EBM News Kannada
Leading News Portal in Kannada

ಪಂಚರಾಜ್ಯ ಚುನಾವಣೆ : 1,760 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕದ್ರವ್ಯ, ನಗದು, ಮದ್ಯ ವಶ

0



ಹೊಸದಿಲ್ಲಿ: ಚುನಾವಣೆಗಳು ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಮತದಾರರಿಗೆ ಆಮಿಷವೊಡ್ಡುವ ಉದ್ದೇಶ ಹೊಂದಿದ್ದ 1,760 ಕೋಟಿ ರೂ.ಗೂ ಅಧಿಕ ಮೌಲ್ಯದ ಉಚಿತ ಕೊಡುಗೆಗಳು, ಮಾದಕ ದ್ರವ್ಯಗಳು, ಮದ್ಯ ಮತ್ತು ಚಿನ್ನಬೆಳ್ಳಿಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಸೋಮವಾರ ತಿಳಿಸಿದೆ.

ಅ.9ರಂದು ಚುನಾವಣೆಗಳು ಪ್ರಕಟಗೊಂಡಾಗಿನಿಂದ ವಶಪಡಿಸಿಕೊಳ್ಳಲಾಗಿರುವ ಸೊತ್ತುಗಳ ಮೌಲ್ಯವು 2018ರ ವಿಧಾನಸಭಾ ಚುನಾವಣೆಗಳಲ್ಲಿ ಈ ರಾಜ್ಯಗಳಿಂದ ವಶಪಡಿಸಿಕೊಂಡಿದ್ದ ಸೊತ್ತುಗಳ ಮೌಲ್ಯದ (239.15 ಕೋಟಿ ರೂ.) ಏಳು ಪಟ್ಟಿಗೂ ಅಧಿಕವಾಗಿದೆ ಎಂದೂ ಅದು ಹೇಳಿದೆ.

ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಮಿಜೋರಾಂಗಳಲ್ಲಿ ಚುನಾವಣೆಗಳು ಈಗಾಗಲೇ ಮುಗಿದಿದ್ದರೆ ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ಅನುಕ್ರಮವಾಗಿ ನ.25 ಮತ್ತು ನ.30ರಂದು ಮತದಾನ ನಡೆಯಲಿದೆ.

Leave A Reply

Your email address will not be published.