EBM News Kannada
Leading News Portal in Kannada

ಚೀನಾದಿಂದ ಭಾರತಕ್ಕೆ 6.5 ಲಕ್ಷ ರಾಪಿಡ್‌ ಟೆಸ್ಟಿಂಗ್ ಕಿಟ್‌ಗಳ ಆಮದು; ಕಳಪೆ ಗುಣಮಟ್ಟದ ಆರೋಪ

0

ನವ ದೆಹಲಿ (ಏಪ್ರಿಲ್‌ 16); ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸುರಕ್ಷೆ ನೀಡುವ ಸಲುವಾಗಿ ಭಾರತ ಚೀನಾದ 3 ಕಂಪೆನಿಗಳಿಂದ ಸುಮಾರು 6.5 ಲಕ್ಷ ರಾಪಿಡ್‌ ಟೆಸ್ಟಿಂಗ್‌ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ.

ಟೆಸ್ಟಿಂಗ್ ಕಿಟ್ ಗಳನ್ನು ತರುವ ಸಲುವಾಗಿ ಭಾರತ ನಿನ್ನೆಯೇ ಚೀನಾಕ್ಕೆ ವಿಮಾನವನ್ನು ಕಳುಹಿಸಿದ್ದು, ಕೋಲ್ಕತ್ತಾದಿಂದ ನಿನ್ನೆ ಬೆಳಿಗ್ಗೆ 8.20ಕ್ಕೆ ತೆರಳಿರುವ ಸ್ಪೈಸ್ ಜೆಟ್ ವಿಮಾನ ಮಧ್ಯಾಹ್ನ 3.30ಕ್ಕೆ ಶಾಂಘೈ ತೆಲುಪಿದೆ. ಅಲ್ಲದೆ, ಇಂದು ಸಂಜೆ ವೇಳೆಗೆ ವಿಮಾನ ಭಾರತ ತಲುಪಲಿದ್ದು ರಾಪಿಡ್ ಟೆಸ್ಟಿಂಗ್ ಕಿಟ್ ಗಳು ವೈದ್ಯರಿಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ವಿದೇಶಾಂಗ ಇಲಾಖೆ ಈಗಾಗಲೇ ಆಮದು ಪ್ರಕ್ರಿಯೆಯಲ್ಲಿ ತೊಡಗಿದೆ.

ಚೀನಾ ದೇಶ ಪ್ರಸ್ತುತ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ವಿಶ್ವದ ಮುಖ್ಯ ಪೂರೈಕೆದಾರ. ಆದರೆ, ಈ ದೇಶ ಭಾರತಕ್ಕೆ ಕೆಲವು ಕಳಪೆ ಗುಣಮಟ್ಟದ ಕಿಟ್‌ಗಳನ್ನು ಕಳುಹಿಸಿದೆ, ಅದು ನಿರುಪಯುಕ್ತವಾಗಿದೆ ಎಂದು ಈಗಾಗಲೇ ಹಲವರು ಆರೋಪಿಸಿದ್ದಾರೆ. ಆದಾಗ್ಯೂ, ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾದ ಸರಕುಗಳುಭಾರತದ ದೊಡ್ಡ ಖಾಸಗಿ ಕಂಪನಿಗಳಿಂದ ದೇಣಿಗೆಯಾಗಿ ಸ್ವೀಕರಿಸಲ್ಪಟ್ಟವು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಚೀನಾ ಈ ಕಿಟ್‌ಗಳನ್ನು ಭಾರತ ಸರ್ಕಾರಕ್ಕೆ ದಾನವಾಗಿ ನೀಡಿದೆ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ಎಕನಾಮಿಕ್ಸ್‌ ಟೈಮ್ಸ್‌ಗೆ ತಿಳಿಸಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಏಪ್ರಿಲ್ 5 ರಂದು ಭಾರತಕ್ಕೆ ಆಗಮಿಸಿದ 1,70,000 ಪಿಪಿಇ ಕಿಟ್‌ಗಳಲ್ಲಿ ಸುಮಾರು 50,000 ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ. 30,000 ಮತ್ತು 10,000 ಪಿಪಿಇ ಕಿಟ್‌ಗಳನ್ನು ಹೊಂದಿರುವ ಎರಡು ಸಣ್ಣ ಸರಕುಗಳು ಸಹ ಪರೀಕ್ಷೆಗಳಲ್ಲಿ ವಿಫಲವಾಗಿವೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಹೀಗೆ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಿಟ್‌ಗಳನ್ನು ನಮ್ಮ ದೇಶದ ವೈದ್ಯರಿಗೆ ಪೂರೈಕೆ ಮಾಡುವುದು ಸರಿಯಲ್ಲ. ಇದರಿಂದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರೂ ಸಹ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹಲವರು ಎಚ್ಚರಿಸುತ್ತಿದ್ದಾರೆ.

Leave A Reply

Your email address will not be published.