EBM News Kannada
Leading News Portal in Kannada

ರಾಜ್ಯದಲ್ಲಿ ಕೊರೋನಾ ವೈರಸ್ ಸದ್ಯದ ಪರಿಸ್ಥಿತಿ ಇದ್ದುದರಲ್ಲಿ ಆಶಾದಾಯಕವಾಗಿದೆ

0

ಬೆಂಗಳೂರು: ಮಾರಕ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರುಡತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದ್ದುದ್ದರಲ್ಲಿ ರಾಜ್ಯದ ಸ್ಥಿತಿಗತಿ ಆಶಾದಾಯಕವಾಗಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹ ನಿರ್ದೇಶಕ ಡಾ. ಬಿ.ಜಿ. ಪ್ರಕಾಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಬಿ.ಜಿ.ಪ್ರಕಾಶ್ ಕುಮಾರ್ ಅವರು, ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗುತ್ತಿಲ್ಲ. ರೋಗಿಗಳ ಸಂಪರ್ಕಕ್ಕೆ ಬಂದವರಷ್ಟೇ ಈಗ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಸದ್ಯ ಪ್ರಕರಣಗಳನ್ನು ಫಿಲ್ಟರ್ ಮಾಡುತ್ತಿದ್ದೇವೆ. ಇದು ಬಿಟ್ಟರೆ ಹೊಸ ಪ್ರಕರಣಗಳು ವರದಿಯಾಗುತ್ತಿಲ್ಲ ಎಂದು ಹೇಳಿದರು.

ಹೈ ರಿಸ್ಕ್ ಮತ್ತು ಲೋ ರಿಸ್ಕ್ ಕೇಸ್​ಗಳಲ್ಲಿ ಪಾಸಿಟಿವ್ ಕಂಡುಬರುತ್ತಿದೆ. ಎಲ್ಲಾ ರೋಗಿಗಳನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿದ್ದೇವೆ. ಎಲ್ಲಾ ರೋಗಿಗಳ ಹೈ ರಿಸ್ಕ್, ಲೋ ರಿಸ್ಕ್ ಕಾಂಟ್ಯಾಕ್ಟ್ ಎರಡರಲ್ಲೂ ಪಾಸಿಟಿವ್ ನೋಡ್ತಿದ್ದೀವಿ. ನಿಧಾನಕ್ಕೆ ಎಲ್ಲವೂ ಹತೋಟಿಗೆ ಬರಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈವರೆಗೂ 371 ಜನರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈವರೆಗೂ ಕೋವಿಡ್-19ನಿಂದ 13 ಜನರು ಮೃತಪಟ್ಟಿದ್ದಾರೆ. 92 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ.

Leave A Reply

Your email address will not be published.