EBM News Kannada
Leading News Portal in Kannada

108 ಪಾಕ್ ವಲಸಿಗರಿಗೆ ಭಾರತದ ಪೌರತ್ವ ಪ್ರದಾನ

0

ಜೋದ್ಪುರ: ರಾಜಸ್ತಾನದಲ್ಲಿರುವ 108 ಪಾಕಿಸ್ತಾನ ಮೂಲದ ಹಿಂದುಗಳಿಗೆ ಭಾರತದ ಪೌರತ್ವವನ್ನು ನೀಡಲಾಗಿದೆ.
ಜೋದ್ಪುರದ ಜಿಲ್ಲಾಧಿಕಾರಿ ರವಿಕುಮಾರ್ ಸುರ್ಪುರ್ ಅವರು ಪಾಕಿಸ್ತಾನದ ವಲಸಿಗರಿಗೆ ಭಾರತದ ನಾಗರೀಕತ್ವದ ಪ್ರಮಾಣಪತ್ರಗಳನ್ನು ಹಸ್ತಾಂತರ ಮಾಡಿದ್ದಾರೆ.

ಭಾರತದ ಪೌರತ್ವ ಪ್ರಮಾಣಪತ್ರವನ್ನು ಸ್ವೀಕರಿಸಿದ ಪಾಕಿಸ್ತಾನದ ವಲಸಿಗರು, ಈ ವೇಳೆ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣಾ ವಾಕ್ಯಗಳನ್ನು ಕೂಗಿದರು. ಪ್ರಮಾಣಪತ್ರ ಸ್ವೀಕರಿಸುವ ವೇಳೆ ಬಹುತೇಕರ ಕಣ್ಣಾಲಿಗಳು ಒದ್ದೆಯಾದವು.

ಸೀಮಂತ್ ಲೋಕ ಸಂಘಟನೆ ಅಧ್ಯಕ್ಷ ಹಿಂದು ಸಿಂಗ್ ಸೋದಾ ಅವರು ಈ ವಲಸಿಗರಿಗೆ ಭಾರತದ ನಾಗರೀಕತ್ವದ ಪ್ರಮಾಣಪತ್ರ ನೀಡುವಂತೆ ಸಾಕಷ್ಟು ಹೋರಾಟ ಮಾಡಿದ್ದರು.

ಪ್ರಸ್ತುತ 108 ಪಾಕಿಸ್ತಾನದ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದ್ದು. ಇನ್ನು 6 ಸಾವಿರ ಪಾಕಿಸ್ತಾನ ವಲಸಿಗರು ಭಾರತದ ಪೌರತ್ವಕ್ಕಾಗಿ ಕಾದು ಕುಳಿತಿದ್ದಾರೆಂದು ಹಿಂದು ಸಿಂಗ್ ಅವರು ಹೇಳಿದ್ದಾರೆ.

Leave A Reply

Your email address will not be published.