ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷಗಳನ್ನ ಸಂಘಟಿಸಲು ಸಿದ್ದರಾಮಯ್ಯಗೆ ಹೆಚ್.ಡಿ. ರೇವಣ್ಣ ಮನವಿ
ಹಾಸನ: ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇನ್ನೂ ಮೂರ್ನಾಲ್ಕು ದಿನಗಳ ನಂತರ ಜೆಡಿಎಸ್ನಿಂದ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಎಲ್ಲಾ ವಿಪಕ್ಷಗಳನ್ನೂ ಒಗ್ಗೂಡಿಸಬೇಕೆಂದು ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡರು.
ಸಿದ್ದರಾಮಯ್ಯರವರೇ ನಿಮಗೂ ಹೆಚ್.ಡಿ. ಕುಮಾರಸ್ವಾಮಿಗೂ ಮತ್ತು ಹೆಚ್.ಡಿ. ರೇವಣ್ಣನಿಗೂ ವೈರತ್ವ ಇದೆ ಎಂದಾದರೂ ಅದನ್ನು ಆಮೇಲೆ ನೋಡಿಕೊಳ್ಳೋಣ. ಈಗ ನೀವು ಕುಮಾರಸ್ವಾಮಿ ಹಾಗೂ ಬೇರೆ ವಿಪಕ್ಷ ನಾಯಕರನ್ನು ಕರೆಸಿ ಮಾತನಾಡಿ ಹೋರಾಟ ಮಾಡಿ ಎಂದು ಹೊಳೆನರಸೀಪುರ ಶಾಸಕರೂ ಆದ ರೇವಣ್ಣ ಕೋರಿಕೊಂಡರು.
ಸಿಎಂ ನಿಧಿಗೆ ಸಾರ್ವಜನಿಕರಿಂದ ಬಂದಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಸವಾಲು ಹಾಕಿದ ಹೆಚ್.ಡಿ. ರೇವಣ್ಣ, ರೈತರ ಸಮಸ್ಯೆ ಆಲಿಸಲಿದ್ದರೆ ಸರ್ಕಾರದ ವಿರುದ್ದ ಜೆಡಿಎಸ್ನಿಂದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮುಸ್ಲಿಮರಿಗೆ ಭಾರತ ಸ್ವರ್ಗ; ಇದು ಯಾಕೆ ಇವರಿಗೆ ಕಾಣುತ್ತಿಲ್ಲ?: ಒಐಸಿ ವಿರುದ್ಧ ನಖ್ವಿ ಕಿಡಿ
ಸಿದ್ದರಾಮಯ್ಯರಿಗೂ ನಾನೇ ಫೋನ್ ಮಾಡುತ್ತೇನೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯರವರೇ ಎಲ್ಲಾ ವಿಪಕ್ಷದವರನ್ನ ಕರೆದು ಸಭೆ ಮಾಡಲಿ. ನಾವೆಲ್ಲಾ ಹೋರಾಟ ಮಾಡೋಣ. ರೈತ್ರ ಸಮಸ್ಯೆ ಆಲಿಸದಿದ್ದರೆ ಸಿಎಂ ವಿರುದ್ದ ಉಗ್ರ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳೇ ನೀವು ವಿಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಬೇಡಿ. ಜನರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಕುಮಾರಸ್ವಾಮಿ ಈ ಹಿಂದೆ ಮಾಡಿದ್ದ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ ಎಂದು ಬಿಎಸ್ವೈ ವಿರುದ್ದ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಂದ ನಿತ್ಯ 10 ಲಕ್ಷ ಮೌಲ್ಯದ ತರಕಾರಿ ಖರೀದಿಸುತ್ತಿರುವ ರೇವಣ್ಣ:
ನೀವು ರೈತರ ಸಮಸ್ಯೆ ಬಗ್ಗೆ ಗಮನಹರಿಸಿ. ಸುಮ್ನೆ ಸುಳ್ಳು ಹೇಳಿಕೊಂಡು ಕಾಲ ಕಳೆಯಬೇಡಿ. ಕರೋನಾ ಲಾಕ್ ಡೌನ್ ಆಗಿ 29 ದಿನಕಳೆಯಿತು. ರೈತರ ಸಮಸ್ಯೆ ಬಗೆಹರಿಸಿಲ್ಲಾ. ನಾನೇ ಖುದ್ದಾಗಿ ಸಿಎಂ ಭೇಟಿಯಾಗಿ ರೈತರ ಸಮಸ್ಯೆಯನ್ನ ಗಮನಕ್ಕೆ ತಂದಿದ್ದೇನೆ. ರೈತರ ವಸ್ತುಗಳನ್ನ ಖರೀದಿಸುವವರೇ ಇಲ್ಲಾ . ನಾನೇ ರೈತರಿಂದ 25 ಟನ್ ತರಕಾರಿಯನ್ನ ಖರೀದಿಸಿ ಜನರಿಗೆ ಕಡಿಮೆ ದರದಲ್ಲಿ ತರಕಾರಿ ಹಂಚಿಸಿದ್ದೇನೆ ಎಂದರು.ಇದನ್ನೂ ಓದಿ: ಏಪ್ರಿಲ್ 30ರವರೆಗೂ ಬಡವರಿಗೆ ಉಚಿತ ಹಾಲು ವಿತರಣೆ – ರಾಜ್ಯ ಸರ್ಕಾರ
ಪ್ರತೀ ಲೀಟರ್ಗೆ 80 ರೂಪಾಯಿ ಇದ್ದ ಅಡುಗೆ ಎಣ್ಣೆಯನ್ನು 130 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ನಾನೇ ಮಂಗಳೂರಿನಿಂದ 5 ಲೋಡ್ ಅಡುಗೆ ಎಣ್ಣೆ ತರಿಸುತ್ತಿದ್ದೇನೆ. ಪ್ರತೀದಿನ ನಾನು 10 ಲಕ್ಷ ಮೌಲ್ಯದ ತರಕಾರಿ ಖರೀದಿಸುತ್ತಿದ್ದೇನೆ. ಈ ತರಕಾರಿಯನ್ನ ಜನ್ರಿಗೆ ಹಂಚುತ್ತಿದ್ದೇನೆ ಎಂದರು.
ಅಬಕಾರಿ ಅಧಿಕಾರಿಗಳಿಂದಲೇ ಮದ್ಯ ಕಳ್ಳತನ?
ಅಬಕಾರಿ ಅಧಿಕಾರಿಗಳೇ ಮದ್ಯದಂಗಡಿ ಕಳ್ಳತನ ಮಾಡಿಸುತ್ತಿದ್ದಾರೆ. ಚನ್ನರಾಯಪಟ್ಟಣ ಅಬಕಾರಿ ಮಹಿಳಾ ಅಧಿಕಾರಿಯೇ ಎಣ್ಣೆ ಮಾರಿಸುತ್ತಿದ್ದಾರಂತೆ. ಹೊಳೆನರಸೀಪುರದಲ್ಲೂ ಇದೇ ಪರಿಸ್ಥಿತಿ ಇದೆ. ಇವರ ಬಗ್ಗೆ ಅಬಕಾರಿ ಡಿಸಿ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಆಗ್ರಹಿಸಿದರು.