EBM News Kannada
Leading News Portal in Kannada

ಲಕ್ಷ್ಮೀ ಹೆಬ್ಬಾಳ್ಕರ್‌- ಸತೀಶ್ ಜಾರಕಿಹೊಳಿ ಮಧ್ಯೆ ಕೋಲ್ಡ್​ ವಾರ್ ಇದೆಯಾ? ಬೆಳಗಾವಿಯಲ್ಲಿ ಸತೀಶ್ ರಿಯಾಕ್ಷನ್ ಏನು? – Kannada News | cold war over transfer issue between congress minister lakshmi hebbalkar and Satish Jarkiholi belagavi

0


ಹಾಲಿ ಕಾಂಗ್ರೆಸ್​​ (congress) ಸರ್ಕಾರದಲ್ಲಿ ಸಚಿವರುಗಳಾದ, ಒಂದೇ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳ್ಕರ್‌ ( lakshmi hebbalkar) ಮತ್ತು ಸತೀಶ್ ಜಾರಕಿಹೊಳಿ (Satish Jarkiholi) ಮಧ್ಯೆ ಕೋಲ್ಡ್​ ವಾರ್ ಇದೆಯಾ? ಅದರಲ್ಲೂ ವರ್ಗಾವಣೆ (transfer) ವಿಚಾರದಲ್ಲಿ ಸಚಿವೆ ಲಕ್ಷ್ಮೀ ಜತೆ ಸತೀಶ್ ಮುನಿಸಿಕೊಂಡಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಬೆಳಗಾವಿ (belagavi) ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಮಾತನಾಡಿದ್ದು ಸಮಯ-ಸಂದರ್ಭವನ್ನು ಸ್ಪಷ್ಟಪಡಿಸುತ್ತಾ ವಿಷಯ ತಿಳಿಗೊಳಿಸಿದ್ದಾರೆ. ಈ ವಿಚಾರ ನನಗೆ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಬಂಧ ಇಲ್ಲ. ಡಿಡಿಪಿಐ ವರ್ಗಾವಣೆ ಸ್ಥಳೀಯ ಶಾಸಕ ರಾಜು ಸೇಠ್‌ಗೆ ಬಿಟ್ಟ ವಿಚಾರ, ಅದು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇದನ್ನು ಸರಿಪಡಿಸಲು ಸೂಚಿಸುತ್ತೇನೆ ಎಂದಿದ್ದಾರೆ ಸತೀಶ್ ಜಾರಕಿಹೊಳಿ. ವರ್ಗಾವಣೆ ಸ್ಥಳೀಯ ಶಾಸಕರಿಗೆ ಬಿಟ್ಟಿದ್ದೇವೆ, ಅವರೇ ಮಾಡಬೇಕು. ಅವರೇ ಒಮ್ಮೊಮ್ಮೆ 2-3 ಬಾರಿ ಲೆಟರ್ ಕೊಟ್ಟಿದ್ದರಿಂದ ಗೊಂದಲವಾಗಿದೆ. ಸ್ಥಳೀಯ ಶಾಸಕರು ಹೇಳಿದ ಮೇಲೆಯೇ ನಾವು ಲೆಟರ್ ಕೊಡ್ತೇವೆ ಎಂದು ಒತ್ತಿಹೇಳಿದರು.

ಇನ್ನು ಎಲ್ಲ ಯೋಜನೆಗಳನ್ನು ಮಹಿಳೆಯರಿಗೆ ನೀಡುತ್ತಿದ್ದೀರಿ ಎಂಬ ಪ್ರಶ್ನೆ ಎದುರಾದಾಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪುರುಷರನ್ನು ಪರಿಗಣಿಸುತ್ತೇವೆ ಎಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಸೂಚ್ಯವಾಗಿ ಹೇಳಿದರು.

Related Video

Leave A Reply

Your email address will not be published.