EBM News Kannada
Leading News Portal in Kannada

ಬಿಹಾರ: ವೈದ್ಯನನ್ನು ಮರಕ್ಕೆ ಕಟ್ಟಿ, ಆತನ ಪತ್ನಿ, ಮಗಳ ಮೇಲೆ ಗ್ಯಾಂಗ್ ರೇಪ್

0

ಪಾಟ್ನಾ: ಶಸ್ತ್ರ ಸಜ್ಜಿತ ದುಷ್ಕರ್ಮಿಗಳ ತಂಡವೊಂದು ವೈದ್ಯನನ್ನು ಮರಕ್ಕೆ ಕಟ್ಟಿಹಾಕಿ, ಆತನ ಕಣ್ಣೇದುರಿಗೆ ಪತ್ನಿ ಹಾಗೂ 15 ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ತನ್ನ ಖಾಸಗಿ ಕ್ಲಿನಿಕ್ ನಿಂದ ದ್ವಿಚಕ್ರ ವಾಹನದಲ್ಲಿ ಪತ್ನಿ ಮತ್ತು ಮಗಳೊಂದಿಗೆ ಮನಗೆ ಬರುತ್ತಿದ್ದಾಗ ಕೊಂಚ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಂದಿಹಾ ಗ್ರಾಮದಲ್ಲಿ ಗೂಂಡಾಗಳು ಅವರನ್ನು ತಡೆದು, ಚಿನ್ನಾಭರಣ, ನಗದು ದೋಚಿದ್ದಾರೆ. ಬಳಿಕ ಪತ್ನಿ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗೂಂಡಾಗಳು ಸೊಂದಿಹಾ ಅಥವಾ ಸುತ್ತಮುತ್ತಲಿನ ಗ್ರಾಮದವರಾಗಿಬೇಕು ಎಂದು ಪೊಲೀಸರು ನಂಬಿದ್ದಾರೆ.
ಸಂತ್ರಸ್ತರ ಪ್ರಕಾರ, ಈ ಘಟನೆಗೂ ಕೆಲ ನಿಮಿಷಗಳ ಮುನ್ನ ಆ ಗೂಂಡಾಗಳು ಹಾದು ಹೋಗುತ್ತಿದ್ದ ಇತರ ಇಬ್ಬರು ಪುರುಷರನ್ನು ದೋಚಿ, ಸೆರೆಯಲ್ಲಿಟ್ಟುಕೊಂಡಿದ್ದರು.

ಗೂಂಡಾಗಳಿಗೆ ನಮ್ಮಲ್ಲಿರುವ ಬೆಲೆ ಬಾಳುವ ವಸ್ತು ಮತ್ತು ನಗದು ತೆಗೆದುಕೊಂಡು ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡೆವು. ಆದರೂ ಕೇಳದ ದುಷ್ಕರ್ಮಿಗಳು ನನ್ನನ್ನು ಮತ್ತು ನನ್ನ ಮಗಳನ್ನು ಹೋಲದಲ್ಲಿ ಎಳೆದೊಯ್ದು ಅತ್ಯಾಚಾರ ಎಸಗಿದರು ವೈದ್ಯರ ಪತ್ನಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಗೂಂಡಾಗಳು ಘಟನೆ ಬಗ್ಗೆ ಪೊಲೀಸರಿಗೆ ತಿಳಿಸದಂತೆ ವೈದ್ಯರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಘಟನೆ ನಡೆದ ಕೆಲ ನಿಮಿಷಗಳಲ್ಲೇ ವೈದ್ಯ ತನ್ನ ಮೊಬೈಲ್ ನಿಂದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಗಯಾ ಎಸ್ ಎಸ್ ಪಿ ರಾಜೀವ್ ಮಿಶ್ರಾ ಮತ್ತು ಎಸ್ ಡಿಪಿಒ ಮನಿಶ್ ಕುಮಾರ್ ಅವರು, ಇಬ್ಬರು ಅತ್ಯಾಚಾರ ಸಂತ್ರಸ್ಥೆಯರನ್ನು ಗಯಾದಲ್ಲಿರುವ ಅನುಗ್ರಹ ನಾರಾಯಣ ಮಗಧ್ ವೈದ್ಯಕೀಯ ಕಾಲೇಜ್ ಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಸೊಂದಿಹ ಮತ್ತು ಸಮೀಪದ ಎರಡು ಹಳ್ಳಿಗಳಲ್ಲಿ ದಾಳಿ ನಡೆಸಿ, 20 ಶಂಕಿತರನ್ನು ಬಂಧಿಸಲಾಗಿದೆ. ಸಂತ್ರಸ್ಥರು ಆ ಪೈಕಿ ಇಬ್ಬರ ಗುರುತು ಪತ್ತೆ ಹಚ್ಚಿದ್ದಾರೆ ಮತ್ತು ಅವರು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಸ್ ಎಸ್ ಪಿ ತಿಳಿಸಿದ್ದಾರೆ.

Leave A Reply

Your email address will not be published.