EBM News Kannada
Leading News Portal in Kannada

ನನ್ನ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರ ನಕಲಿ: ಚಲುವರಾಯಸ್ವಾಮಿ – Kannada News | Letter allegedly given to Governor by agriculture officials against me is fake says N Chaluvaraya Swamy

0


ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಇಲಾಖೆ ಅಧಿಕಾರಿಗಳು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ಆ ಪತ್ರವನ್ನು ಜೆಡಿ ಅವರು ನಕಲಿ ಎಂದಿದ್ದಾಗಿ ತಿಳಿಸಿದರು.

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ

ಮಂಡ್ಯ, ಆಗಸ್ಟ್ 7: ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರವಾಗಿ ನನಗೆ ಗೊತ್ತಿಲ್ಲ, ನಾನು ಯಾರ ಬಳಿ ಮಾತನಾಡಿಲ್ಲ. ಜೆಡಿ ಬಳಿ ಈಗ ಕೇಳಿದಾಗ ನಕಲಿ ಪತ್ರ ಎಂದು ಹೇಳಿದ್ದಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N Chaluvaraya Swamy) ಸ್ಪಷ್ಟನೆ ನೀಡಿದರು. ಹಾಗೇನಾದರು ಇದ್ದರೆ ನಮ್ಮ ಇಲಾಖೆಯ ಕಾರ್ಯದರ್ಶಿಗಳಿಗೆ ತನಿಖೆ ಮಾಡಲು ಹೇಳುತ್ತೇನೆ ಎಂದರು.

ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಬಳಿ ಕೇಳಿದ್ದೇನೆ. ಫೇಕ್ ಲೇಟರ್ ಇರಬಹುದು. ನಮ್ಮಲ್ಲಿ ಆತರ ಯಾರು ಇಲ್ಲ ಎಂದು ಹೇಳುತ್ತಿದ್ದಾರೆ. ಜೆಡಿ ಅವರು ನಾನು ಯಾರ ಬಳಿ ಹಣ ಕೇಳಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಮೊದಲು ಇದು ಸತ್ಯನಾ, ಸುಳ್ಳಾ ಎಂದು ತಿಳಿದು ತನಿಖೆ ಮಾಡಿಸುತ್ತೇವೆ ಎಂದರು.

ಈ ರೀತಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದರೇ ಹೆಚ್ಚು ಪ್ರಕಾಶಮಾನವಾಗುತ್ತೇವೆ. ಕಲ್ಲನ್ನ ಕೆತ್ತಿದರೇ ತಾನೇ ವಿಗ್ರಹ ಆಗುವುದು. ವರದಿ ಬಂದ ನಂತರ ಮಾತನಾಡುತ್ತೇನೆ. ನನಗೆ ಮಾಹಿತಿ ಬಂದ ತಕ್ಷಣ ಹಣಕಾಸಿನ ವ್ಯವಹಾರ ಮಾತನಾಡಿದ್ದೀರಾ ಎಂದು ಜೆಡಿ ಬಳಿ ಕೇಳಿದ್ದೇನೆ. ನಾನು ಯಾರು ಸಹಾಯಕ ನಿರ್ದೇಶಕರನ್ನ ಭೇಟಿ ಮಾಡಿಲ್ಲ ಎಂದರು.

ನಾವು ರಾಜ್ಯದಲ್ಲೇ ಭ್ರಷ್ಟಾಚಾರ ಮಾಡುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ ಮಾಡುತ್ತೇವಾ. ಯಾರೋ ನನ್ನನ್ನ ಟಾರ್ಗೆಟ್ ಮಾಡಿರಬೇಕು. ಅವರ ಬಗ್ಗೆ ಬೇಜಾರು ಮಾಡಿಕೊಳ್ಳುವುದಿಲ್ಲ. ಈ ದೀರಿ ದಿನಾಲು ಮಾಡಲಿ ಎಂದು ಕೃಷಿ ಸಚಿವರು ಟಾಂಗ್ ಕೊಟ್ಟರು.

ಇನ್ನು ನೈಸ್ ರೋಡ್ ಹಗರಣದ ಬಗ್ಗೆ ಕುಮಾರಸ್ವಾಮಿ ದಾಖಲೆ ಬಿಡುಗಡೆ ವಿಚಾರವಾಗಿ ಮಾತನಾಡಿದ ಸಚಿವರು, ದಾಖಲೆ ಬಿಡುಗಡೆ ಮಾಡಲಿ. ನಾವು ಯಾವತ್ತು ಬೇಡ ಎಂದಿದ್ದೇವೆ. ನೈಸ್ ರೋಡ್ ಬಗ್ಗೆ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ದಾಖಲೆ ಬಿಡುಗಡೆ ಮಾಡಲಿ. ನೈಸ್ ರೋಡ್ ಯಾವಾಗ ಪ್ರಾರಂಭವಾಯಿತು, ಯಾರು ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರು ಎಂದು ತಿಳಿಯುತ್ತದೆ. ಕುಮಾರಸ್ವಾಮಿ ಅವರೇ ಹಗರಣದ ಅಪಾದನೇ ಎದುರಿಸುತ್ತಿದ್ದರು ಎಂದು ಟಾಂಗ್ ಕೊಟ್ಟರು.

ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಒಪ್ಪಿಕೊಂಡ ಕೃಷಿ ಸಚಿವ

ಇನ್ನು ಕೆಆರ್​ಎಸ್​್ನಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದನ್ನ ಒಪ್ಪಿಕೊಂಡ ಸಚಿವ ಚಲುವರಾಯಸ್ವಾಮಿ, ಕೇಂದ್ರ ಸರ್ಕಾರದ ನಿರ್ವಾಹಣಾ ಸಮಿತಿ ಇರುವುದರಿಂದ ಅವರ ತೀರ್ಮಾನವನ್ನ ಪಾಲಿಸಬೇಕಾಗುತ್ತೆ. ಇತ್ತೀಚೆಗೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ ನೀರು ಬಿಡಬೇಕಾಯ್ತು ಎಂದು ಹೇಳಿದರು.

ತಾಜಾ ಸುದ್ದಿ

Leave A Reply

Your email address will not be published.