EBM News Kannada
Leading News Portal in Kannada

Basava Jayanthi: ಬಸವಣ್ಣನವರ ಅನುಭವ ಮಂಟಪ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾವಾಗಿದೆ; ಸಿಎಂ ಯಡಿಯೂರಪ್ಪ

0

ಬೆಂಗಳೂರು (ಏ.26): ಬಸವ ಜಯಂತಿ ‌ಪ್ರಯುಕ್ತ ಬೆಂಗಳೂರು ಬಸವ ಸಮಿತಿ ವತಿಯಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮಾಲಾರ್ಪಣೆ ಮಾಡಿದರು. ಈ ವೇಳೆ ವಿಜಯಪುರದಲ್ಲಿರುವ ಬಸವಣ್ಣನವರ ಅನುಭವ ಮಂಟಪದ‌ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾವಾಗಿದೆ ಸ್ಪಷ್ಟಪಡಿಸಿದರು.

ಬಸವ ಜಯಂತಿ ಕಾರ್ಯಕ್ರಮಕ್ಕೆ ಆಚರಣೆಯಲ್ಲಿ ಬಿಎಸ್​ವೈ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್​ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಬಿಎಸ್​ವೈ, “ಬಸವ ಜಯಂತಿಯನ್ನು ಇಂದು ಅದ್ದೂರಿಯಾಗಿ ಆಚರಣೆ ಮಾಡಲು ಆಗುತ್ತಿಲ್ಲ. ಕಾರಣ ಗೊತ್ತೇ ಇದೆ. ಬಸವಣ್ಣನವರು ತಮ್ಮ ಸರಳ ವಚನಗಳ ಮೂಲಕ ಕಾಯಕ ತತ್ವ, ದಾಸೋಹ, ಸಮಾನತೆ ತತ್ವಗಳನ್ನು ಜಗತ್ತಿಗೆ ಸಾರಿವದರು,” ಎಂದರು.

“ಪ್ರಪಂಚದ ಸಾಹಿತ್ಯಕ್ಕೆ ವಚನ ಸಾಹಿತ್ಯ ಶರಣರ ಶ್ರೇಷ್ಠ ಕೊಡುಗೆ. ಬಸವಣ್ಣನವರ ತತ್ವಗಳನ್ನು ಸ್ವಲ್ಪವಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ. ಸರ್ಕಾರ ಬಸವಣ್ಣನವರ ಅನುಭವ ಮಂಟಪದ‌ ಪುನಶ್ಚೇತನಕ್ಕೆ ಬದ್ಧವಾವಾಗಿದೆ. ಈಗಾಗಲೇ ಬಜೆಟ್ ನಲ್ಲಿ ಇದಕ್ಕೆ ಅನುದಾನ ಮೀಸಲಿಟ್ಟಿದ್ದೇವೆ,” ಎಂದು ಬಿಎಸ್​ವೈ ಹೇಳಿದರು.

ಟ್ವೀಟ್​ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಬಸವಣ್ಣನವರನ್ನು ನೆನೆದಿದ್ದು, ಬಸವ ಜಯಂತಿಯ ಶುಭಕೋರಿದ್ದಾರೆ.

Leave A Reply

Your email address will not be published.