿಗೆದಾರರು

ಬೆಂಗಳೂರು, (ಆಗಸ್ಟ್ 09): ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ (DK Shivakumar) ಬಿಬಿಎಂಪಿ ಗುತ್ತಿಗೆದಾರನ ಸವಾಲು. ಬಾಕಿ ಬಿಲ್ ಪಾವತಿ ಮಾಡದೆ ಇರೋದರ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರು(bbmp contractors association)  ಸಿಡಿದು ನಿಂತಿದ್ದಾರೆ. ಈ ಸಂಬಂಧ ಮೊನ್ನೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಗುತ್ತಿಗೆದಾರರ ಸಂಘದ ಸದಸ್ಯರು, ನಿನ್ನೆ (ಆಗಸ್ಟ್ 08) ರಾಜ್ಯಪಾಲರಿಗೂ ದೂರು ನೀಡಿದೆ. ಈ ಮಧ್ಯೆ ಇದೀಗ ಇಂದು (ಆಗಸ್ಟ್ 09) ಮಂಜುನಾಥ್ ನೇತೃತ್ವದ ಗುತ್ತಿಗೆದಾರರ ಸಂಘ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa) ಅವರನ್ನು ಭೇಟಿ ಮಾಡಿದೆ. ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪರನ್ನ ಭೇಟಿ ಮಾಡಿ ತಮ್ಮ ಹೋರಾಟಕ್ಕೆ ಸಹಕಾರ ಕೋರಿದರು.

ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್, ಸಿಎಂ-ಡಿಸಿಎಂ ಭೇಟಿ ಮಾಡಿದ ಮೇಲೂ ಕೆಲಸ ಆಗುತ್ತಿಲ್ಲ. ಪಕ್ಷಾತೀತವಾಗಿ ಬೆಂಗಳೂರಿನ ಎಲ್ಲಾ ಶಾಸಕರಿಗೆ ದೂರು ನೀಡುತ್ತಿದ್ದೇವೆ. ಮುಖ್ಯ ಆಯುಕ್ತರು ಬಿಲ್ ಪಾವತಿ ಮಾಡುವುದನ್ನ ವಿಳಂಬ ಮಾಡುತ್ತಿರುವುದು ಏಕೆ ಎಂದು ಗೊತ್ತಿಲ್ಲ. ಕೇಳಿದ್ರೆ ಸರ್ಕಾರ ಪರಿಶೀಲನೆ ಮಾಡಿ ಅಂತ ಹೇಳಿದೆ ಎಂದು ಕಾರಣಗಳನ್ನು ಕೊಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಗುತ್ತಿಗೆದಾರ ಬಳಿ ಕೆಲಸ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಸಹ ಸಿಎಂ ಡಿಸಿಎಂ ಬಳಿ ಮತನಾಡುತ್ತೇನೆ ಎಂದು ಹೇಳಿದ್ದಾರೆ. ನಾವು ಯಾರನ್ನ ಟಾರ್ಗೆಟ್ ಮಾಡಿಲ್ಲ. ನಮ್ಮ‌ ಹಿಂದೆ ಯಾರು ಇಲ್ಲ. ಸರ್ಕಾರದ ಬಂದು ಮೂರು ತಿಂಗಳು ಆಗಿದೆ . ಅದರೂ ನಮ್ಮ ಹಣ ಬಿಡುಗಡೆ ವಿಳಂಬ ಆಗುತ್ತಿದೆ. ಇದರ ಹಿಂದೆ ಮಧ್ಯವರ್ತಿಗಳು ಇದ್ದಾರೆ ಎಂದು ಗುತ್ತಿಗೆದಾರು ಆರೋಪಿಸಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರು ಮಾಜಿ ಸಿಎಂ ಯಡಿಯೂರಪ್ಪ ಭೇಟಿ ವಿಚಾರಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯಾರು ಯಾರನ್ನು ಭೇಟಿಯಾಗಿದ್ದಾರೆ, ಯಾರು ಸಲಹೆ ಕೊಡುತ್ತಿದ್ದಾರೆ ಎನ್ನುವುದು ಗೊತ್ತು. ಹೋಗುವವರನ್ನು ಯಾರೂ ತಡೆಯಲು ಆಗುವುದಿಲ್ಲ. ಬಿಬಿಎಂಪಿ ಗುತ್ತಿಗೆದಾರರ ಹೋರಾಟಕ್ಕೆ ನ್ಯಾಯ ಸಿಗಲಿ, ಜಯ ಸಿಗಲಿ ಎಂದರು.

ಬಿಬಿಎಂಪಿ ಗುತ್ತಿಗೆದಾರರ ಸಂಘ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರನ್ನು ಭೇಟಿ ಮಾಡಿರುವುದನ್ನು ಗಮನಿಸಿದರೆ ಇದ್ಯಾಕೋ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Leave A Reply

Your email address will not be published.