EBM News Kannada
Leading News Portal in Kannada

Karnataka Breaking Kannada News Live: ಇಂದು 6 ಜಿಲ್ಲೆಗಳ ಸಚಿವರು, ಶಾಸಕರ ಜತೆ ಸಿಎಂ, ಡಿಸಿಎಂ ಸಭೆ – Kannada News | Karnataka Highlights News on Weather Congress Government Siddaramaiah Basavaraj bommai tomato rate congress meeting

0


ವಿವೇಕ ಬಿರಾದಾರ |

Updated on:Aug 07, 2023 | 8:54 AM


Breaking News Today Live Updates: ರಾಜ್ಯ ರಾಜಕೀಯ, ಅಪರಾಧ, ಮಳೆ, ಹವಾಮಾನ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿ​​ ಇದೀಗ ಟಿವಿ9 ಡಿಜಿಟಲ್​​ ಕನ್ನಡದಲ್ಲಿ….

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​

LIVE NEWS & UPDATES

 • 07 Aug 2023 08:32 AM (IST)

  Karnataka New Live: ಮೈಸೂರು ದಸರಾ 2023ಕ್ಕೆ ಆನೆಗಳ ಆಯ್ಕೆ‌ ಪ್ರಕ್ರಿಯೆ; ಅಧಿಕಾರಿಗಳಿಂದ ಪರಿಶೀಲನೆ

  ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ಆನೆಗಳ ಆಯ್ಕೆ‌ ಪ್ರಕ್ರಿಯೆ ಭರದಿಂದ ಸಾಗಿದೆ. ನಾಗರಹೊಳೆ ಬಂಡೀಪುರದ ವಿವಿಧ ಆನೆ ಕ್ಯಾಂಪ್‌ಗಳಿಗೆ ತೆರಳಿ ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ.  ಮೈಸೂರು ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ಅಧಿಕಾರಿಗಳು ತೆರಳಿ ಪರಿಶೀಲಿಸಲಿದ್ದಾರೆ.

 • 07 Aug 2023 07:59 AM (IST)

  Karnataka New Live: ವಿಧಾನಪರಿಷತ್ ನಾಮನಿರ್ದೇಶನ ಪ್ರಕ್ರಿಯೆ: ಪಕ್ಷದ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ

  ಬೆಂಗಳೂರು: ವಿಧಾನಪರಿಷತ್ ಸದಸ್ಯತ್ವ ಸ್ಥಾನ ನಿಷ್ಠಾವಂತ ಕಾರ್ಯಕರ್ತರಿಗೆ ಸಿಗದೇ ಉಳ್ಳವರ ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಈ ಹಿನ್ನೆಲೆ ಇಂದು ಪಕ್ಷದ ನಾಯಕರ ನಿಲುವಿನ ವಿರುದ್ಧ ಕಾರ್ಯಕರ್ತರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಕೆಪಿಸಿಸಿ ಕಚೇರಿ ಸಭೆ ನಡೆಸಲಿದ್ದಾರೆ. ಎಂಆರ್ ಸೀತಾರಾಮ್, ಉಮಾಶ್ರೀ ಮತ್ತು ಸುಧಾಮ್ ದಾಸ್​ ಅವರಿಗೆ ಪರಿಷತ್ ಸದಸ್ಯ ಸ್ಥಾನ ನೀಡುತ್ತಿರುವುದಕ್ಕೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

 • 07 Aug 2023 07:58 AM (IST)

  Karnataka New Live: ಬಿಜೆಪಿಯಲ್ಲಿ ಮತ್ತೆ ಗರಿಗೆದರಿದ ರಾಜಕೀಯ

  ಗೃಹ ಸಚಿವ ಅಮಿತ್ ಶಾ ಆಹ್ವಾನದ ಹಿನ್ನಲೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಆಯ್ಕೆ ವಿಚಾರಕ್ಕೆ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್​ ನಿರೀಕ್ಷೆಗೂ ಮೀರಿದ ಬಹುಮತ ಪಡೆಯುವ ಮೂಲಕ ಗೆದ್ದು ಬೀಗಿ, ಅಧಿಕಾರದ ಗದ್ದುಗೆಯನ್ನು ಏರಿ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದೆ. ಸರ್ಕಾರ ರಚನೆಯಾಗಿ ಈಗ ಎರಡು ತಿಂಗಳು ಕಳೆದಿದ್ದು ಆಗಲೆ ಶಾಸಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಇದನ್ನು ಶಮನ ಮಾಡಲು ಸಿಎಂ ಮತ್ತು ಡಿಸಿಎಂ ಇಂದು ಜಿಲ್ಲಾವಾರು ಶಾಸಕರ ಮತ್ತು ಸಚಿವರ ಸಭೆ ಕರೆದಿದ್ದಾರೆ. ಇನ್ನು ವಿಧಾನಪರಿಷತ್ ನಾಮನಿರ್ದೇಶನ ಪ್ರಕ್ರಿಯೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲವೆಂದು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಇನ್ನು ಬಿಜೆಪಿ ಪಾಳಯದಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಕಂಗ್ಗಂಟಾಗಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್​​ ಅಪ್ಡೇಟ್ಸ್​​ ಇಲ್ಲಿದೆ.

Published On – Aug 07,2023 7:56 AM

Leave A Reply

Your email address will not be published.