EBM News Kannada
Leading News Portal in Kannada

ನ್ಯೂಸ್18 ವರದಿ ಫಲಶೃತಿ: ಸೋಲಿಗ ಕುಟುಂಬಗಳಿಗೆ ಆಹಾರ ಪದಾರ್ಥ ವಿತರಣೆ; ನರೇಗ ಅಡಿ ಕೂಲಿ ಕೆಲಸ

0

ಚಾಮರಾಜನಗರ(ಏ. 16): ನ್ಯೂಸ್ 18 ವರದಿಯ ಫಲವಾಗಿ 300ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಪೌಷ್ಠಿಕ ಅಹಾರ ಪದಾರ್ಥ ವಿತರಣೆಯಾಗಿದೆ. ಅಲ್ಲದೆ ವರದಿಗೆ ಸ್ಪಂದಿಸಿದ ಪರಿಸರಪ್ರೇಮಿಯೊಬ್ಬರು 40 ಸಾವಿರ ರೂಪಾಯಿ ಮೌಲ್ಯದ ತರಕಾರಿಯನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಿಳಿಗಿರಿರಂಗನಬೆಟ್ಟದ ದಟ್ಟಾರಣ್ಯದಲ್ಲಿರುವ ಕೆರೆದಿಂಬ ಗೊಂಬೆಗಲ್ಲು, ನಲ್ಲಿಕಾತ್ರಿ ಪೋಡುಗಳ ಬುಡಕಟ್ಟು ಸೋಲಿಗರು ಸರ್ಕಾರ ನೀಡಿರುವ ಕೇವಲ ಅಕ್ಕಿಯ ಗಂಜಿಯಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಕರುಣಾಜನಕ ಪರಿಸ್ಥಿತಿಯ ಬಗ್ಗೆ ನ್ಯೂಸ್18 ನಿನ್ನೆ ವರದಿ ಮಾಡಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಈ ಸೋಲಿಗರು ಕಾಡಿನಿಂದ ಹೊರಬರುವಂತೆಯೂ ಇಲ್ಲ. ಇನ್ನೊಂದೆಡೆ ಕೂಲಿ ಕೆಲಸವೂ ಇಲ್ಲ. ದೈನಂದಿನ ಬದುಕಿಗೆ ಬೇಕಾದ ಬೇರೆ ಯಾವುದೇ ವಸ್ತುಗಳು ಇವರಿಗೆ ದೊರೆಯದೆ ಸಂಕಷ್ಟದಲ್ಲಿದ್ದಾರೆ ಎಂದು ವರದಿ ಮಾಡುವ ಮೂಲಕ ಗಮನ ಸೆಳೆದಿತ್ತು. ಗಿರಿಜನರಿಗೆ ಆರು ತಿಂಗಳ ಕಾಲ ಪ್ರತಿ ತಿಂಗಳು ನೀಡಬೇಕಾದ ಪೌಷ್ಠಿಕ ಆಹಾರ ಪದಾರ್ಥ ನೀಡದಿರುವ ಬಗ್ಗೆಯೂ ಬೆಳಕು ಚೆಲ್ಲಿತ್ತು.

ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಇಂದು ಈ ಪೋಡುಗಳ 300ಕ್ಕು ಹೆಚ್ಚು ಸೋಲಿಗ ಕುಟುಂಬಗಳಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಒಂದು ತಿಂಗಳಿಗಾಗುವಷ್ಟು ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಿಸಿದೆ. ಇಂದು ಈ ಪೋಡುಗಳಿಗೆ ಸ್ವತ: ಜಿಲ್ಲಾ ಪಂಚಾಯ್ತಿ ಸಿಇಓ ಹರ್ಷಲ್ ನಾರಾಯಣ ಬೋಯರ್ ಅವರು ಖುದ್ದು ಭೇಟಿ ನೀಡಿ ಸೋಲಿಗರ ಸಮಸ್ಯೆ ಆಲಿಸಿದರು. ಎಲ್ಲ ಕುಟುಂಬಗಳಿಗೂ ರಾಗಿ, ಬೇಳೆ, ಕಡ್ಲೆಕಾಳು, ಕಡಲೆಬೀಜ ತುಪ್ಪ, ಅಡುಗೆ ಎಣ್ಣೆ, ಸಕ್ಕರೆ ಉಪ್ಪು, ಬೆಲ್ಲ, ಖಾರದಪುಡಿ ಒಳಗೊಂಡ ಪೌಷ್ಠಿಕ ಆಹಾರ ವಿತರಿಸಿದರು. ಅಲ್ಲದೆ ನಾಳೆಯಿಂದಲೇ ನರೇಗ ಯೋಜನೆಯಡಿ ಪೋಡುಗಳಲ್ಲೆ ಕೂಲಿ ಕೆಲಸ ನೀಡುವಂತೆ ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು.

Leave A Reply

Your email address will not be published.