EBM News Kannada
Leading News Portal in Kannada

ಪ್ರಧಾನಿ ಮೋದಿ ನಿವಾಸದ ಮೇಲೆ ಯುಎಫ್ಒ ಹಾರಾಟ ಪತ್ತೆ!

0

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆಗೈಯಲು ನಕ್ಸಲು ಸಂಚು ರೂಪಿಸಿದ್ದರು ಎಂಬ ವರದಿಗಳ ಬೆನ್ನಲ್ಲೇ, ರಾಜಧಾನಿ ದೆಹಲಿಯಲ್ಲಿನ ಪ್ರಧಾನ ಮೋದಿಯವರ ಮನೆ ಮೇಲೆ ಇತ್ತೀಚೆಗಷ್ಟೇ ಯುಎಫ್ಒ (ಆನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್-ಗುರುತಿಸಲಾಗದ ಹಾರಾಡುತ್ತಿದ್ದ ವಸ್ತು) ಪತ್ತೆಯಾಗಿ ಆತಂಕ ಸೃಷ್ಟಿಸದ್ದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಯುಎಫ್ಒ ಪತ್ತೆಯಾದ ಬೆನ್ನಲ್ಲೇ ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಸಿದ ಅಧಿಕಾರಿಗಳು, ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

ಯುಎಫ್ಒ ಪತ್ತೆಯಾಗಿದ್ದನ್ನು ಪೊಲೀಸರು ಖಚಿತಪಡಿಸಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಪ್ರಧಾನಿ ಮೋದಿ ನಿವಾಸದ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯ ಪ್ರದೇಶವ್ನು ಹಾರಾಟ ನಿಷಿದ್ಧ ವಲಯ ಎಂದು ಘೋಷಿಸಲಾಗಿದೆ. ಆದರೆ, ಜೂ.7 ರ ಸಂಜೆ 7.30ರ ವೇಳೆ ಮೋದಿ ಮನೆ ಮೇಲೆ ಯುಎಫ್ಒ ಹಾರಾಟ ಕಂಡು ಬಂದಿತ್ತು.

ಕೂಡಲೇ ಪ್ರಧಾನಿ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್’ಪಿಜಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಧಾವಿಸುವುದರ ಒಳಗೆ ಯುಎಫ್ಒ ನಾಪತ್ತೆಯಾಗಿತ್ತು. ಆದರೂ ಕೂಡಲೇ ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿ, ಎನ್ಎಸ್’ಜಿ, ಸಿಐಎಸ್ಎಫ್, ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಮಗಕ್ಕೆ ಮಾಹಿತಿ ರವಾನಿಲಾಗಿತ್ತು. ಮೋದಿ ನಿವಾಸದ ಸುತ್ತಮುತ್ತಲ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್ ಪಡೆಯನ್ನು ರವಾನಿಸಲಾಗಿತ್ತು. ನಂತರ ಇಡೀ ಪ್ರದೇಶವನ್ನು ತಪಾಸಣೆ ನಡೆಸಲಾಗಿತ್ತು. ಈ ವೇಳೆ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳು ಕಂಡು ಬಂದಿರಲಿಲ್ಲ.

ಪ್ರಧಾನಿ ಮೋದಿ ನಿವಾಸದ ಮೇಲಿನ ಆಗಸದಲ್ಲಿ ಯುಎಫ್ಒ ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಟ್ವಿಟರಾಟಿಗಳು ಮನ ಬಂದ ರೀತಿಯಲ್ಲಿ ಊಹಾಪೋಹಗಳನ್ನು ಟ್ವಿಟರ್ ನಲ್ಲಿ ಹರಿಬಿಡತೊಡಗಿದರು. ಶಕುನ, ಅಪಶಕುನ ಮುಂದಾಗಿ ಹಲವು ಬಗೆಯ ಅಭಿಪ್ರಾಯಗಳು ಟ್ವಿಟರ್ ನಲ್ಲಿ ಹರಿ ಬಂದವು.

Leave A Reply

Your email address will not be published.