Ultimate magazine theme for WordPress.

Nirmala Sitharaman: ಇಂದು ಸಂಜೆ 4 ಗಂಟೆಗೆ ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ವಿವರ

0

ನವ ದೆಹಲಿ (ಮೇ 13); ಸುದೀರ್ಘ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು ಇದರ ಚೇತರಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 20 ಲಕ್ಷ ಕೋಟಿ ಮೌಲ್ಯದ ಎರಡನೇ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಈ ಪ್ಯಾಕೇಜಿನ ಮಾಹಿತಿಯನ್ನು ಇಂದು ಸಂಜೆ 4 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ.

ನಿನ್ನೆ ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ, ಭಾರತದ ಜಿಡಿಪಿಯ ಶೇಕಡಾ 10 ರಷ್ಟು ಅಂದರೆ 20 ಲಕ್ಷ ಕೋಟಿ ರೂ.ಗಳನ್ನು ಆರ್ಥಿಕ ಮತ್ತು ವಿತ್ತೀಯ ಕ್ರಮಗಳಲ್ಲಿ 50 ದಿನಗಳ ಕೊರೋನಾ ಲಾಕ್‌ಡೌನ್‌ನಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ಬೆಂಬಲಿಸಲು ಘೋಷಿಸಿದರು.

ಈ ಪ್ಯಾಕೇಜ್‌ನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶವು ಲಾಕ್‌ಡೌನ್‌ಗೆ ಮೊರೆಹೋದ ಕೆಲವು ದಿನಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಘೋಷಿಸಿದ್ದ 1.74 ಲಕ್ಷ ಕೋಟಿ ರೂ.ಗಳ ನಿಧಿಯನ್ನು ಒಳಗೊಂಡಿದೆ.

Leave A Reply

Your email address will not be published.