‘ಏ.14ರ ನಂತರ ಮದ್ಯದ ಅಂಗಡಿಗಳು ತೆರೆಯೋದು ಡೌಟ್; ಹಾಗಾಗಿ ಎಣ್ಣೆ ಬಿಡಿ, ಆರೋಗ್ಯವಾಗಿರಿ‘ – ಎಂಪಿ ರೇಣುಕಾಚಾರ್ಯ
ದಾವಣಗೆರೆ(ಏ.12): ಎಣ್ಣೆ ಬಿಡಬೇಕು, ಯೋಗ, ಧ್ಯಾನ, ವಾಯುವಿಹಾರ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಕುಡುಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎಂ.ಪಿ ರೇಣುಕಾಚಾರ್ಯ, ನನ್ನನ್ನು ಕೆಲವರು ಮದ್ಯ ಕೇಳುತ್ತಿದ್ದಾರೆ. ಕುಡುಕರಿಗೆ ಇದೊಂದು ಸುವರ್ಣಾಕಾಶ. ಹಾಗಾಗಿ ಎಣ್ಣೆ ಬಿಟ್ಟು ಆರೋಗ್ಯವಾಗಿರಿ ಎಂದಿದ್ದಾರೆ.
ಕೊರೋನಾ ಲಾಕ್‌ಡೌನ್ ಏಪ್ರಿಲ್ 14 ನಂತರವೂ ಮುಂದುವರಿಯಲಿದೆ. ಹಾಗಾಗಿ ಮದ್ಯದ ಅಂಗಡಿ ಮುಂದೆ ತೆರಯುತ್ತಾರೋ ಅಥವಾ ಇಲ್ಲವೋ ಎಂದು ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಂಡಿದ್ದಾರೆ. ನಾನಂತೂ ಈಗ ಎಣ್ಣೆ ಕುಡಿಯುವುದು ಬಿಟ್ಟಿದ್ದೀನಿ. ನನ್ನ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಿದ್ದೀನಿ. ನೀವು ನಾನು ಹೇಳಿದಂತೆಯೇ ಮಾಡಿ ಎಂದರು ಎಂ.ಪಿ ರೇಣುಕಾಚಾರ್ಯ.
ಕೋವಿಡ್-19 ವೈರಸ್ಗೆ ಬಲಿಯಾದವರಿಗಿಂತಲೂ ರಾಜ್ಯದಲ್ಲಿ ಎಣ್ಣೆ ಸಿಗದ ಕಾರಣ ಆತ್ಮಹತ್ಮೆ ಮಾಡಿಕೊಂಡವರು ಜಾಸ್ತಿ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಆದ್ದರಿಂದ ಸದ್ಯ ಕುಡಿತ ಬಿಟ್ಟು, ಆರೋಗ್ಯವಾಗಿ ಮನೆಯಲ್ಲೇ ಇರಿ ಎಂದು ಮತ್ತೊಮ್ಮೆ ಕುಡುಕರಿಗೆ ಕೈ ಮುಗಿದು ಸಿಎಂ ರಾಜಕೀಯ ಕಾರ್ಯದರ್ಶಿಗಳು ವಿನಂತಿಸಿಕೊಂಡರು.
ಈಗಾಗಲೇ ಮದ್ಯ ಮಾರಾಟ ಮಾಡಲು ನಾನು ಸರ್ಕಾರಕ್ಕೆ ಶಿಪಾರಸು ಮಾಡಿಲ್ಲ. ಜನರ ಪ್ರಾಣಕ್ಕಿಂತ ಮಧ್ಯ ಮಾರಾಟ ಮುಖ್ಯವಲ್ಲ. ಹೀಗಾಗಿ ಕುಡಿಲೇಬೇಕೆಂದು ಸ್ನೇಹಿತರು ಹಠ ಹಿಡಿಯಬಾರದು ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಏಪ್ರಿಲ್.14 ರ ನಂತರವೂ ಮದ್ಯದ ಅಂಗಡಿಗಳು ತೆರೆಯುವುದು ಅಸಾಧ್ಯ ಎಂಬ ಸೂಚನೆಯನ್ನು ನೀಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಮದ್ಯದ ಅಂಗಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸುಮಾರು 7 ಜನ ಮದ್ಯ ಪ್ರಿಯರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಹೀಗಾಗಿ ಮದ್ಯಕ್ಕೆ ದಾಸರಾಗಿರುವವರು ಲಾಕ್‌ಡೌನ್ ಮುಗಿದು ಏಪ್ರಿಲ್.14ರ ನಂತರ ಮದ್ಯದ ಅಂಗಡಿಗಳು ತೆರೆಯುತ್ತಾರೆ ಎಂದು ಕಾಯುತ್ತಿದ್ದಾರೆ.
ಈ ಬೆನ್ನಲ್ಲೇ ಅಬಕಾರಿ ಸಚಿವ ಹೆಚ್. ನಾಗೇಶ್, “ಲಾಕ್ ಡೌನ್ ಆದೇಶವನ್ನು ನನ್ನ ಸ್ನೇಹಿತ ಮಧ್ಯಪಾನಿಗಳು ಬೆಂಬಲಿಸಬೇಕು. ನೂರಕ್ಕೆ ನೂರು ಲಾಕ್ ಡೌನ್ ಮುಂದುವರೆಯಬೇಕು. ದಿನೇ ದಿನೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಎಣ್ಣೆ ಅಂಗಡಿಗಳನ್ನು ಸದ್ಯ್ಕಕೆ ತೆರೆಯುವ ಯಾವುದೇ ಶಿಫಾರಸನ್ನು ನಾನು ಸರ್ಕಾರಕ್ಕೆ ನೀಡಿಲ್ಲ” ಎಂದು ತಿಳಿಸಿದ್ದರು.