EBM News Kannada
Leading News Portal in Kannada

ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮ ಆಗೋದೂ ಬೇಡ ಎಂದು ಖಡಾಖಂಡಿತವಾಗಿ ಹೇಳಿದ ಹೆಚ್​.ಡಿ. ಕುಮಾರಸ್ವಾಮಿ – Kannada News | H.D. Kumaraswamy said categorically that he does not want dk shivakumar to be his brother in the next life also

0


ಬೆಂಗಳೂರು, ಆಗಸ್ಟ್​ 5: ವಿದೇಶ ಪ್ರವಾದಿಂದ ನಿನ್ನೆಯಷ್ಟೇ ವಾಪಸಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದು ಶನಿವಾರಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ, ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ಅದರಲ್ಲೂ ನಿರ್ದಿಷ್ಟವಾಗಿ ‘ಅಣ್ಣ ಹೇಳ್ತಾರೆ ತಮ್ಮ ಕೇಳಬೇಕು’ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (dk shivakumar) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಈ ಜನ್ಮದಲ್ಲಿ ಅಂತೂ ಅಂತಹ ತಮ್ಮ ನನಗೆ ಬೇಡ ಎಂದು ಹೆಚ್​ಡಿಕೆ ಖಡಾಖಂಡಿತವಾಗಿ ಹೇಳಿದರು. ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮ (brother) ಆಗೋದೂ ಬೇಡ ಎಂದೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ (HD Kumaraswamy) ಟಾಂಗ್ ಕೊಟ್ಟರು!

ಸುದ್ದಿಗೊಷ್ಠಿಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಿಷ್ಟು: ವರ್ಗಾವಣೆ ಬಗ್ಗೆ ಮಾತಾಡೋಕೆ ಅಸಹ್ಯ ಆಗುತ್ತದೆ. ಪರಮೇಶ್ವರ್ ನಾನು ಏನು ಸಲಹೆ ಕೊಟ್ಟಿದ್ದೀನಿ ಹೇಳಪ್ಪ ಜನರ ಮುಂದೆ. ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಗಿತ್ತಾ? ಪೊಲೀಸರ ವರ್ಗಾವಣೆ ಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ? ನಾನು ಹಿಟ್ ಅಂಡ್ ರನ್ನಾ? ಯಾವುದರಲ್ಲಿ ಹಿಟ್ ಅಂಡ್ ರನ್? ಹಿಂದೆ ಸಿದ್ದರಾಮಯ್ಯರನ್ನು ಮಜಾವಾದಿ ಎಂದು ಸಾಮಾನ್ಯವಾಗಿ ಹೇಳಿದ್ದೆ. ಕೊನೆಗೆ ಅದು ಎಲ್ಲಿ ಹೋಯ್ತು? ಅವನು ಯಾವನೋ ದುಬೈನಿಂದ ಕರೆಸಿ ಏನೇನೋ ಮಾಡಿದ್ರಲ್ಲ. ಗೃಹ ಸಚಿವರಿಗೂ ನಿಮಗೂ ಘರ್ಷಣೆ ಆಗಿದೆಯಲ್ಲ? ಸಿಸಿಟಿವಿ ಇರಲಿಲ್ವಾ? ವರ್ಗಾವಣೆ ಪ್ರಕ್ರಿಯೆ ಆಗುವಾಗ ನಿಮ್ ಜೊತೆ ಯಾರು ಕೂತಿದ್ರು? ಅದೆಲ್ಲ ನಿಮಗೆ ಗೊತ್ತಿಲ್ವಾ? ಗುತ್ತಿಗೆದಾರರ ಕೆಂಪಣ್ಣ ಇವಾಗ ಎಲ್ಲಿಗೆ ಹೋಗಿದ್ದಾರೆ? ನಿನ್ನೆ ಬೆಳಿಗ್ಗೆ ನಡೆದಿರುವ ಘಟನೆ 710 ಕೋಟಿ ಬಿಡುಗಡೆ ಆಗಬೇಕಲ್ಲ. ಅದಕ್ಕೆ ‌ 26 ಅಂಶಗಳ ಮೇಲೆ ತನಿಖೆ ಅಂತೆ ಎಂದೆಲ್ಲಾ ಕಾಂಗ್ರೆಸ್​ ನಾಯಕರ ಟೇಕೆಗೆ ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು.

Related Video

Leave A Reply

Your email address will not be published.