ಸಮ್ಮಿಶ್ರ ಸರ್ಕಾರದಲ್ಲಿ ತಾನು ಮುಖ್ಯಮಂತ್ರಿ ಆದ ರಹಸ್ಯ ಬಿಚ್ಚಿಟ್ಟ ಕುಮಾರಸ್ವಾಮಿ
ಬೆಂಗಳೂರು: ಮುಖ್ಯಮಂತ್ರಿ ಆಗೋದಕ್ಕೆ ನನಗೆ ಇಷ್ಟವಿರಲಿಲ್ಲ. ಆದರೆ ಕಾಂಗ್ರೆಸ್ಸಿಗರು ನನ್ನನ್ನು ಬಿಡಲಿಲ್ಲ ಎಂದು ಸಮ್ಮಿಶ್ರ ಸರ್ಕಾರ ರಚನೆ ಕುರಿತ ರಹಸ್ಯವನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನನ್ನ ತಂದೆ ಮಾಜಿ ಪ್ರಧಾನಿ ದೇವೇಗೌಡ ಅವರು ನನ್ನ ಮಗನಿಗೆ ಎರಡು ಬಾರಿ ಚಿಕಿತ್ಸೆ ಆಗಿದೆ. ಆರೋಗ್ಯ ಸರಿಯಿಲ್ಲ. ಆದ್ದರಿಂದ ನೀವೇ ಯಾರಾದರೂ ಮುಖ್ಯಮಂತ್ರಿ ಆಗಿ ಎಂದು ಕಾಂಗ್ರೆಸ್ಸಿಗರಿಗೆ ಮನವಿ ಮಾಡಿದ್ದರು. ಆಗ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ದೆಹಲಿ ನಾಯಕರು ನೀವೇ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯ ಮಾಡಿ ನನ್ನನ್ನು ಸಿಎಂ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಕೊಟ್ಟಿರುವ ಅಧಿಕಾರವನ್ನು ನಡೆಸುತ್ತೇನೆ. ನನಗೆ ಹಣ ಮಾಡುವ ಉದ್ದೇಶ ಇಲ್ಲ. ನನಗೆ ಎರಡು ಬಾರಿ ಚಿಕಿತ್ಸೆ ಆಗಿದೆ ಎಷ್ಟು ದಿನ ಬದುಕುತ್ತೇನೆ ನನಗೆ ಗೊತ್ತಿಲ್ಲ. ಇಂದು ದೇವರ ಅನುಗ್ರಹದಿಂದ ಈ ಜಾಗದಲ್ಲಿ ಕುಳಿತಿದ್ದೇನೆ. ಗಾಂಧಿಜೀಯವರ ಹೆಸರನ್ನು ಉಳಿಸುತ್ತೇನೆ ಎಂದು ಹೇಳಿದ್ದಾರೆ.