ಇಸ್ಲಾಮಾಬಾದ್, ಜೂನ್ 8: ಜಗತ್ತಿನಾದ್ಯಂತ 71 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದೆ. ಯೂರೋಪ್ ದೇಶಗಳಲ್ಲಿ ಅಬ್ಬರಿಸಿದ್ದ ಕೊರೊನಾ ಈಗ ಏಷ್ಯಾ ರಾಷ್ಟ್ರಗಳಲ್ಲಿ ಭೀಕರತೆ ಸೃಷ್ಟಿಸಿದೆ.
ಏಷ್ಯಾ ಪೈಕಿ ಭಾರತದಲ್ಲಿ ಅತಿ ಹೆಚ್ಚು ವರದಿಯಾಗಿದೆ. ಭಾರತ ಬಿಟ್ಟರೆ ಇರಾನ್, ಟರ್ಕಿ, ಸೌದಿ ಅರೆಬಿಯಾ ಹಾಗೂ ಪಾಕಿಸ್ತಾನದಲ್ಲಿ ಹೆಚ್ಚು ಸೋಂಕು ವರದಿಯಾಗಿದೆ. ಪಾಕ್ ದೇಶದಲ್ಲಿ ನಿಧಾನವಾಗಿ ಕೊರೊನಾ ಬೇಟೆ ಶುರು ಮಾಡಿದೆ. ಹೊಸ ಕೇಸ್ಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಪ್ರಧಾನಿಯೊಬ್ಬರಿಗೆ ಕೊವಿಡ್ ಸೋಂಕು ತಗುಲಿದೆ. ವಿಶ್ವದ ಅತಿ ಹೆಚ್ಚು ಸೋಂಕು ಕಂಡಿರುವ ದೇಶಗಳ ಪಟ್ಟಿಯಲ್ಲೂ ಪಾಕಿಸ್ತಾನ ಮುಂದೆ ಸಾಗುತ್ತಿದೆ. ಅಷ್ಟಕ್ಕೂ, ಪಾಕ್ನಲ್ಲಿ ಒಟ್ಟು ಸೋಂಕು ಎಷ್ಟಾಗಿದೆ? ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಂದೆ ಓದಿ….
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಶಾಹಿದ್ ಖಾಕಾನ್ ಅಬ್ಬಾಸಿಗೆ ಕೊರೊನಾ ವೈರಸ್ ತಗುಲಿರುವುದು ಸೋಮವಾರ ದೃಢವಾಗಿದೆ. 2017 ರಿಂದ 2018ರವರೆಗೂ ಪಾಕ್ ಪ್ರಧಾನಿಯಾಗಿದ್ದ 61 ವರ್ಷದ ಶಾಹಿದ್ ಖಾಕಾನ್ ಅಬ್ಬಾಸಿಗೆ, ಸೋಂಕಿನ ಲಕ್ಷಣ ಗೋಚರವಾಗುತ್ತಿದ್ದಂತೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.