EBM News Kannada
Leading News Portal in Kannada

ಜಾರ್ಖಂಡ್: ಮಾವೋಗಳೊಂದಿಗೆ ಗುಂಡಿನ ಕಾಳಗದಲ್ಲಿ ಜೆಜೆಎಫ್ ನ ಇಬ್ಬರು ಯೋಧರು ಸಾವು

0



ರಾಂಚಿ: ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಜಾರ್ಖಂಡ್ ಪೊಲೀಸ್ ನ ಜಾರ್ಖಂಡ್ ಜಾಗ್ವಾರ್ ಪಡೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಟೋಂಟೊ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬಾಹಕ ಹಾಗೂ ಸರ್ಜೋಂಬುರು ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಗುಂಡಿನ ಕಾಳಗ ನಡೆದಿದೆ.

‘‘ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಯೋಧರನ್ನು ಸಬ್-ಇನ್‌ಸ್ಪೆಕ್ಟರ್ ಅಮಿತ್ ತಿವಾರಿ ಹಾಗೂ ಕಾನ್‍ಸ್ಟೆಬಲ್ ಗೌತಮ್ ಕುಮಾರ್ ಎಂದು ಗುರುತಿಸಲಾಗಿದೆ’’ ಎಂದು ಪಶ್ಚಿಮ ಸಿಂಗ್ಭೂಮ್ನ ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಮಾವೋವಾದಿಗಳು ಇರುವ ಕುರಿತು ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಕೋಬ್ರಾ, ಜಾರ್ಖಂಡ್ ಜಾಗ್ವಾರ್ ಹಾಗೂ ಜಿಲ್ಲಾ ಶಸಸ್ತ್ರ ಪೊಲೀಸ್ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿತ್ತು.

Leave A Reply

Your email address will not be published.