EBM News Kannada
Leading News Portal in Kannada

ಹರ್ ಘರ್ ಚುಪ್ ಚಾಪ್ ಸೆ ಕೆಹ್ತಾ ಹೈ: ಒಂದು ಪೀಳಿಗೆಯನ್ನು ವ್ಯಾಖ್ಯಾನಿಸಿದ ಟಿವಿಸಿ ಸಂಬಂಧಿತ ಸಂದೇಶದೊಂದಿಗೆ ಮತ್ತೆ ಬಂದಿದೆ, ಅಷ್ಟೇ ಚಂದವಾಗಿದೆ

0

ಮಾನವರು ಸಾಮಾಜಿಕ ಪ್ರಾಣಿಗಳು ಎಂದು ತಿಳಿದೇ ಇದೆ. ಜನರೊಡನೆ ಬೆರೆಯುವ ಅಗತ್ಯವು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿರುತ್ತದೆ, ಅದಕ್ಕಾಗಿಯೇ ‘ಕ್ವಾರಂಟೈನ್’ ಮತ್ತು ‘ಐಸೊಲೇಶನ್’ ಎಂಬ ಈ ಪದಗಳು ನಮ್ಮೆಲ್ಲರಲ್ಲೂ ಒಂದು ರೀತಿಯ ಆಳವಾದ ಭಯವನ್ನುಂಟುಮಾಡುತ್ತವೆ. ಆದರೆ ನಾವು ಇದೀಗ ಒತ್ತಡದ ಸಮಯದಲ್ಲಿ ಜೀವಿಸುತ್ತಿದ್ದರೂ ಸಹ, ಈ ಇಡೀ ಸನ್ನಿವೇಶಕ್ಕೆ ಸಕಾರಾತ್ಮಕ ಮುಖವೂ ಇದೆ; ನಮ್ಮ ಕುಟುಂಬಗಳು ಮತ್ತು ನಮ್ಮ ಮನೆಗಳಲ್ಲಿ ನಾವು ಪರಸ್ಪರ ಕಳೆಯುವ ಅಮೂಲ್ಯ ಸಮಯ. ಗಮನಿಸಿ, ಲಾಕ್‌ಡೌನ್ ಮುಗಿದ ಬಳಿಕವೂ ನೀವು ಕಳೆದ ಈ ಸಮಯ ನಿಮ್ಮ ಮನಸ್ಸಿನಲ್ಲುಳಿದು ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಈ ಸಮಯದಲ್ಲಿ ನಮ್ಮ ಮನೆಗಳು ಮತ್ತು ನಮ್ಮ ಕುಟುಂಬಗಳೇ ನಾವು ಪಡೆಯಬಹುದಾದ ದೊಡ್ಡ ಬೆಂಬಲವಾಗಿರುವಾಗ, Asian Paints ಅದರ ಸಾಂಪ್ರದಾಯಿಕ ‘ಹರ್ ಘರ್ ಚುಪ್ ಚಾಪ್ ಸೆ ಕೆಹ್ತಾ ಹೈ’ ಅಭಿಯಾನವನ್ನು ಮತ್ತೆ ಪ್ರಾರಂಭಿಸಿರುವುದು ಸೂಕ್ತವಾಗಿದೆ. ಇದು ನೀಡುತ್ತಿರುವ ಸಂದೇಶ ಎಲ್ಲದರಲ್ಲೂ ಪ್ರತಿಧ್ವನಿಸುತ್ತದೆ, ಏಕೆಂದರೆ ನಾವು ಎಲ್ಲ ಸಮಯದಲ್ಲೂ ಮಾಡಬೇಕಾಗಿರುವ ಕೆಲಸಗಳನ್ನು ಮಾಡುತ್ತಿದ್ದೇವೆ ಮತ್ತು ನಮ್ಮ ಕಾರ್ಯನಿರತ ಜೀವನದಲ್ಲಿ ಆಗಾಗ್ಗೆ ಮಾಡಲು ಸಿಗದ ಸಣ್ಣಪುಟ್ಟ ಕೆಲಸಗಳನ್ನು ಆನಂದಿಸುತ್ತೇವೆ. 2007 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಟಿವಿಸಿ ತನ್ನ ವೀಕ್ಷಕರಲ್ಲಿ ಅನೇಕ ಭಾವನೆಗಳನ್ನು ಹುಟ್ಟುಹಾಕಿತು, ನಂತರ ಅದನ್ನು ನವೀಕರಿಸಲಾಗಿದೆ, ಪುನಃ ರಚಿಸಲಾಗಿದೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮರುಸೃಷ್ಟಿಸಲಾಗಿದೆ. ಇದು ಭಿನ್ನವಾಗಿ ಎಲ್ಲವನ್ನೂ ಹೇಳುತ್ತಾ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

ಈ ರೀತಿಯ ಸಮಯದಲ್ಲಿ ನಮ್ಮನ್ನು ತಲುಪುವ ಬ್ರ್ಯಾಂಡ್ , ನಮ್ಮ ಒತ್ತಡದ ಜೀವನದ ಪರಿಣಾಮವಾಗಿ ನಾವು ಎಷ್ಟು ನೆನಪುಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ನೆನಪಿಸುತ್ತಾ, ನಿಜಕ್ಕೂ ನಮ್ಮ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ. ವೀಡಿಯೊ ಪ್ಲೇ ಆಗುತ್ತಿದ್ದಂತೆ, ಕುಟುಂಬಗಳು ನಾವು ‘ಸಾಮಾನ್ಯ’ ಮತ್ತು ‘ಪ್ರತಿದಿನ’ ಎಂದು ಪರಿಗಣಿಸುವ ಆ ಸಣ್ಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಾವು ನೋಡುತ್ತೇವೆ, ಆದರೆ ಈ ಕ್ವಾರಂಟೈನ್ ಸಂದರ್ಭಕ್ಕೆ ಪರಿಗಣಿಸಿದಾಗ , ಅದು ಬಹಳಷ್ಟು ಭಾವನೆಗಳನ್ನು ಹುಟ್ಟುಹಾಕುತ್ತದೆ. ಕುಟುಂಬ ಸದಸ್ಯರ ಅನ್ಯೋನ್ಯತೆ, ಆಟವಾಡುವುದು, ಒಟ್ಟಿಗೆ ನಗುವುದು ಇತ್ಯಾದಿಗಳ ತುಣುಕುಗಳು ಬಹಳ ಸಾಪೇಕ್ಷವಾದ ದೃಶ್ಯಗಳಾಗಿವೆ, ಮತ್ತು ಇಡೀ ‘ಹೋಮ್ ಮೇಡ್’ ಭಾವವು ಇದಕ್ಕೆ ಹೆಚ್ಚುವರಿ ಮಹತ್ವವನ್ನು ನೀಡುತ್ತದೆ, ಏಕೆಂದರೆ ನಾವು ಸಹ ವೀಡಿಯೊದ ಭಾಗವಾಗಿದ್ದೇವೆ ಎಂದು ನಮಗೆ ಅನಿಸುತ್ತದೆ. ವೀಡಿಯೊದಲ್ಲಿ ಚಿತ್ರಿಸಲಾದ ಭಾವನಾತ್ಮಕ ಕೋನದ ಜೊತೆಗೆ, ‘ಮನೆಯೊಳಗೆ ಇರುವುದು ಮತ್ತು ಸುರಕ್ಷಿತವಾಗಿರುವುದು’ ಎಂಬ ಪ್ರಮುಖ ಸಂದೇಶಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ.

ಈ ವೀಡಿಯೊವನ್ನು ಮೂಲ ತಂಡ Ogilvy ಮತ್ತು ಸೃಜನಶೀಲ ಪ್ರತಿಭೆ ಪಿಯೂಷ್ ಪಾಂಡೆ ರಚಿಸಿದ್ದಾರೆ ಎಂಬುದು ಇನ್ನಷ್ಟು ಸ್ಮರಣೀಯವಾಗಿದೆ. ಅವರು 13 ವರ್ಷಗಳ ಹಿಂದೆ ಇದ್ದಂತೆ ಅಷ್ಟೇ ಪರಿಣಾಮಕಾರಿಯಾಗಿ ಇದನ್ನು ಮರು-ಸೃಷ್ಟಿಸಲು ಯಶಸ್ವಿಯಾಗಿದ್ದಾರೆ ಎಂದು ನಾವು ಹೇಳಬಹುದು.

‘ಹರ್ ಘರ್ ಚುಪ್ ಚಾಪ್ ಸೆ ಕೆಹ್ತಾ ಹೈ’ ವಿಡಿಯೋ ಪ್ರಸ್ತುತ ಸಮಯಕ್ಕೆ ಪೂರಕವಾಗಿದೆ, ಏಕೆಂದರೆ ನಾವು ಬೆಂಬಲ ನೀಡುವ ಕುಟುಂಬ, ಉಳಿಯಲು ಸುರಕ್ಷಿತವಾದ ಮನೆ ಮತ್ತು ನಾವು ‘ಮನೆ’ ಎಂದು ಕರೆಯುವ ಆ ನಾಲ್ಕು ಗೋಡೆಗಳ ಒಳಗೆ ನಾವು ಸೃಷ್ಟಿಸುವ ನೆನಪುಗಳ ಪ್ರಾಮುಖ್ಯತೆಯನ್ನು ಅರಿಯುತ್ತೇವೆ. Asian Paints ದಶಕಗಳಿಂದ ಸುಂದರವಾದ ಮನೆಗಳನ್ನು ರಚಿಸುವಲ್ಲಿ ಹೆಮ್ಮೆ ಪಡೆದ, ಸಂಭಾಷಣೆಯ ಒಂದು ಭಾಗವಾಗಿ ಮತ್ತು ಪ್ರತಿಯೊಬ್ಬರೂ ಮನೆಯೊಳಗಿರಲು ಮತ್ತು ಸುರಕ್ಷಿತವಾಗಿರಲು ಪ್ರೇರಪಿಸುವ ಮೂಲಕ ಸುರಕ್ಷತೆಯ ಸಂದೇಶವನ್ನು ಹರಡುವ ಒಂದು ಬ್ರ್ಯಾಂಡ್ ಆಗಿರುವುದು ಶ್ಲಾಘನೀಯ.

Leave A Reply

Your email address will not be published.