ಕೋಝಿಕ್ಕೋಡ್: ಖ್ಯಾತ ‘ಮಾಪಿಲಪ್ಪಾಟ್’ ಗಾಯಕಿ ರಮ್ಲಾ ಬೀಗಂ ಅವರು ಪರೋಪ್ಪಡಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಮಾಪಿಲಪಾಟ್ ಗಾಯಕಿ ಮಾತ್ರ ಆಗಿರದೆ, ಜನಪ್ರಿಯ ಕಥಾಪ್ರಸಂಗ ನಟಿಯೂ ಆಗಿದ್ದರು.
ರಮ್ಲಾ ಬೀಗಂ ಅವರು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದರು. ಸಂಗೀತ ಪ್ರೇಮಿಗಳಲ್ಲಿ ಅವರು ಹಾಡಿರುವ “ಬದ್ರುಲ್ ಮುನೀರ್ ಹುಸ್ನುಲ್ ಜಮಾಲ್..”ನಂಥ ಗೀತೆಗಳು ಇಂದಿಗೂ ಬಹಳ ಜನಪ್ರಿಯವಾಗಿವೆ. “ಆಲಂ ಉದಯೋನ್..”, “ಇರುಲೋಗಂ ಜಯಮನಿ..” ನಂಥ ಇನ್ನಿತರ ಗೀತೆಗಳೂ ಈಗಲೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.
ಅವರು ಆಲಪ್ಪುಝದ ಆಝಾದ್ ಮ್ಯೂಸಿಕ್ ಟ್ರೂಪ್‌ನಲ್ಲಿ ಹಿಂದಿ ಗೀತೆಗಳನ್ನು ಹಾಡುವ ಮುಂಚೂಣಿ ಗಾಯಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ಅವರು ತಮ್ಮ 18ನೇ ವಯಸ್ಸಿನಲ್ಲಿ ದಿ. ಕೆ.ಎ. ಸಲಾಂ (ಸಲಾಂ ಮಾಶಾ ಎಂದೇ ಜನಪ್ರಿಯರಾದ) ಅವರನ್ನು ವಿವಾಹವಾಗಿದ್ದರು.