EBM News Kannada
Leading News Portal in Kannada

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದುಬಾರಿ!

0



ಹೊಸದಿಲ್ಲಿ : ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕೇಂದ್ರ ಸರಕಾರವು ರವಿವಾರ ಹೆಚ್ಚಿಸಿದೆ. 19 ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ನ ದರದಲ್ಲಿ 39 ರೂ. ಏರಿಕೆ ಮಾಡಲಿದ್ದು ಅದರ ರಿಟೇಲ್ ದರ ಪ್ರತಿ ಸಿಲಿಂಡರ್‌ಗೆ 1691.50 ರೂ. ಆಗಲಿದೆ. ನೂತನ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.

ಆಗಸ್ಟ್ 1ರಂದು ಪೆಟ್ರೋಲಿಯಂ ಕಂಪೆನಿಗಳು ದೇಶಾದ್ಯತ 19 ಕೆ.ಜಿ. ವಾಣಿಜ್ಯ ಸಿಲಿಂಡರ್‌ಗಳ ದರವನ್ನು 8.50 ರೂ.ಗಳಷ್ಟು ಹೆಚ್ಚಿಸಿದ್ದವು. ಇದರಿಂದಾಗಿ ಎಲ್‌ಪಿಜಿ ದರವು 1652.50 ರೂ.ಗಳಿಂದ 1676 ರೂ.ಗೆ ಇಳಿಸಲಾಗಿತ್ತು. ಮುಂಬೈಯಲ್ಲಿ ಅದಪ ದರವು ಪ್ರತಿ ಸಿಲಿಂಡರ್‌ಗೆ 1598ರಿಂದ 1629ಕ್ಕೆ ಇಳಿದಿತ್ತು.

ಜುಲೈನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆಯಿಂದಾಗಿ ಚೆನ್ನೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವು 1840ರಿಂದ 1809ಕ್ಕೆ ಇಳಿದಿತ್ತು. ಕೋಲ್ಕತಾದಲ್ಲಿ ಈ ದರವು 1756ರಿಂದ 1787 ರೂ.ಗೆ ಇಳಿಕೆಯಾಗಿತ್ತು.

ಜೂನ್ 1ರಂದು ವಾಣಿಜ್ಯ ಬಳಕೆಯ ಎಲ್‌ಪಿಜಿ ದರವು ಸುಮಾರು 69 ರೂ. ಇಳಿಕೆ ಮಾಡಲಾಗಿತ್ತು. ಇ ಮೇ 1ರಂದು ಪ್ರತಿ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 19 ರೂ. ಇಳಿಕೆ ಮಾಡಲಾಗಿತ್ತು.

Leave A Reply

Your email address will not be published.