EBM News Kannada
Leading News Portal in Kannada

ಯುವತಿಯ ಜತೆ ಅಸಭ್ಯ ವರ್ತನೆ; ಬಾಲಾಪರಾಧಿಗೆ ಶಿಕ್ಷೆ ಏನು ಗೊತ್ತೇ?

0


ಆಗ್ರಾ: ಸಾರ್ವಜನಿಕ ಪ್ರದೇಶದಲ್ಲಿ 16 ವರ್ಷದ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ 15 ವರ್ಷ ವಯಸ್ಸಿನ ಬಾಲಾಪರಾಧಿಯೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಮಥುರಾ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣ ಪಂಚಾಯ್ತಿ ಕಟ್ಟೆ ಏರಿ, ಯುವಕ 10 ಬಾರಿ ತನ್ನ ತಲೆಯ ಮೇಲೆ ತನ್ನದೇ ಚಪ್ಪಲಿಯಿಂದ ಹೊಡೆದುಕೊಳ್ಳುವಂತೆ ಪಂಚಾಯ್ತಿ ತೀರ್ಮಾನ ನೀಡಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೋಳಿನಲ್ಲಿ ಪುಟ್ಟ ಮಗುವನ್ನು ಹಿಡಿದುಕೊಂಡಿದ್ದ ಬಾಲಕಿಯನ್ನು ಆರೋಪಿ ಬಾಲಕ ಹಿಂದಿನಿಂದ ಬಂದು ತಬ್ಬಿಕೊಂಡಿದ್ದಾನೆ. ಬಾಲಕಿಯ ಚೀರಾಟ ಕೇಳಿ ಸ್ಥಳೀಯರು ಮತ್ತು ಕುಟುಂಬದ ಇತರರು ಆಕೆಯ ರಕ್ಷಣೆಗೆ ಧಾವಿಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.

ಈ ಪ್ರಕರಣ ಪಂಚಾಯ್ತಿದಾರರ ಬಳಿಗೆ ಬಂದಾಗ, ಆರೋಪಿ ಯುವಕ ಬಾಲಕಿಯ ಕ್ಷಮೆ ಯಾಚಿಸಬೇಕು ಮತ್ತು ತನ್ನದೇ ಚಪ್ಪಲಿಯಿಂದ 10 ಬಾರಿ ತಲೆಯ ಮೇಲೆ ಹೊಡೆದುಕೊಳ್ಳಬೇಕು ಎಂಬ ವಿಚಿತ್ರ ತೀರ್ಮಾನ ನೀಡಿದೆ. ಬಳಿಕ ಆರೋಪಿಯನ್ನು ಬಿಟ್ಟಿದ್ದಾರೆ. ಈ ವಿಡಿಯೊಗಳನ್ನು ಪರಿಗಣಿಸಿದ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 294ರಡಿ ಪ್ರಕರಣ ದಾಖಲಿಸಿದ್ದಾರೆ. ಬಾಲನ್ಯಾಯ ಮಂಡಳಿಯ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

Leave A Reply

Your email address will not be published.