Ultimate magazine theme for WordPress.

2017ರಲ್ಲಿ ಅಮೆರಿಕದಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ ಭಾರತೀಯರ ಸಂಖ್ಯೆ 7 ಸಾವಿರಕ್ಕೂ ಅಧಿಕ ಮಂದಿ: ವಿಶ್ವಸಂಸ್ಥೆ ವರದಿ

5,951

ಯುನೈಟೆಡ್ ನೇಷನ್: ಕಳೆದ ವರ್ಷ ಅಮೆರಿಕದಲ್ಲಿ ಆಶ್ರಯ ಕಲ್ಪಿಸುವಂತೆ ಕೋರಿ 7 ಸಾವಿರಕ್ಕೂ ಅಧಿಕ ಭಾರತೀಯರು ಅರ್ಜಿ ಸಲ್ಲಿಸಿದ್ದಾರೆ ಎಂದು ವಿಶ್ವಸಂಸ್ಥೆ ನಿರಾಶ್ರಿತರ ಸಂಸ್ಥೆ ವರದಿ ಹೇಳಿದೆ. 2017ರಲ್ಲಿ ಆಶ್ರಯ ಕೋರಿ ಬಂದ ಅರ್ಜಿಗಳು ಅಮೆರಿಕಾ ಸಂಯುಕ್ತ ಸಂಸ್ಥಾನ ರಾಷ್ಟ್ರಕ್ಕೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ.ಇಂದು ವಿಶ್ವ ನಿರಾಶ್ರಿತರ ದಿನ ಹಿನ್ನಲೆಯಲ್ಲಿ ವಿಶ್ವಸಂಸ್ಥೆ ವರದಿ ಹೊರಬಿದ್ದಿದೆ.

2017ರ ಕೊನೆಯ ಹೊತ್ತಿಗೆ 68.5 ದಶಲಕ್ಷ ಜನರಿಗೆ ಆಶ್ರಯವನ್ನು ವಿವಿಧ ದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಾರ್ಷಿಕ ಗ್ಲೋಬಲ್ ಟ್ರೆಂಡ್ಸ್ ವರದಿಯಲ್ಲಿ ತಿಳಿದುಬಂದಿದೆ ಎಂದು ವಿಶ್ವಸಂಸ್ಥೆ ನಿರಾಶ್ರಿತ ಸಂಸ್ಥೆ ಹೇಳಿದೆ.

ಇವರಲ್ಲಿ ಸುಮಾರು 16.2 ದಶಲಕ್ಷ ಮಂದಿಗೆ 2017ರಲ್ಲಿ ಸ್ಥಳಾಂತರವನ್ನು ಮೊದಲ ಬಾರಿಗೆ ಅಥವಾ ಪುನರಾವರ್ತಿಯಾಗಿ ಕಲ್ಪಿಸಲಾಗಿದೆ. ಪ್ರತಿವರ್ಷ ಸುಮಾರು 44,500 ಮಂದಿಯನ್ನು ಪ್ರತಿದಿನ ಅಥವಾ ಪ್ರತಿ ಸೆಕೆಂಡ್ ಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ವಿಶ್ವಾದ್ಯಂತ ಯುದ್ಧ, ಹಿಂಸಾಚಾರ ಅಥವಾ ಶೋಷಣೆಯಿಂದಾಗಿ ಜನರು ವಲಸೆ ಹೋಗುವುದು ಇಲ್ಲವೇ ಸ್ಥಳಾಂತರಗೊಳ್ಳುತ್ತಿದ್ದಾರೆ.

ಕಾಂಗೊದ ಡೆಮಾಕ್ರಟಿಕ್ ರಿಪಬ್ಲಿಕ್, ದಕ್ಷಿಣ ಸೂಡಾನ್ ನ ಯುದ್ಧದಿಂದಾಗಿ ಮತ್ತು ಮ್ಯಾನ್ಮಾರ್ ದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಾಂಗ್ಲಾದೇಶಕ್ಕೆ ವಲಸೆ ಹೋಗುತ್ತಿದ್ದಾರೆ.

ಇದರಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. 2017ರ ಕೊನೆಯ ಹೊತ್ತಿಗೆ ಭಾರತದಿಂದ ವಿವಿಧ ಕಾರಣಗಳಿಗೆ ಬೇರೆ ದೇಶಗಳಿಗೆ ಹೋಗಬೇಕೆಂದು ಬಯಸಿದವರಲ್ಲಿ 1,97,146 ಮಂದಿ ನಿರಾಶ್ರಿತರಿದ್ದು ಅವರಲ್ಲಿ 10,519 ಅರ್ಜಿಗಳು ಬಾಕಿ ಉಳಿದಿವೆ.

Leave A Reply

Your email address will not be published.