ಗೌರಿ ಲಂಕೇಶ್ ಹತ್ಯೆ: ಮತ್ತೋರ್ವ ಆರೋಪಿ ಪರಶುರಾಮನ ಬಂಧನ
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಪ್ರಮುಖ ಆರೋಪಿಯನ್ನು ಬಂಧಿಸಿದೆ ಎಂದು ಹೇಳಲಾಗುತ್ತಿದೆ.
ಎಸ್ಐಟಿ ತಂಡ ವಿಜಯಪುರದ ಸಿಂದಗಿ ಮೂಲದ ಪರಶುರಾಮ್ ವಾಗ್ಲೋರೆ ಎಂಬಾತನನ್ನು ನಿನ್ನೆ ಬಂಧಿಸಿದ್ದು ಇಂದು 3ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿ 14 ದಿನಗಳ ವಶಕ್ಕೆ ಪಡೆದಿದೆ.
ಎಸಿಎಂಎಂ ಕೋರ್ಟ್ ಗೆ ಎಸ್ಐಟಿ ತಂಡ 2017ರ ಸೆಪ್ಟೆಂಬರ್ 5ರಂದು ಪರಶುರಾಮನ್ ಗೌರಿ ಅವರಿಗೆ ಗುಂಡು ಹಾರಿಸಿದ್ದು ಎಂದು ಹೇಳಿದ್ದು ಇನ್ನು ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ಇನ್ನೂ ನಾಪತ್ತೆಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಅದಾಗಲೇ ಮದ್ದೂರಿನ ಕೆಟಿ ನವೀನ್ ಕುಮಾರ್, ಶಿಕಾರಿಪುರದ ಸುಜೀತ್ ಸೇರಿದಂತೆ ಪ್ರಮುಖರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.