EBM News Kannada
Leading News Portal in Kannada

ಬಡವರ ಹಸಿವು ನೀಗಿಸುತ್ತಿದ್ದಾರೆ ಸುರಪುರ ಶಾಸಕ ರಾಜುಗೌಡ!

0

ಯಾದಗಿರಿ (ಏ.26):ಲಾಕ್ ಡೌನ್ ನಿಂದ ಕಂಗಲಾದ ಬಡವರ ಹಾಗೂ ಕಾರ್ಮಿಕರ ಹಸಿವು ನಿಗಿಸುವ ಕಾರ್ಯ ಸುರಪುರ ಶಾಸಕ ರಾಜುಗೌಡ ಮಾಡುತ್ತಿದ್ದಾರೆ. ಶಾಸಕ ರಾಜುಗೌಡ ಅವರು ಪಕ್ಷಬೇಧ ಮರೆತು ಹಸಿದ ಜನರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಸುರಪುರ ಶಾಸಕ ರಾಜುಗೌಡ ಸೇವಾ ಸಮಿತಿ ಮೂಲಕ 300 ಕ್ಕು ಹೆಚ್ಚು ಯುವ ಪಡೆ ನಿತ್ಯವು ಕೆಲಸ ಮಾಡುತ್ತಿದೆ. ಕಳೆದ ಒಂದು ತಿಂಗಳಿನಿಂದ ಸುರಪುರ ಕ್ಷೇತ್ರದ ಹಳ್ಳಿ ಹಳ್ಳಿಗೆ ತೆರಳಿ ಅನ್ನದಾನ ಪುಣ್ಯದ ಕಾರ್ಯ ಮಾಡಲಾಗುತ್ತಿದೆ.

ಯಾದಗಿರಿ ಜಿಲ್ಲೆಯ ವಿವಿಧೆಡೆಯಿಂದ ಕೂಲಿ‌ ಕೆಲಸ ಅರಸಿ ವಲಸೆ ಹೋದ ಕಾರ್ಮಿಕರು ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ ಶಿವಮೊಗ್ಗ, ಹಾಸನ ಮೊದಲಾದ ಕಡೆ ಲಾಕ್ ಡೌನ್ ನಿಂದ ಸಿಲುಕಿದ್ದಾರೆ.ಇಂತಹ ಸಂದರ್ಭದಲ್ಲಿ ಹಸಿವಿನಿಂದ ಬಳಲುತ್ತಿದ್ದ ಕಾರ್ಮಿಕರು ಸುರಪುರ ಶಾಸಕ ರಾಜುಗೌಡ ಅವರಲ್ಲಿ ಸಹಾಯಕ್ಕಾಗಿ ಅಂಗಲಾಚಿದ್ರು ಬಡವರ ಹಸಿವಿನ ನೋವು ಅರಿತು ನೆರೆ ರಾಜ್ಯ ,ನೆರೆ ಜಿಲ್ಲೆಯಲ್ಲಿ ಸಿಲುಕಿದ ಕಾರ್ಮಿಕರಲ್ಲಿ ಆಹಾರ ಧಾನ್ಯ ತಲುಪಿಸಿ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ.

ಸುರಪುರ ಕ್ಷೇತ್ರದ ಜೊತೆ ಜಿಲ್ಲೆಯ ಯಾವುದೇ ಗ್ರಾಮದ ಜನರು ಆಹಾರ ಧಾನ್ಯಕ್ಕಾಗಿ ಸಹಾಯ ಕೇಳಿದರೆ ಅಲ್ಲಿ ಕೂಡ ಹೋಗಿ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಸುರಪುರ ಶಾಸಕ ರಾಜುಗೌಡ ಅವರು ಮಾತನಾಡಿ,ನಮ್ಮ ತಾಯಿ ತಿಮ್ಮಮ್ಮ ಗೌಡತಿ ಅವರು ಬಡವರ ಕಾಳಜಿ ತೊರಿ ಹಸಿವು ನಿಗಿಸುವ ಕಾರ್ಯ ಮಾಡುತ್ತಿದ್ದರು ಯಾರು ಸಂಕಷ್ಟದಲ್ಲಿದ್ದಾರೆ ಅವರಿಗೆ ಸಹಾಯ ಮಾಡುತ್ತಿದ್ದರು ಈಗ ಅವರ ಪ್ರೇರಣೆಯಿಂದ ನಾನು ಈ ಕೆಲಸ ಮಾಡುತ್ತಿದ್ದೆನೆಂದು ಹೆತ್ತಮ್ಮನನ್ನು ರಾಜುಗೌಡ ಸ್ಮರಣೆ ಮಾಡಿದರು.

Leave A Reply

Your email address will not be published.