EBM News Kannada
Leading News Portal in Kannada

“ಸರಕಾರಿ ನೌಕರರು ಆದೇಶಗಳನ್ನು ಪಾಲಿಸುತ್ತಿಲ್ಲ”: ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಗೆ ದಿಲ್ಲಿ ಸರಕಾರದ ಆಗ್ರಹ

0



ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿನ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆಗಳ ಮೇಲೆ ನಿಯಂತ್ರಣವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ನೀಡಿರುವ ಕಾನೂನನ್ನು ಪ್ರಶ್ನಿಸಿ ತಾನು ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ದಿಲ್ಲಿ ಸರಕಾರವು ಬುಧವಾರ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿತು.

ದಿಲ್ಲಿ ಸರಕಾರದ ಪರ ಹಿರಿಯ ನ್ಯಾಯವಾದಿ ಅಭಿಷೇಕ ಸಿಂಘ್ವಿ ಅವರು ಪ್ರಕರಣದ ವಿಚಾರಣೆಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠದಿಂದ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವನ್ನು ಆಗ್ರಹಿಸಿದರು.

‘ದಿಲ್ಲಿ ಸರಕಾರದ ಸಂಕಟವನ್ನು ವ್ಯಕ್ತಪಡಿಸಲು ನನ್ನಿಂದ ಸಾಧ್ಯವಿಲ್ಲ, ಸರಕಾರಿ ನೌಕರರು ಆದೇಶಗಳನ್ನು ಪಾಲಿಸುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಆದರೆ, ಸಂವಿಧಾನ ಪೀಠದ ಮುಂದೆ ಹಳೆಯ ಪ್ರಕರಣಗಳು ಬಾಕಿಯಿವೆ. ನಾವು ನೋಡಲ್ ಕೌನ್ಸೆಲ್ ಆಗಿ ಶಾದಾನ್ ಫರಾಸತ್ ಅವರನ್ನು ನೇಮಿಸುತ್ತೇವೆ ಮತ್ತು ಸಾಮಾನ್ಯ ಸಂಕಲನವನ್ನು ಸಿದ್ಧಪಡಿಸುವಂತೆ ಸೂಚಿಸುತ್ತೇವೆ. ನಿಮ್ಮ ಸಲ್ಲಿಕೆಗಳನ್ನು ನಾಲ್ಕು ವಾರಗಳಲ್ಲಿ ಸಿದ್ಧಪಡಿಸಿ ಮತ್ತು ಬಳಿಕ ನೀವು ಪ್ರಕರಣವನ್ನು ಪಟ್ಟಿ ಮಾಡಲು ಕೋರಬಹುದು’ ಎಂದು ಪೀಠವು ಹೇಳಿತು.

Leave A Reply

Your email address will not be published.