ಲಾಹೋರ್, ಜೂನ್ 13: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಈ ವಿಚಾರವನ್ನು ಸ್ವತಃ ಅಫ್ರಿದಿ ಶನಿವಾರ (ಜೂನ್ 13) ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ತಾನು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿ ಎಂದು ಅಫ್ರಿದಿ ಕೋರಿಕೊಂಡಿದ್ದಾರೆ.\
ಟ್ವೀಟ್ ಮಾಡಿರುವ ಮಾಜಿ ಆಲ್ ರೌಂಡರ್ ಅಫ್ರಿದಿ, ‘ಗುರುವಾರದಿಂದಲೂ ನನ್ನ ಆರೋಗ್ಯ ಸರಿಯಿಲ್ಲ. ನನ್ನ ದೇಹವು ಕೆಟ್ಟದಾಗಿ ನೋವು ಅನುಭವಿಸುತ್ತಿತ್ತು. ನಾನು ಪರೀಕ್ಷೆಗೊಳಗಾದೆ. ದುರದೃಷ್ಟವಾಗಿ ನನಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಶೀಘ್ರ ಗುಣಮುಖನಾಗಲು ನೀವು ಪ್ರಾರ್ಥಿಸಬೇಕಿದೆ, ಇನ್ಶ ಅಲ್ಲಾ’ ಎಂದು ಬರೆದುಕೊಂಡಿದ್ದಾರೆ.
ಮೇ ತಿಂಗಳಲ್ಲಿ ಶಾಹಿದ್ ಅಫ್ರಿದಿ ಹರಾಜಿನ ಮೂಲಕ ಬಾಂಗ್ಲಾದೇಶ ಕ್ರಿಕೆಟಿಗ ಮುಷ್ಫಿಕರ್ ರಹೀಮ್ ಅವರಿಂದ ಕ್ರಿಕೆಟ್ ಬ್ಯಾಟ್ ಖರೀದಿಸಿದ್ದರು. ಬಾಂಗ್ಲಾದಲ್ಲಿ ಕೊರೊನಾ ಸೋಂಕಿಗೆ ಪರಿಹಾರಾರ್ಥವಾಗಿ ರಹೀಮ್ ಕ್ರಿಕೆಟ್ ಬ್ಯಾಟನ್ನು ಹರಾಜಿಗಿಟ್ಟಿದ್ದರು. ಈಗ ಸ್ವತಃ ಅಫ್ರಿದಿಯೇ ಸೋಂಕಿಗೆ ತುತ್ತಾಗಿದ್ದಾರೆ.