Breaking News Today Highlights Updates: ಮೂರನೇ ದಿನದ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್: 67,549 ಜನ ವೀಕ್ಷಣೆ – Kannada News | Highlights News on Congress Government Siddaramaiah and DK Shivakumar Karnataka Politics PM Modi to launch revamp of 508 railway stations Lok Sabha Polls
The liveblog has ended.
06 Aug 2023 09:39 PM (IST)
Breaking News Today Live Updates: ಮೂರನೇ ದಿನದ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್
ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಯೋಜಿಸಿರುವ ಫ್ಲವರ್ ಶೋ ಮೂರು ದಿನ ಪೂರ್ಣಗೊಳಿಸಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಒಟ್ಟು 67, 549 ಜನ ವೀಕ್ಷಣೆ ಮಾಡಿದ್ದಾರೆ. ಅದರಲ್ಲಿ ವಯಸ್ಕರು 55,204, ಪಾಸ್ ಹೊಂದಿರುವವರು -2500, ಮಕ್ಕಳು-9345 ಹಾಗೂ 500 ಶಾಲಾ ಮಕ್ಕಳು ವೀಕ್ಷಣೆ ಮಾಡಿದ್ದು, ಇಂದು ಒಟ್ಟು 47 ಲಕ್ಷ ರೂ. ಕಲೆಕ್ಟ್ ಆಗಿದೆ.
06 Aug 2023 09:28 PM (IST)
Breaking News Today Live Updates: ದನ ಮೇಯಿಸಲು ಹೋಗಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ
ದನ ಮೇಯಿಸಲು ಹೋಗಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ದಿನ್ನಳ್ಳಿ ಬಳಿ ನಡೆದಿದೆ. ಸಿದ್ದಮರಿ, ಗಿರಿಯಪ್ಪಗೆ ಸಣ್ಣಪುಟ್ಟ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
06 Aug 2023 09:03 PM (IST)
Breaking News Today Live Updates: ನನ್ನ ಹೆಸರು ಯಾಕೆ ಬರೆದಿದ್ದಾನೆ ಗೊತ್ತಿಲ್ಲ
ಜಾನಕಲ್ ಗ್ರಾಮದ ಬಳಿ SDC ತಿಪ್ಪೇಸ್ವಾಮಿ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ನೋಟ್ನಲ್ಲಿ ಶಾಸಕ ಎಂ.ಚಂದ್ರಪ್ಪ, ಇಓ ರವಿ ಹೆಸರು ಬರೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದರ ಬಗ್ಗೆ ಮಾತನಾಡಿದ ಶಾಸಕ ಎಂ. ಚಂದ್ರಪ್ಪ ನನಗೆ ಇದಕ್ಕೆ ಯಾವ ಸಂಬಂಧವಿಲ್ಲ. ನಾನು ಅವನನ್ನು ನೋಡೇ ಇಲ್ಲ. ಆದರೂ ನನ್ನ ಹೆಸರು ಯಾಕೆ ಬರೆದಿದ್ದಾನೆ ಗೊತ್ತಿಲ್ಲ. ತನಿಖೆ ನಂತರ ಸತ್ಯ ಹೊರಬರಲಿದೆ ಎಂದಿದ್ದಾರೆ.
06 Aug 2023 08:33 PM (IST)
Breaking News Today Live Updates: ದೆಹಲಿಗೆ ತೆರಳಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹೈಕಮಾಂಡ್ ಸೂಚನೆ ಮೇರೆಗೆ ಸಂಜೆ 6 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನವದೆಹಲಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ. ನಾಳೆ ವರಿಷ್ಠರನ್ನು ಭೇಟಿಯಾಗಲಿದ್ದಾರೆ.
06 Aug 2023 08:03 PM (IST)
Breaking News Today Live Updates: ಬಿಎಸ್ಎಫ್ ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ
ಬಾಗಲಕೋಟೆ: ಗಡಿಭದ್ರತಾ ಪಡೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಯಲ್ಲಪ್ಪ ಚೂರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ಮಾಡಲಾಗಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ನಿವೃತ್ತ ಯೋಧ ಯಲ್ಲಪ್ಪ ಚೂರಿ, ಪತ್ನಿ, ಮಕ್ಕಳೊಂದಿಗೆ ಮೆರವಣಿಗೆ ಮಾಡಲಾಯಿತು.
06 Aug 2023 07:25 PM (IST)
Breaking News Today Live Updates: ಸಹಜವಾಗಿಯೇ ಜನರಲ್ಲಿ ಇಂತಹ ಅನುಮಾನವಿದೆ-ರಹೀಂ ಖಾನ್
ಬೇರೆ ವಾರ್ಡ್ಗಳಲ್ಲಿ ಸಮಸ್ಯೆಯಿಲ್ಲ, ಇದೊಂದು ಪ್ರದೇಶದಲ್ಲಿ ಸಮಸ್ಯೆ ಇದೆ. ಸಹಜವಾಗಿಯೇ ಜನರಲ್ಲಿ ಇಂತಹ ಅನುಮಾನವಿದೆ. ಹಲವು ವರ್ಷಗಳಿಂದ ಟ್ಯಾಂಕ್ ಸ್ವಚ್ಛಗೊಳಿಸದಿರುವುದು ಗೊತ್ತಾಗುತ್ತಿದೆ. ಚಿತ್ರದುರ್ಗ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ. ಏನಾದರೂ ಸಮಸ್ಯೆ ಆದಾಗ ಮಾತ್ರ ಅಧಿಕಾರಿಗಳು ಬರುತ್ತಾರೆ. ಮುಂಜಾಗ್ರತಾ ಕ್ರಮಕೈಗೊಳ್ಳದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
06 Aug 2023 06:56 PM (IST)
Breaking News Today Live Updates: ತನಿಖೆ ಪೂರ್ಣವಾದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರು ತನಿಖೆ ಭರವಸೆ ನೀಡುತ್ತೇನೆ ಎಂದು ಕವಾಡಿಗರಹಟ್ಟಿಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು. ತನಿಖೆ ಪೂರ್ಣವಾದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಚಿತ್ರದುರ್ಗ ನಗರಸಭೆ ಎಇಇ, ಜೆಇ ಅಮಾನತು ಮಾಡಲಾಗಿದೆ ಎಂದು ಹೇಳಿದರು.
06 Aug 2023 06:30 PM (IST)
Breaking News Today Live Updates: ಸಚಿವರಾದ ಮೇಲೆ ಮೊದಲ ಬಾರಿಗೆ ಗ್ರಾಮಕ್ಕೆ ಭೇಟಿ
ಆರ್ ಬಿ ತಿಮ್ಮಾಪುರ ಸಚಿವರಾದ ಮೇಲೆ ಮೊದಲ ಬಾರಿಗೆ ಗ್ರಾಮಕ್ಕೆ ಭೇಟಿ ಹಿನ್ನೆಲೆ ಜನರು ಈಡುಗಾಯಿ ಒಡೆದು ಪುಷ್ಪವೃಷ್ಟಿಗೈದರು. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರೂಗಿ ಗ್ರಾಮದಲ್ಲಿ ಘಟನೆ ಕಂಡುಬಂದಿದೆ.
06 Aug 2023 06:10 PM (IST)
Breaking News Today Live Updates: ಖ್ಯಾತ ಜಾನಪದ ಗಾಯಕ ಗದ್ದರ್ ನಿಧಿನ
ಕ್ರಾಂತಿಕಾರಿ ಕವಿ, ಖ್ಯಾತ ಜಾನಪದ ಗಾಯಕ ಗದ್ದರ್ ಭಾನುವಾರ ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಗದ್ದರ್ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಡುಗಳ ಮೂಲಕ ಚಳವಳಿ ಹುಟ್ಟುಹಾಕಿದ್ದರು. 2010ರವರೆಗೆ ನಕ್ಸಲೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ನಂತರ ತೆಲಂಗಾಣ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ತೆಲಂಗಾಣದಲ್ಲಿ ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. ಹಾಡುಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
06 Aug 2023 05:32 PM (IST)
Breaking News Today Live Updates: ಕಳೆದ 4 ದಿನಗಳಲ್ಲಿ ಟೊವೆಟೊ ದರ ಅಂದಾಜು 1000 ರೂ. ಕುಸಿತ
ಕೋಲಾರ, ಆಗಸ್ಟ್ 6: ಸತತವಾಗಿ ಏರುತ್ತಿದ್ದ ಟೊಮೆಟೊ ಬೆಲೆ ಇದೀಗ ಇಳಿಮುಖವಾಗಲು ಆರಂಭಿಸಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಯಲ್ಲಿ ಕುಸಿತಗೊಂಡಿದ್ದು, 15 ಕೆಜಿ ಬಾಕ್ಸ್ ಟೊಮೆಟೊ ದರ 2,700 ರೂ.ನಿಂದ 1,500 ರೂಪಾಯಿಗೆ ಕುಸಿದಿದೆ. ಒಟ್ಟಾರೆಯಾಗಿ ಕಳೆದ ನಾಲ್ಕು ದಿನಗಳಲ್ಲಿ ಕೆಂಪು ಸುಂದರಿಯ ಬೆಲೆಯಲ್ಲಿ 1000 ರೂಪಾಯಿ ಕುಸಿತ ಕಂಡಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿತ; ಎಷ್ಟು ಗೊತ್ತಾ?
06 Aug 2023 04:43 PM (IST)
Breaking News Today Live Updates: ನಾಳೆ ಸಿಎಂ, ನಾನು ಕೆಲ ಜಿಲ್ಲೆಗಳ ನಾಯಕರ ಸಭೆ
ನಾಳೆ ಸಚಿವರು, ಶಾಸಕರ ಜೊತೆ ಸಿಎಂ, ಡಿಸಿಎಂ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಸಿಎಂ, ನಾನು ಕೆಲ ಜಿಲ್ಲೆಗಳ ನಾಯಕರ ಸಭೆ ಮಾಡುತ್ತಿದ್ದೇವೆ. ಲೋಕಸಭಾ ಚುನಾವಣೆಗೆ ನಮ್ಮ ಕೆಲಸ ಪ್ರಾರಂಭ ಆಗಬೇಕಿದೆ. ಮಧ್ಯಾಹ್ನ ಅಲ್ಪಸಂಖ್ಯಾತ ಮುಖಂಡರ ಜತೆ ಸಭೆ ಮಾಡುತ್ತಿದ್ದೇವೆ. ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ಸಭೆ ನಡೆಯಲಿದೆ ಎಂದರು.
06 Aug 2023 04:30 PM (IST)
Breaking News Today Live Updates: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕುಸಿದ ಟೊಮ್ಯಾಟೋ ದರ
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ದರ ಕುಸಿದಿದೆ. ಕಳೆದ 2-3 ತಿಂಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದ ಟೊಮ್ಯಾಟೋ ದರ, ಇದೀಗ 15 ಕೆಜಿ ಟೊಮ್ಯಾಟೋ ಬಾಕ್ಸ್ ದರ 2700 ರೂ.ನಿಂದ 1500 ರೂ. ಆಗಿದೆ. ಕಳೆದ 4 ದಿನಗಳಲ್ಲಿ ಟೊಮ್ಯಾಟೋ ದರ ಅಂದಾಜು 1000 ರೂ. ಕುಸಿತವಾಗಿದೆ. ಕೋಲಾರ ಎಪಿಎಂಸಿಗೆ ಬೇರೆ ರಾಜ್ಯಗಳಿಂದ ಟೊಮ್ಯಾಟೋ ಪೂರೈಕೆ ಹಿನ್ನೆಲೆ ಇಂದು 15 ಕೆಜಿ ಟೊಮ್ಯಾಟೋ ಬಾಕ್ಸ್ 1500-1700 ರೂ.ಗೆ ಹರಾಜುಗೊಂಡಿದೆ.
06 Aug 2023 04:19 PM (IST)
Breaking News Today Live Updates: ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತ
ಕಾಂಗ್ರೆಸ್ಸಿಗರು ಆಶ್ವಾಸನೆ ಮೂಲಕವೇ ದೇಶವನ್ನು ಮುನ್ನಡೆಸಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ವಿಕಾಸದ ಯಾತ್ರೆ ನಡೆಯುತ್ತಿದೆ. ಆದರೆ ಕಾಂಗ್ರೆಸ್ನ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಶ್ರೀಲಂಕಾ, ಪಾಕಿಸ್ತಾನದಲ್ಲಿ ಏನಾಗಿದೆ ಎಂದು ನಾವು ನೋಡಿದ್ದೇವೆ. ಈ ದೇಶವನ್ನು ಸಿದ್ದರಾಮಯ್ಯ ಯಾವ ಕಡೆ ಕೊಂಡೊಯ್ಯುತ್ತಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ವಾಗ್ದಾಳಿ ಮಾಡಿದ್ದಾರೆ.
06 Aug 2023 03:53 PM (IST)
Breaking News Today Live Updates: ಗ್ಯಾರಂಟಿ ಹೆಸರಲ್ಲಿ ರಾಜಕಾರಣ
ಭಾಗ್ಯಗಳ ಹೆಸರಿನಲ್ಲಿ ಆಶ್ರಯ ಪಡೆದು ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯಾ, ನಾಚಿಕೆ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ವಾಗ್ದಾಳಿ ಮಾಡಿದ್ದಾರೆ.
06 Aug 2023 03:42 PM (IST)
Breaking News Today Live Updates: ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು
ಹಲವೆಡೆ ಇಂತಹ ಘಟನೆ ನಡೆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಸಿ.ಟಿ.ರವಿ ಹೇಳಿದರು. ಸಾವಿನ ಬಳಿಕ ಪರಿಹಾರ ಕೊಡುವುದು ಒಂದು ಭಾಗವಷ್ಟೇ. ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು ಎಂದಿದ್ದಾರೆ.
06 Aug 2023 03:22 PM (IST)
Breaking News Today Live Updates: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡಲಿಲ್ಲ
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡಲಿಲ್ಲ. ಮೊದಲು ಹೆಚ್ಚುವರಿ ಪೂರೈಸಲು ಬಿಜೆಪಿಯವರು ಕೇಂದ್ರಕ್ಕೆ ಹೇಳಿ ಎಂದು ‘ಗೃಹಜ್ಯೋತಿ’ ಉದ್ಘಾಟನಾ ಸಮಾರಂಭದಲ್ಲಿ ಮಲ್ಲಿಕಾರ್ಜುನ್ ಹೇಳಿದರು. ಕೊವಿಡ್ ಸಮಯದಲ್ಲೂ ಪ್ರಧಾನಿ ಯಾವುದೇ ಸಹಾಯ ಮಾಡಲಿಲ್ಲ. ನಾವು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ ಎಂದರು.
06 Aug 2023 02:57 PM (IST)
Breaking News Today Live Updates: ರಾಜ್ಯ ಸರ್ಕಾರ ವರ್ಗಾವಣೆ ದಂಧೆಗೆ ಇಳಿದಿದೆ
ರಾಜ್ಯ ಸರ್ಕಾರ ವರ್ಗಾವಣೆ ದಂಧೆಗೆ ಇಳಿದಿದೆ ಎಂದು ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ಗ್ಯಾರಂಟಿ ಕೊಡುವುದೇ ಸಾಕಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ. ರಸ್ತೆ, ಮೂಲಭೂತ ಸೌಲಭ್ಯಕ್ಕೆ ಇವರು ಹಣ ಕೊಡುವ ಖಚಿತತೆ ಇಲ್ಲ ಎಂದಿದ್ದಾರೆ.
06 Aug 2023 01:57 PM (IST)
Karnataka Breaking News Live: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ ಹಾಗೂ ಸೊಸೆ
ಬೆಂಗಳೂರು ಗ್ರಾ. ಜಿಲ್ಲೆ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ಬಳಿ ಆಸ್ತಿಗಾಗಿ ಸೊಸೆ ಹಾಗೂ ಮಗ ಸೇರಿಕೊಂಡು ಹೆತ್ತ ತಾಯಿಯನ್ನೇ ಹತ್ಯೆಗೈದಿದ್ದಾರೆ. ಏರ್ಪೋರ್ಟ್ ಪಕ್ಕದ 2 ಎಕರೆ ಜಮೀನಿಗಾಗಿ ತಾಯಿ ಜತೆ ಕಿರಿಕ್ ಮಾಡಿಕೊಂಡಿದ್ದ ಮಗ ನಿನ್ನೆ ತೋಟದ ಬಳಿ ತಾಯಿ ಚಿನ್ನಮ್ಮ(60)ಳನ್ನು ಬಂದಾಗ ಆಕೆಯನ್ನು ಹತ್ಯೆ ಮಾಡಿದ್ದಾನೆ. ಹಿರಿಯ ಮಗ ರಾಘವೇಂದ್ರ & ಸೊಸೆ ಸುಧಾಳಿಂದ ಚಿನ್ನಮ್ಮ ಕೊಲೆ ನಡೆದಿದೆ.
06 Aug 2023 01:54 PM (IST)
Karnataka Breaking News Live: ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ -ನಳಿನ್ ಕುಮಾರ್ ಕಟೀಲ್
ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. ವಿಧಾನಸಭೆ ಅಧಿವೇಶನ ವೇಳೆ ಸಮರ್ಥವಾದ ಹೋರಾಟ ಮಾಡಿದ್ದೇವೆ. ಪ್ರಜಾಪ್ರಭುತ್ವದ ಆಧಾರದಲ್ಲಿ ನಮ್ಮ ಶಾಸಕರು ಹೋರಾಟ ಮಾಡಿದ್ದಾರೆ. ಅವರನ್ನೇ ಸಸ್ಪೆಂಡ್ ಮಾಡುವಂಥ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಎಲ್ಲಾ ಅಂಕಿ ಅಂಶಗಳನ್ನು ನಾವು ರೆಡಿ ಮಾಡುತ್ತಿದ್ದೇವೆ. ಯಾವ ಸಂದರ್ಭದಲ್ಲಿ ಹೋರಾಟ ಮಾಡ್ಬೇಕು ಆಗ ಹೋರಾಟ ಮಾಡ್ತೀವಿ ಎಂದರು.
06 Aug 2023 01:38 PM (IST)
Karnataka Breaking News Live: ಶಾಸಕ ಎಂ.ಚಂದ್ರಪ್ಪ ಹೆಸರು ಬರೆದಿಟ್ಟು ಎಸ್ಡಿಎ ಆತ್ಮಹತ್ಯೆ
ಚಿತ್ರದುರ್ಗ ತಾಲೂಕಿನ ಜಾನಕಲ್ ಗ್ರಾಮದ ಬಳಿ ಉಪ್ಪರಿಗೇನಹಳ್ಳಿ ಗ್ರಾ.ಪಂ. ಎಸ್ಡಿಎ ತಿಪ್ಪೇಸ್ವಾಮಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಡೆತ್ನೋಟ್ನಲ್ಲಿ ಶಾಸಕ ಎಂ.ಚಂದ್ರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುಕುಳ ಆರೋಪ ಮಾಡಿ ಡೆತ್ನೋಟ್ನಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಇಒ ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ,ಲವ, ರಾಜಪ್ಪ ಹೆಸರು ಬರೆದಿಟ್ಟು ಎಸ್ಡಿಎ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
06 Aug 2023 01:21 PM (IST)
Karnataka Breaking News Live: ಕಾಂಗ್ರೆಸ್ನ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ -ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು
ಕರ್ನಾಟಕ ಮಾಡಲ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ಸಿಗರು ಆಶ್ವಾಸನೆ ಮೂಲಕವೇ ದೇಶವನ್ನು ಮುನ್ನಡೆಸಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ವಿಕಾಸದ ಯಾತ್ರೆ ನಡೆಯುತ್ತಿದೆ. ಆದ್ರೆ ಕಾಂಗ್ರೆಸ್ನ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಶ್ರೀಲಂಕಾ, ಪಾಕಿಸ್ತಾನದಲ್ಲಿ ಏನಾಗಿದೆ ಎಂದು ನಾವು ನೋಡಿದ್ದೇವೆ. ಈ ದೇಶವನ್ನು ಸಿದ್ದರಾಮಯ್ಯ ಯಾವ ಕಡೆ ಕೊಂಡೊಯ್ಯುತ್ತಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಪ್ರಶ್ನೆ ಮಾಡಿದರು.
06 Aug 2023 01:02 PM (IST)
Karnataka Breaking News Live: ಜೋಳದ ಬೆಳೆಗೆ ಕಳೆ ನಾಶಕ ಸಿಂಪಡಿಸಿದ ದುಷ್ಕರ್ಮಿಗಳು
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಂಸಾನಹಳ್ಳಿ ಗ್ರಾಮದಲ್ಲಿ ವಿಕುಮಾರ್ ಎಂಬುವರಿಗೆ ಸೇರಿದ ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳದ ಬೆಳೆಗೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿದ್ದಾರೆ. ಈ ಹಿನ್ನೆಲೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
06 Aug 2023 12:59 PM (IST)
Karnataka Breaking News Live: ಸಿದ್ದರಾಮಯ್ಯ ಸಮಾಜ ಒಡೆಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ -ಡಾ.ಅಶ್ವತ್ಥ್ ನಾರಾಯಣ
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭಾಗ್ಯಗಳ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಭಾಗ್ಯ ಪಡೆಯುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿರುವವರ ಬಗ್ಗೆ ಯಾಕೆ ಮಾತನಾಡಬೇಕು. ಸಿದ್ದರಾಮಯ್ಯ ಸಮಾಜ ಒಡೆಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ.ಇಂಥವರಿಂದ ಒಂದು ಒಳ್ಳೆಯ ಕೆಲಸವನ್ನು ಬಯಸಲು ಸಾಧ್ಯವಿಲ್ಲ. ದಿವಾಳಿಕರಣ ಸಿದ್ದರಾಮಯ್ಯ ಎಂದು ಡಾ.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.
06 Aug 2023 12:33 PM (IST)
Karnataka Breaking News Live: BBMP ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಮುಂದಾದ ಡಿಸಿಎಂ ಡಿಕೆ ಶಿವಕುಮಾರ್
BBMP ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಬಿಜೆಪಿ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಕಾಮಗಾರಿಗಳ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.
06 Aug 2023 12:14 PM (IST)
Karnataka Breaking News Live: ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ವಾಗ್ದಾಳಿ
ಸರ್ಕಾರದ ವಿರುದ್ಧ ಹೆಚ್ಡಿಕೆ ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಸಂಬಂಧಿಸಿ ಹೆಚ್.ಡಿ.ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದರು. ಹೆಚ್.ಡಿ.ಕುಮಾರಸ್ವಾಮಿ ಈಗಷ್ಟೇ ಪ್ರವಾಸ ಮುಗಿಸಿ ಬಂದಿದ್ದಾರೆ. ಅವರು ಸದನದಲ್ಲೂ ಪೆನ್ ಡ್ರೈವ್ ತೋರಿಸಿದ್ದರು. ಸದನಕ್ಕಿಂತ ದೊಡ್ಡ ವೇದಿಕೆ ಬೇರೆಯಿಲ್ಲ, ಅಲ್ಲೇ ಬಹಿರಂಗಗೊಳಿಸಿಲ್ಲ. ಹೆಚ್ಡಿಕೆ ಬಳಿ ಏನಾದರೂ ದಾಖಲೆಗಳಿದ್ದರೆ ಸರ್ಕಾರಕ್ಕೆ ಕೊಡಲಿ ಎಂದರು.
06 Aug 2023 11:46 AM (IST)
Karnataka Breaking News Live: ಚಿಕನ್ ಸೇವಿಸಿ ಜವಾಹರ್ ನವೋದಯ ವಿದ್ಯಾರ್ಥಿಗಳು ಅಸ್ವಸ್ಥ
ಚಿಕನ್ ಸೇವಿಸಿ ಫುಡ್ ಪಾಯ್ಸನ್ ಹಿನ್ನೆಲೆ ಜವಾಹರ್ ನವೋದಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆ ಆಂಧ್ರ ಪ್ರದೇಶದ ವೆಸ್ಟ್ ಗೋದಾವರಿ ಜಿಲ್ಲೆಯ ಪೆದವೇಗಿಗೆ ತೆರಳಿದ್ದ ರಾಜ್ಯದ ವಿವಿಧ ಜಿಲ್ಲೆಗಳ ನವೋದಯ ಶಾಲೆಯ ವಿದ್ಯಾರ್ಥಿಗಳು ಚಿಕನ್ ಸೇವಿಸಿ ಅಸ್ವಸ್ಥರಾಗಿದ್ದಾರೆ. ರಾಯಚೂರು, ಕೊಪ್ಪಳ, ಬೆಳಗಾವಿ, ಬಿಜಾಪುರ, ಬೆಂಗಳೂರು, ಮಡಿಕೇರಿ ಸೇರಿ ರಾಜ್ಯದ ವಿವಿಧ ಜಿಲ್ಲೆಯ ಮಕ್ಕಳು ಫುಡ್ ಪಾಯ್ಸನ್ ಆಗಿ ಆಸ್ಪತ್ರೆ ಸೇರಿದ್ದಾರೆ.
06 Aug 2023 11:42 AM (IST)
Karnataka Breaking News Live: ಬಹುಮಹಡಿ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಿಲ್ಡರ್
ಮಂಗಳೂರಿನ ಬೆಂದೂರುವೆಲ್ನಲ್ಲಿರುವ ಅಟ್ಲಾಂಟಿಕ್ ಅಪಾರ್ಟ್ಮೆಂಟ್ ನಿಂದ ಹಾರಿ ಬಿಲ್ಡರ್ ಮೋಹನ್ ಅಮೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ವಿವಿಧ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದ ಮೋಹನ್ ಅಮೀನ್ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
06 Aug 2023 11:35 AM (IST)
Karnataka Breaking News Live: ಸ್ಥಳಾಂತರಕ್ಕೆ ಸ್ಪಂದಿಸದ ಸಿಬ್ಬಂದಿ, ವಿದ್ಯುತ್ ಕಂಬದ ಜೊತೆಗೆಯೇ ಮನೆ ನಿರ್ಮಿಸಿದ ವ್ಯಕ್ತಿ
ಹಾಸನ: ಮನೆ ನಿರ್ಮಿಸಲು ವಿದ್ಯುತ್ ಕಂಬ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರೂ ವಿದ್ಯುತ್ ಇಲಾಖೆ ಸಿಬ್ಬಂದಿ ಮನವಿಗೆ ಸ್ಪಂದಿಸದ ಕಾರಣ ಅನಿವಾರ್ಯವಾಗಿ ವಿದ್ಯುತ್ ಕಂಬ ಸೇರಿಸಿ ಮನೆ ನಿರ್ಮಿಸಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಂಬ ತೆರವು ಮಾಡಿಲ್ಲ.
06 Aug 2023 11:23 AM (IST)
Karnataka Breaking News Live: ಮರದಿಂದ ಕೆಳಗೆ ಬಿದ್ದು ಗನ್ಮ್ಯಾನ್ ಸಾವು
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಾನ್ಬೈಲು ಗ್ರಾಮದಲ್ಲಿ ಮರದಿಂದ ಕೆಳಗೆ ಬಿದ್ದು ಗನ್ಮ್ಯಾನ್ ಲೋಕೇಶ್(40) ಸಾವನ್ನಪ್ಪಿದ್ದಾರೆ. ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್ಮ್ಯಾನ್ ಆಗಿದ್ದ ಲೋಕೇಶ್ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
06 Aug 2023 11:07 AM (IST)
Karnataka Breaking News Live: ಅಮೃತ್ ಭಾರತ ಸ್ಟೇಷನ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಈ ಪುನರಾಭಿವೃದ್ಧಿ ಕಾರ್ಯವನ್ನು ಮಾಡಲಾಗುತ್ತದೆ. ರಾಜ್ಯದ 13 ನಿಲ್ದಾಣಗಳ ಮೇಲ್ದರ್ಜೆಗೇರಿರುವ ಕಾಮಗಾರಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. 24 ಸಾವಿರ ಕೋಟಿ ವೆಚ್ಚದಲ್ಲಿ ದೇಶದ 508 ನಿಲ್ದಾಣಗಳು ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು ಮೂಲ ಸೌಕರ್ಯಗಳ ಅಭಿವೃದ್ಧಿ, ಮಹಾನಗರಗಳೊಂದಿಗೆ ಸಂಪರ್ಕ, ಚಿಲ್ಲರೆ ಮಾರಾಟ ಮಳಿಗೆ, ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಮಳಿಗೆ ಸ್ಥಾಪನೆ ಮಾಡಲಾಗುತ್ತದೆ.
06 Aug 2023 10:55 AM (IST)
Karnataka Breaking News Live: ಹೆಚ್ಡಿಕೆ ಆರೋಪಕ್ಕೆ ನಾನು ತಕ್ಕ ಉತ್ತರ ಕೊಡುತ್ತೇನೆ -ಡಿಕೆಶಿ
ಬಿಡಿಎ, ಬಿಬಿಎಂಪಿ ಅಕ್ರಮ ಬಗ್ಗೆ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಂಬಂಧಿಸಿ ಸದಾಶಿವನಗರದ ನಿವಾಸದ ಬಳಿ ಡಿಸಿಎಂ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಹೆಚ್ಡಿಕೆ ಕೇವಲ ಮಾಧ್ಯಮಗಳ ಜೊತೆ ಮಾತಾಡಿದರೆ ಸಾಲದು. ಪಾಪ ಪ್ರೈಮ್ ಮಿನಿಸ್ಟರ್ವರೆಗೂ ಅವರು ಮಾತನಾಡಿದ್ದಾರೆ. ಆರೋಪಕ್ಕೆ ನಾನು ತಕ್ಕ ಉತ್ತರ ಕೊಡುತ್ತೇನೆ ಎಂದರು.
06 Aug 2023 10:53 AM (IST)
Karnataka Breaking News Live: ಮನೆ ಮುಂದೆ ನಿಲ್ಲಿಸಿದ್ದ 5 ಬೈಕ್ಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಬೆಂಗಳೂರು ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮಿತಿಮೀರಿದೆ. ಮನೆ ಮುಂದೆ ನಿಲ್ಲಿಸಿದ್ದ 5 ಬೈಕ್ಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ವಸಂತನಗರದಲ್ಲಿ ನಸುಕಿನ ಜಾವ 5 ಗಂಟೆ ವೇಳೆಗೆ ಮೂವರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
06 Aug 2023 10:50 AM (IST)
Karnataka Breaking News Live: ಕೊಲೆ ಆರೋಪಿಗೆ ಪೊಲೀಸರಿಂದ ಗುಂಡೇಟು
ಬೆಂಗಳೂರು ನಗರ ಜಿಲ್ಲೆ ಆನೇಕಲ್ನ ಹೊಸೂರು ರಸ್ತೆಯಲ್ಲಿ ಕೊಲೆ ಆರೋಪಿ ಆಕಾಶ್(19) ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಳಗ್ಗೆ ಸ್ಥಳ ಮಹಜರಿಗೆ ಕರೆದೊಯ್ಯುವಾಗ ಪೊಲೀಸ್ ಸಿಬ್ಬಂದಿ ಮಣಿ ಮೇಲೆ ಹಲ್ಲೆಗೈದು ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆನೇಕಲ್ ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ಫೈರಿಂಗ್ ಮಾಡಿದ್ದಾರೆ.
06 Aug 2023 10:32 AM (IST)
Karnataka Breaking News Live: ಬ್ಯಾಟರಿ ಸ್ಫೋಟಗೊಂಡು ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಬ್ಯಾಟರಿ ಸ್ಫೋಟಗೊಂಡು ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿದೆ. 1 ವರ್ಷದ ಹಿಂದೆ ಬಸವರಾಜಪ್ಪ ಎಂಬುವವರು ಅಕಿನೋವ್ ಬೈಕ್ ಖರೀದಿಸಿದ್ದರು. ಓವರ್ ಹೀಟ್ನಿಂದಾಗಿ ಬೈಕ್ನ ಬ್ಯಾಟರಿ ಸ್ಫೋಟಗೊಂಡಿದೆ.
06 Aug 2023 10:30 AM (IST)
Karnataka Breaking News Live: ಜಮೀನು ವಿವಾದ, ‘ಕೈ’ ನಾಯಕಿ ಕುಟುಂಬಸ್ಥರ ಮೇಲೆ ಹಲ್ಲೆ
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೋಮರ್ಸಿಯಲ್ಲಿ ಜಮೀನು ವಿವಾದ ಹಿನ್ನೆಲೆ ‘ಕೈ’ ನಾಯಕಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ. ತಾಲೂಕು ಘಟಕದ ಕಾಂಗ್ರೆಸ್ ಅಧ್ಯಕ್ಷೆ ದ್ರಾಕ್ಷಾಯಣಿ ಪತಿ ಬಸನಗೌಡ ಮಾಲಿಪಾಟೀಲ್ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗೋಮರ್ಸಿ ಗ್ರಾಮದ ಬಳಿ ಬಸನಗೌಡ ಖಾಸಗಿ ಶಾಲೆ ನಡೆಸುತ್ತಿದ್ದು ಶಾಲೆ ಪಕ್ಕದಲ್ಲೇ ಜಮೀನು ಹೊಂದಿದ್ದ ಕಾಂತಾಗೌಡ ಹಾಗೂ ಇತರರು ಶಾಲೆ ಸುತ್ತಲೂ ಹಾಳಾಗಿದ್ದ ತಂತಿ ಬೇಲಿ ಸರಿಪಡಿಸುವ ವಿಚಾರಕ್ಕೆ ಹಲ್ಲೆ ನಡೆಸಿದ್ದಾರೆ. ಕಾಂತಾಗೌಡ, ಸಂಗಮೇಶ್, ಪಂಪಾಪತಿ ಸೇರಿ ಐವರಿಂದ ಹಲ್ಲೆ ಆರೋಪ ಕೇಳಿ ಬಂದಿದೆ.
06 Aug 2023 10:20 AM (IST)
Karnataka Breaking News Live: ಬಿಸಿ ಊಟದ ಅನ್ನಕ್ಕೆ ಕನ್ನ ಹಾಕಿದ ಕಳ್ಳರ ಗ್ಯಾಂಗ್
ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಬೇಲೂರು ಗ್ರಾಮದ ಶಾಲೆ ಬಿಸಿ ಊಟದ ಅನ್ನಕ್ಕೆ ಕಳ್ಳರ ಗ್ಯಾಂಗ್ ಕನ್ನ ಹಾಕಿದೆ. ಬೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಕಿಯ ಎರಡು ಚೀಲಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಕಳ್ಳರ ಕೈ ಚಳಕ ಶಾಲೆಯ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
06 Aug 2023 09:32 AM (IST)
Karnataka Breaking News Live: 780ಕ್ಕೂ ಹೆಚ್ಚು ಅಡಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು
ದಾವಣಗೆರೆ ತಾಲೂಕಿನ ಮುದಹದಡಿ ಗ್ರಾಮದಲ್ಲಿ 780ಕ್ಕೂ ಹೆಚ್ಚು ಅಡಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಹಳೆಯ ದ್ವೇಷಕ್ಕೆ ಒಂದು ಎಕರೆ ಪ್ರದೇಶದಲ್ಲಿನ ಅಡಕೆ ಮರಗಳು ನಾಶವಾಗಿವೆ. ಮುದಹದಡಿ ಗ್ರಾಮದ ರೈತ ಬೀರೇಶ್ಗೆ ಸೇರಿದ ಅಡಕೆ ತೋಟ ನಾಶವಾಗಿದೆ.
06 Aug 2023 08:58 AM (IST)
Karnataka Breaking News Live: ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿ ಹತ್ಯೆ
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿ ಹತ್ಯೆ ಮಾಡಲಾಗಿದೆ. ಊರಿನಲ್ಲಿ ಜನ ನೀಡಿದ ಆಹಾರವನ್ನ ಸೇವಿಸುತ್ತ ಜನರ ಪ್ರೀತಿ ಗಳಿಸಿದ್ದ ಕಾಡು ಹಂದಿಯನ್ನು ಜನ ಪಂಜುರ್ಲಿ ಎಂದು ಪೂಜೆ ಮಾಡುತ್ತಿದ್ದರು. ಕಾಂತಾರ ಸಿನಿಮಾ ನಂತರ ದೈವದ ಸ್ಥಾನ ಕೊಟ್ಟು ಕಾಡುಹಂದಿಯನ್ನ ಪೂಜಿಸುತ್ತಿದ್ದರು. ನಿನ್ನೆ ರಾತಿ ಯಾರೋ ದುಷ್ಕರ್ಮಿಗಳು ಕಾಡು ಹಂದಿ ಹತ್ಯ ಮಾಡಿದ್ದಾರೆ. ಕಾರವಾರ ಅರಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
06 Aug 2023 08:28 AM (IST)
Karnataka Breaking News Live: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ನೀರುಪಾಲು, ಓರ್ವರ ರಕ್ಷಣೆ
ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ನೀರುಪಾಲಾಗಿದ್ದಾರೆ. ಉಡುಪಿ ಜಿಲ್ಲೆ ಮಲ್ಪೆ ಬಳಿ ಓರ್ವ ಯುವತಿ ಮೃತಪಟ್ಟಿದ್ದು, ಇನ್ನೊಬ್ಬರ ರಕ್ಷಣೆ ಮಾಡಲಾಗಿದೆ. ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು. ಆಪತ್ಬಾಂಧವ ಸಿಬ್ಬಂದಿ ಈಶ್ವರನಿಂದ ಓರ್ವ ಯುವತಿಯ ರಕ್ಷಣೆ ಮಾಡಲಾಗಿದೆ. ಮಡಿಕೇರಿ ಮೂಲದ ಮಾನ್ಯ ಮೃತಪಟ್ಟಿದ್ದು ಆಸ್ಪತ್ರೆಯಲ್ಲಿ ಯಶಸ್ವಿನಿಗೆ ಚಿಕಿತ್ಸೆ ಮುಂದುವರೆದಿದೆ.
06 Aug 2023 08:26 AM (IST)
Karnataka Breaking News Live: ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಮುಸ್ಲಿಂ ನಾಯಕರ ಸಭೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಮುಸ್ಲಿಂ ನಾಯಕರ ಸಭೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಶಾಸಕರು, ಎಂಎಲ್ಸಿಗಳು, ಮಾಜಿ ಸಂಸದರು, KPCC ಪದಾಧಿಕಾರಿಗಳ ಜೊತೆ ಸಭೆ ನಡೆಯಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಿದ್ದಾರೆ.
06 Aug 2023 08:23 AM (IST)
Karnataka Breaking News Live: ಬಾಡಿಗೆ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದು ಕೋಟ್ಯಾಧಿಪತಿಯಾದ ರೈತ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನನದಿ ಗ್ರಾಮದಲ್ಲಿ ಬಾಡಿಗೆ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದ ರೈತ ಕೋಟ್ಯಾಧಿಪತಿಯಾಗಿದ್ದಾನೆ. ನನದಿಯಲ್ಲಿ ಕೆಂಪು ಸುಂದರಿ ಬೆಳೆದು ಕೋಟಿ ಸಂಪಾದನೆ ಮಾಡಿದ್ದಾನೆ. ನನದಿ ಗ್ರಾಮದಲ್ಲಿ 7 ಎಕರೆ ಜಮೀನು ಲೀಸ್ ಮೇಲೆ ಪಡೆದಿದ್ದ ಜಯಸಿಂಗಪುರದ ಸಾಗರ್ ಮಗದುಮ್ ಎಂಬ ರೈತ ಟೊಮೆಟೊ ಸಸಿ ನಾಟಿ ಮಾಡಿ ಭರ್ಜರಿ ಲಾಭ ಪಡೆದಿದ್ದಾನೆ.
06 Aug 2023 08:19 AM (IST)
Karnataka Breaking News Live: ಕವಾಡಿಗರಹಟ್ಟಿಗೆ ನಟ ಚೇತನ್ ಭೇಟಿ
ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ಇಂದು ಕವಾಡಿಗರಟ್ಟಿ ಬಡಾವಣೆಗೆ ನಟ ಚೇತನ್ ಭೇಟಿ ನೀಡಲಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಭೇಟಿಯಾಗಲಿದ್ದಾರೆ.
06 Aug 2023 08:17 AM (IST)
Karnataka Breaking News Live: 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ನಿರಂತರ ಅತ್ಯಾಚಾರ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಖಾಸಗಿ ಶಾಲೆಯ 33 ವರ್ಷದ ಶಿಕ್ಷಕ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಶಿಕ್ಷಕನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.
06 Aug 2023 08:12 AM (IST)
Karnataka Breaking News Live: ಭಾರತದ ಹಳೇ ರೈಲ್ವೆ ನಿಲ್ದಾಣಗಳಿಗೆ ಸಿಗಲಿದೆ ಹೈಟೆಕ್ ಸ್ಪರ್ಶ
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ 6 ಹಾಗೂ ಮೈಸೂರು ವಿಭಾಗದ 2 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಯ ರೈಲು ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲು ಚಾಲನೆ ನೀಡಲಿದ್ದಾರೆ.
06 Aug 2023 08:05 AM (IST)
Karnataka Breaking News Live: ಲಾಲ್ ಬಾಗ್ನಲ್ಲಿ ಭರ್ಜರಿ ಫ್ಲವರ್ ಶೋ, ನಿನ್ನೆ 27 ಸಾವಿರ ಮಂದಿ ಭೇಟಿ
ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುತ್ತಿರುವ 214 ನೇ ಫ್ಲವರ್ ಶೋ ಆಗಸ್ಟ್ 15 ರವರೆಗೂ ನಡೆಯಲಿದೆ. ನಿನ್ನೆ 27 ಸಾವಿರ ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು ಇಂದು 50 ಸಾವಿರಕ್ಕೂ ಹೆಚ್ಚು ಜನರು ಬರುವ ಸಾಧ್ಯತೆ ಇದೆ. 17 ಲಕ್ಷ ಸ್ವದೇಶಿ ಹೂಗಳಿಂದ ಲಾಲ್ ಬಾಗ್ ಫ್ಲವರ್ ಶೋ ಕಂಗೊಳಿಸುತ್ತಿದೆ.
06 Aug 2023 08:02 AM (IST)
Karnataka Breaking News Live: ಟ್ರಾಫಿಕ್ ಸಿಗ್ನಲ್ ಕಂಬ, ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದ ಲಾರಿ
ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಿಐಡಿ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಕಂಬಕ್ಕೆ ಅಪರಿಚಿತ ಲಾರಿ ಡಿಕ್ಕಿ ಹೊಡೆದಿದೆ. ಟ್ರಾಫಿಕ್ ಸಿಗ್ನಲ್ ಕಂಬ, ಪೊಲೀಸ್ ಚೌಕಿಗೆ ಲಾರಿ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಫುಟ್ಪಾತ್ನಲ್ಲಿದ್ದ ಕಂಬ ಕಿತ್ತು ಬಿದ್ದಿದೆ. ಡಿಕ್ಕಿ ಬಳಿಕ ಲಾರಿ ಸಮೇತ ಆರೋಪಿ ಚಾಲಕ ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ವಿಧಾನಸೌಧ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
06 Aug 2023 08:00 AM (IST)
Karnataka Breaking News Live: ನಾಳೆಯಿಂದ ಶಾಸಕರ ಜೊತೆ ಸಿಎಂ ಹಾಗೂ ಡಿಸಿಎಂ ಜಿಲ್ಲಾವಾರು ಸಭೆ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಾಳೆಯಿಂದ ಶಾಸಕರ ಜೊತೆ ಜಿಲ್ಲಾವಾರು ಸಭೆ ನಡೆಸಲಿದ್ದಾರೆ. ಇತ್ತೀಚೆಗೆ ನಡೆದಿದ್ದ ಸಿಎಲ್ಪಿ ಸಭೆಯಲ್ಲಿ ಸಚಿವರ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ಸಚಿವರು ಗೌರವ ಕೊಡ್ತಿಲ್ಲವೆಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ತಾವೇ ಖುದ್ದು ಅಹವಾಲು ಕೇಳುವುದಾಗಿ ಸಿಎಂ ಭರವಸೆ ನೀಡಿದ್ದರು. ಈ ಕಾರಣಕ್ಕಾಗಿ ನಾಳೆ ಬೆಳಗ್ಗೆ 11 ಗಂಟೆಯಿಂದ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ 3 ದಿನಗಳ ಕಾಲ ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮುಂದಾಗಿದ್ದಾರೆ. ಕಾಂಗ್ರೆಸ್ ಶಾಸಕರ ದೂರು, ಅಹವಾಲು ಆಲಿಸಲಿದ್ದಾರೆ. ಮೊದಲ ದಿನ 6 ಜಿಲ್ಲೆಗಳ 31 ಶಾಸಕರು ಹಾಗೂ ಸಚಿವರ ಜೊತೆ ಸಭೆ ನಡೆಸಲಿದ್ದಾರೆ.