EBM News Kannada
Leading News Portal in Kannada

3 ವರ್ಷ ಜೈಲಿನಲ್ಲೇ ಕಳೆದ ಗುಜರಾತ್‌ ವ್ಯಕ್ತಿ

0



ಅಹಮದಾಬಾದ್: ಹೈಕೋರ್ಟ್ ರಿಜಿಸ್ಟ್ರಿ ಇಮೇಲ್ ಮೂಲಕ ಕಳಿಸಿದ್ದ ಲಗತ್ತನ್ನು ತೆರೆಯಲು ಜೈಲು ಪ್ರಾಧಿಕಾರಗಳು ವಿಫಲವಾಗಿದ್ದರಿಂದ ಪ್ರಕರಣವೊಂದರಲ್ಲಿ ದೋಷಿಯಾಗಿದ್ದ ಗುಜರಾತ್ ವ್ಯಕ್ತಿಯೋರ್ವನಿಗೆ ಜಾಮೀನು ಮಂಜೂರಾದರೂ, ಆತ ಮತ್ತೆ ಮೂರು ವರ್ಷ ಸೆರೆವಾಸದಲ್ಲೇ ಕಳೆದಿರುವ ಘಟನೆ ವರದಿಯಾಗಿದೆ.

ಸೆಪ್ಟೆಂಬರ್ 22ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎ.ಎಸ್.ಸುಫೇನಿಯ ಹಾಗೂ ನ್ಯಾ. ಎಂ.ಆರ್.ಮೆಂಗ್ಡೆ ಅವರನ್ನೊಳಗೊಂಡಿದ್ದ ವಿಭಾಗೀಯ ನ್ಯಾಯಪೀಠವು, ಇದು ಕಣ್ತೆರೆಸುವ ಪ್ರಕರಣವಾಗಿದ್ದು, ಸರ್ಕಾರವು ಸಂತ್ರಸ್ತ ಚಂದನ್ ಜಿ ಠಾಕೋರ್ ಗೆ ಎರಡು ವಾರಗಳೊಳಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಜೈಲು ಪ್ರಾಧಿಕಾರಗಳಿಗೆ ಚಂದನ್ ಜಿ ಠಾಕೋರ್ ಅವರಿಗೆ ನಿಯಮಿತ ಜಾಮೀನು ಮಂಜೂರಾಗಿದೆ ಎಂದು ವರ್ಗೀಕರಣಗೊಳಿಸಿ ತಿಳಿಸಿರುವುದನ್ನು ನ್ಯಾಯಾಧೀಶರು ಗಮನಕ್ಕೆ ತೆಗೆದುಕೊಂಡರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವೈಫಲ್ಯದತ್ತಲೂ ಬೊಟ್ಟು ಮಾಡಿದ ನ್ಯಾಯಾಲಯವು, ಈಗಾಗಲೇ ಜಾಮೀನು ಮಂಜೂರಾಗಿದ್ದರೂ, ಜೈಲಿನಿಂದ ಬಿಡುಗಡೆಯಾಗದ ಕೈದಿಗಳ ದತ್ತಾಂಶವನ್ನು ಸಂಗ್ರಹಿಸುವಂತೆ ಅದಕ್ಕೆ ಸೂಚಿಸಿತು.

Leave A Reply

Your email address will not be published.