ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಬುಧವಾರ ಪಿಸಿಬಿ ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ 35 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂ ನಾಯಕನಾಗಿದ್ದರೆ ಉಪನಾಯಕನಾಗಿ ಟೆಸ್ಟ್ ತಂಡದ ಉಪನಾಯಕನಾಗಿ ಮೊಹಮ್ಮದ್ ರಿಜ್ವಾನ್ ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ ತಂಡ 2 ಟೆಸ್ಟ್ ಪಂದ್ಯಗಳ ಸರಣಿ ಹಾಗೂ 3 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನವೆಂಬರ್ 23ರಂದು ಪಾಕಿಸ್ತಾನ ಈ ಸರಣಿಗಾಗಿ ನ್ಯೂಜಿಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 18ರಿಂದ ಟಿ20 ಸರಣಿಯ ಮೂಲಕ ಟೂರ್ನಿಗೆ ಚಾಲನೆ ದೊರೆಯಲಿದೆ.
ಬಾಬರ್ ಅಜಂ ನೇತೃತ್ವದ ಈ ತಂಡದಲ್ಲಿ 6 ಆರಂಭಿಕ ಆಟಗಾರರು, 11 ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು 3 ವಿಕೆಟ್ ಕೀಪರ್ಗಳು, 5 ಸ್ಪಿನ್ನರ್ಗಳು ಹಾಗೂ 10 ವೇಗಿಗಳನ್ನು ಆಯ್ಕೆ ಮಾಡಿದ್ದು ಈ ತಂಡ ನ್ಯೂಜಿಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಪಾಕ್ 35 ಸದಸ್ಯರ ತಂಡ ಹೀಗಿದೆ: ಅಬಿದ್ ಅಲಿ, ಅಬ್ದುಲ್ಲಾ ಶಫಿಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಝೀಶಾನ್ ಮಲಿಕ್, ಬಾಬರ್ ಅಜಮ್ (ನಾಯಕ), ಅಜರ್ ಅಲಿ, ಡ್ಯಾನಿಶ್ ಅಜೀಜ್, ಫವಾದ್ ಆಲಮ್, ಹೈದರ್ ಅಲಿ, ಹರಿಸ್ ಸೊಹೈಲ್, ಹುಸೇನ್ ತಲಾತ್, ಇಮ್ರಾನ್ ಬಟ್, ಇಫ್ತಿಖರ್ ಅಹ್ಮದ್ , ಖುಷ್ದಿಲ್ ಷಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ರಿಜ್ವಾನ್, ರೋಹೈಲ್ ನಜೀರ್, ಸರ್ಫರಾಜ್ ಅಹ್ಮದ್, ಇಮದ್ ವಾಸಿಮ್, ಶಾದಾಬ್ ಖಾನ್, ಉಸ್ಮಾನ್ ಖಾದಿರ್, ಯಾಸಿರ್ ಷಾ, ಜಾಫರ್ ಗೋಹರ್, ಅಮದ್ ಬಟ್, ಫಹೀಮ್ ಅಶ್ರಫ್, ಹರಿಸ್ ರವೂಫ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಹಸ್ನೈನ್, ಮೂಸಾ ಖಾನ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಸೊಹೈಲ್ ಖಾನ್, ವಹಾಬ್ ರಿಯಾಜ್