EBM News Kannada
Leading News Portal in Kannada

ಕೋವಿಡ್​​-19 ಲಾಕ್​ಡೌನ್​​: ನಂದಿನಿ ಮಳಿಗೆಗಳ ಪಕ್ಕದಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ರೈತರಿಗೆ ಅವಕಾಶ

0

ಬೆಂಗಳೂರು(ಏ.26): ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಮತ್ತೊಂದು ಮಹತ್ವದ ಯೋಜನೆ ರೂಪಿಸಲಾಗಿದೆ. ಹಣ್ಣು , ತರಕಾರಿ ಮಾರಾಟ ಮಾಡಲು ಆಗದೆ ತೊಂದರೆಗೀಡಾಗಿದ್ದ ರೈತರಿಗೆ ಇದು ಅನುಕೂಲ ಆಗಲಿದೆ. ಸಾಕಷ್ಟು ರೈತರು ಸ್ವತಃ ತಾವೇ ಹಣ್ಣು, ತರಕಾರಿ ಮಾರಾಟ ಮಾಡುತ್ತೇವೆ, ಆದರೆ ಸ್ಥಳಾವಕಾಶ ಇಲ್ಲ ಎಂದು ಸಾಕಷ್ಟುಬಾರಿ ಮನವಿ ಮಾಡಿದ್ದರು.

ಹಾಗಾಗಿ ನಂದಿನಿ ಮಳಿಗೆಗಳ ಪಕ್ಕದಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಅದರಂತೆ ತೋಟಗಾರಿಕೆ ಇಲಾಖೆಯಿಂದ ಕೆಎಂಎಫ್​​ಗೆ ಮನವಿ ಮಾಡಲಾಗಿತ್ತು. ಇದೀಗ ಮನವಿಗೆ ಸ್ಪಂದಿಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ನಂದಿನಿ ಮಳಿಗೆಗಳ ಬಳಿ ಹಣ್ಣು, ತರಕಾರಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಇನ್ನು, ಕೆಲವು ನಂದಿನಿ ಮಳಿಗೆ ಪಕ್ಕದಲ್ಲಿ ಹಾಫ್ ಕಾಮ್ಸ್ ಮಳಿಗೆ ಇದೆ. ಅಂತಹ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯಾದ್ಯಂತ ಕೆಎಂಎಫ್​​ ಹಾಗೂ 14 ಜಿಲ್ಲಾ ಹಾಲು ಒಕ್ಕೂಟ ಸೇರಿ 1500 ಕ್ಕಿಂತ ಹೆಚ್ಚು ಮಳಿಗೆಗಳಿವೆ. ರೈತರು ಈ ಸ್ಥಳಗಳಲ್ಲಿ ಹಣ್ಣು, ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಬಹುದಾಗಿದೆ.

Leave A Reply

Your email address will not be published.