EBM News Kannada
Leading News Portal in Kannada

ಭಾರತದ ವಿರುದ್ಧವಾಗಿ ಕಾರ್ಯನಿರ್ವಹಣೆ: ಬಿಜೆಪಿ ಆರೋಪ ಅಲ್ಲಗಳೆದ ಅಮೆರಿಕ

0



ಹೊಸದಿಲ್ಲಿ: ಅಮೆರಿಕದ ರಕ್ಷಣಾ ಇಲಾಖೆ ಮತ್ತು ಇಡೀ ಹಿತಾಸಕ್ತಿಗಳ ಜತೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವ್ಯವಸ್ಥೆ (ಡೀಪ್ ಸ್ಟೇಟ್) ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿಯವರನ್ನು ಗುರಿ ಮಾಡುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಮಾಡಿರುವ ಆರೋಪವನ್ನು ಅಮೆರಿಕ ಬಲವಾಗಿ ಅಲ್ಲಗಳೆದಿದೆ.

“ಭಾರತದ ಆಡಳಿತಾರೂಢ ಪಕ್ಷ ಇಂಥ ಆಪಾದನೆಗಳನ್ನು ಮಾಡಿರುವುದು ತೀರ ನಿರಾಶಾದಾಯಕ” ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಅಮೆರಿಕದ ತನಿಖಾ ಪತ್ರಿಕೋದ್ಯಮ ವೇದಿಕೆ ಸಿಓಓಆರ್ ಪಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಮೆರಿಕ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಅಪಾದಿಸಿತ್ತು. ಓಸಿಸಿಆರ್ಪಿ ಮತ್ತು ಅಮೆರಿಕ ಸರ್ಕಾರದ ನಡುವಿನ ರಹಸ್ಯ ಸಂಪರ್ಕವನ್ನು ಬಹಿರಂಗಪಡಿಸಿರುವುದಾಗಿ ಕೋಟ್ಯಧಿಪತಿ ಜರ್ಜ್ ಸೊರೊಸ್ ಹಣಕಾಸು ನೆರವು ನೀಡಿರುವ ಫ್ರಾನ್ಸ್ ಮೂಲದ ಪತ್ರಿಕೆಯ ವರದಿಯೊಂದು ಪ್ರಕಟಿಸಿರುವ ಬೆನ್ನಲ್ಲೇ ಬಿಜೆಪಿ ಈ ಆರೋಪ ಮಾಡಿತ್ತು. ಈ ಅರೋಪಗಳ ವಿರುದ್ಧ ಸಂಸತ್ತಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.

ಈ ಆರೋಪವನ್ನು ಓಸಿಸಿಆರ್ ಪಿ ಕೂಡಾ ತಳ್ಳಿಹಾಕಿತ್ತು. “ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಅಗತ್ಯ ಅಂಶಗಳು. ಮಾಹಿತಿಯುಕ್ತ ಮತ್ತು ರಚನಾತ್ಮಕ ಚರ್ಚೆಗಳು ಹಾಗೂ ಅಧಿಕಾರದಲ್ಲಿ ಇರುವವರನ್ನು ಬಾಧ್ಯಸ್ಥರನ್ನಾಗಿಸುವುದು ಅಗತ್ಯ” ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.