EBM News Kannada
Leading News Portal in Kannada

ನೈಸ್ ಹಗರಣದ ಕುರಿತು ದಾಖಲೆ ನೀಡಿದ್ರೆ, ನೀವು ರೈತರಿಗೆ ನ್ಯಾಯ ಕೊಡಿಸುತ್ತೀರಾ – ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ – Kannada News | Nice Scam Former CM HD Kumaraswamy questioned Narendra Modi and slams congress and BJP

0


ವರ್ಗಾವಣೆ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತೆ. ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಗಿತ್ತಾ? ವರ್ಗಾವಣೆಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಬೆಂಗಳೂರು: ರೈತರ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ. ನೈಸ್ ಹಗರಣ (Nice Scam) ಕುರಿತು ಎಲ್ಲಾ ದಾಖಲೆ ಸಂಗ್ರಹ ಮಾಡಿದ್ದೇನೆ. ದೆಹಲಿಯಲ್ಲಿ ​ಹಗರಣದ ದಾಖಲೆ ಬಿಡುಗಡೆ ಮಾಡುತ್ತೇನೆ. ಹಗರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪ್ರಶ್ನೆ ಮಾಡುತ್ತೇನೆ. ನಾನು ದಾಖಲೆ ನೀಡುತ್ತೇನೆ ರೈತರಿಗೆ ನ್ಯಾಯ ಕೊಡಿಸುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದರು. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವರ್ಗಾವಣೆ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತೆ. ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಗಿತ್ತಾ? ವರ್ಗಾವಣೆಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ? ಎಂದು ಪ್ರಶ್ನಿಸಿದರು.

ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿಗಿಂತ ಅಧಿಕ ಹಣ ಸಂಗ್ರಹ ಮಾಡಿದ್ದಾರೆ. ಒಂದೊಂದು ಪೋಸ್ಟ್​​ಗೆ ಮೂರು ನಾಲ್ಕು ಜನರಿಗೆ ಲೆಟರ್ ಕೊಟ್ಟಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರಿಗೆ ಮೇನಲ್ಲಿ 710 ಕೋಟಿ ರೂ. ಬಿಡುಗಡೆ ಆಯ್ತು. ಆಗ ಕಾಂಗ್ರೆಸ್​​ನ ಸಂಸದರೊಬ್ಬರು ನಮ್ಮ ಸರ್ಕಾರ ಬರುತ್ತಿದೆ, ಒಂದು ರೂಪಾಯಿ ಬಿಡುಗಡೆ ಆಗಬಾರದು ಅಂತ ಎಚ್ಚರಿಕೆ ಕೊಟ್ಟರು. ಆ ದುಡ್ಡನ್ನು ಹಾಗೆ ಅಕೌಂಟ್​ನಲ್ಲಿ ಇಟ್ಟರು. ಹಣ ಬಿಡುಗಡೆಗೆ ಹಲವಾರು ಮೀಟಿಂಗ್ ಆದವು. ಐದು ಪರ್ಸೆಂಟ್​​ನಿಂದ ಹತ್ತು ಪರ್ಸೆಂಟ್ ಆಗಿದೆ. ಇದೀಗ ಹತ್ತರಿಂದ 15 ಪರ್ಸೆಂಟ್ ಕೊಟ್ಟರೆ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದ್ದಾರೆ ಎಂದು ಆರೋಪ ಮಾಡಿದರು.

ಈಗ ಎಲೆಕ್ಷನ್​​​​​ ಆಗುವುದೇ ಕಲೆಕ್ಷನ್​ ಮಾಡೋಕೆ

ಈಗ ಎಲೆಕ್ಷನ್​​​​​ ಆಗುವುದೇ ಕಲೆಕ್ಷನ್​ ಮಾಡೋಕೆ. ನಾನು ಪ್ರಾಮಾಣಿಕ ಅಂತ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ರೀಡೂ ಪ್ರಕರಣದಲ್ಲಿ ಏನಾಯ್ತು. ನಾನು ವರ್ಗಾವಣೆ ದಂಧೆ ಮಾಡಲು ನನ್ನ ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ. ರಾಜಕೀಯ ಮಾಡಲು ಹಣ ಬೇಕು. ಅದಕ್ಕೆ ಅಂತ ನಾನು ಸಹಿ ಮಾರಾಟ ಮಾಡಿಕೊಂಡಿಲ್ಲ.  ಪೆನ್​​ಡ್ರೈವ್​ ತರುವುದಕ್ಕೆ ನಾನು ಏಕೆ ಎಸ್​ಪಿ ರೋಡ್​ಗೆ ಏಕೆ ಹೋಗಲಿ. ಪೆನ್​​ಡ್ರೈವ್ ರೆಡಿ ಮಾಡಿಕೊಳ್ಳಲು ಅವಕಾಶ ಕೊಟ್ಟವರು ನೀವೆತಾನೆ. ಒಂದು ಪೆನ್​​ಡ್ರೈವ್​ ತೋರಿಸಿದ್ದಕ್ಕೆ ಎಷ್ಟು ಸಚಿವರ ನಿದ್ದೆಗೆಟ್ಟಿತ್ತು. ನನಗೆ ಸಂಬಂಧಿಸಿದ್ದಾ ಅಂತ ತಲೆಕೆಡೆಸಿಕೊಂಡಿದ್ದಾರೆ. ಯಾರದ್ದು ಅಣ್ಣ ಪೆನ್​ಡ್ರೈವ್​ ಅಂತ ಕಾಂಗ್ರೆಸ್​ನವರೇ ಕೇಳುತ್ತಿದ್ದರು. ದಯವಿಟ್ಟು ಪೆನ್​ಡ್ರೈವ್​ ಬಿಡುಗಡೆ ಮಾಡಬೇಡಿ ಎಂದು ಬಂದಿದ್ದರು ಎಂದು ಹೇಳಿದರು.

ನನಗೆ ಬಿಜೆಪಿ‌ ಜೊತೆ ಹೋಗುವ ದಾರಿದ್ಯ್ರ ಬಂದಿಲ್ಲ

ನನಗೆ ಬಿಜೆಪಿ‌ ಜೊತೆ ಹೋಗುವ ದಾರಿದ್ಯ್ರ ಬಂದಿಲ್ಲ. ನಾನು ಕಾರ್ಯಕರ್ತರಿಗೆ ಹೇಳುತ್ತೇನೆ. ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ. ಯಾವುದೇ ಪಕ್ಷಗಳ ಜೊತೆ ಸೇರಿ ಭಿಕ್ಷೆ ‌ಬೇಡುವ ಪರಿಸ್ಥಿತಿ ‌ನಮಗೆ ಬಂದಿಲ್ಲ. ನಾನು ಯಾರ ಮನೆಯ ಬಾಗಿಲಿಗೂ ಹೋಗಲ್ಲ. ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ‌ಎಷ್ಟು ದ್ರೋಹ ಮಾಡಿದ್ದಾರೊ ಅಷ್ಟೇ ದ್ರೋಹವನ್ನು ಬಿಜೆಪಿ‌ ಕೂಡ ಮಾಡಿದೆ ಎಂದು ಆರೋಪ ಮಾಡಿದರು.

ಐದು ವರ್ಷದಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಒಂದು‌ ದಾಖಲೆ ಬಿಡುಗಡೆ ಮಾಡಿದ್ರಾ? ನಿಮಗೆ ನಾಚಿಕೆ ಆಗಬೇಕು. ಗ್ಯಾರಂಟಿ ಗ್ಯಾರಂಟಿ ಅಂತ ಹೊರಟ್ಟಿದ್ದಿರಾ. ಕಲಬುರ್ಗಿಯಲ್ಲಿ ಮಳೆಯಿಂದ ಜನ ಸಾಕಷ್ಟು ಸಮಸ್ಯೆಯಿಂದ ಇದ್ದಾರೆ. ಅದರ ಬಗ್ಗೆ ಗಮನ ಕೊಡಿ. ಬರೆ ಗ್ಯಾರಂಟಿ ಗ್ಯಾರಂಟಿ ಅಂತ ಹೊರಟ್ಟಿದ್ದಿರಾ ಎಂದು ವಾಗ್ದಾಳಿ ಮಾಡಿದರು.

Published On – 2:06 pm, Sat, 5 August 23

ತಾಜಾ ಸುದ್ದಿ

Leave A Reply

Your email address will not be published.