EBM News Kannada
Leading News Portal in Kannada

ದೇಶದಲ್ಲಿ ಶೇ.25ರಷ್ಟು ವಯಸ್ಕರಿಂದಷ್ಟೇ ನೆಟ್ ಬಳಕೆ

0

ಹೊಸದಿಲ್ಲಿ: ಡಿಜಿಟಲ್‌ ಇಂಡಿಯಾದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದರೂ, ದೇಶದಲ್ಲಿ 2017ರಲ್ಲಿ ಶೇ.25ರಷ್ಟು ವಯಸ್ಕರು ಮಾತ್ರ ಇಂಟರ್‌ನೆಟ್‌ ಬಳಸಿದ್ದಾರೆ. ಇದು ಜಗತ್ತಿನಲ್ಲಿಯೇ ಕಡಿಮೆ ಮಟ್ಟಗಳಲ್ಲೊಂದು ಎಂದು ಪ್ಯೂ ರಿಸರ್ಚ್‌ ಸೆಂಟರ್‌ ತಿಳಿಸಿದೆ.

ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳ ಮಧ್ಯೆ ಇಂಟರ್‌ನೆಟ್‌ ಬಳಕೆಗೆ ಸಂಬಂಧಿಸಿ ಅಂತರ ಕಡಿಮೆಯಾಗುತ್ತಾ ಬಂದಿದೆ. ಹೀಗಿದ್ದರೂ ಹಲವು ದೇಶಗಳಲ್ಲಿ ಈಗಲೂ ನೆಟ್‌ ಬಳಸದಿರುವ ಭಾರಿ ಸಂಖ್ಯೆಯ ನಾಗರಿಕರು ಇದ್ದಾರೆ. ಅಂಥ ದೇಶಗಳಲ್ಲಿ ಭಾರತ ಕೂಡ ಒಂದು ಎಂದು ಸಮೀಕ್ಷೆ ತಿಳಿಸಿದೆ.

ಭಾರತದಲ್ಲಿ 18-36 ವಯಸ್ಸಿನ ಶೇ.35 ಮಂದಿ ಮಾತ್ರ ಇಂಟರ್‌ನೆಟ್‌ ಬಳಸುತ್ತಿದ್ದಾರೆ. 37 ವರ್ಷ ದಾಟಿದ ವಯಸ್ಕರಲ್ಲಿ ಕೇವಲ 13 ಪರ್ಸೆಂಟ್‌ ಮಾತ್ರ ನೆಟ್‌ ಬಳಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Leave A Reply

Your email address will not be published.