EBM News Kannada
Leading News Portal in Kannada

ಟಿವಿ ಸುದ್ದಿ ವಾಹಿನಿಗಳನ್ನು ನಿಯಂತ್ರಿಸುವ ʼಸ್ವಯಂ ನಿಯಂತ್ರಣʼ ಕಾರ್ಯವಿಧಾನ ನಿಷ್ಪರಿಣಾಮಕಾರಿ: ಸುಪ್ರೀಂ ಕೋರ್ಟ್

0


ಸುಪ್ರೀಂ ಕೋರ್ಟ್ | Photo : PTI 

ಸುಪ್ರೀಂ ಕೋರ್ಟ್ | Photo : PTI 

ಹೊಸದಿಲ್ಲಿ: ಟಿವಿ ಸುದ್ದಿ ವಾಹಿನಿಗಳ ಮೇಲೆ ನಿಗಾ ಇಡುವ ಸ್ವಯಂ ನಿಯಂತ್ರಣ ಕಾರ್ಯವಿಧಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಮಾಧ್ಯಮಗಳಿಗೆ ಸ್ವಯಂ-ನಿಯಂತ್ರಕ ಕಾರ್ಯವಿಧಾನದ ಕುರಿತು ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್‌ನ ಮನವಿಯನ್ನು ಆಲಿಸಿದ ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಪ್ರತಿಕ್ರಿಯೆಯನ್ನು ನೀಡಿದೆ.

ನಿಯಮಗಳನ್ನು ಉಲ್ಲಂಘಿಸುವ ದೂರದರ್ಶನ ಚಾನೆಲ್‌ಗಳಿಗೆ ಕೇವಲ 1 ಲಕ್ಷ ರೂಪಾಯಿ ದಂಡ ಅಷ್ಟೇನೂ ಪರಿಣಾಮಕಾರಿಯಲ್ಲ. ಟಿವಿ ಚಾನೆಲ್‌ಗಳ ಸ್ವಯಂ ನಿಯಂತ್ರಣವು ʼನಿಷ್ಪರಿಣಾಮಕಾರಿʼ ಎಂದು ಸಾಬೀತಾಗಿದೆ. ಅಂತಹ ನಿಯಂತ್ರಣವನ್ನು ಬಲಪಡಿಸಲು ಮಾರ್ಗಸೂಚಿಗಳನ್ನು ನೀಡುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ ಎಂದು barandbench.com ವರದಿ ಮಾಡಿದೆ.

ನಿಯಮಗಳನ್ನು ಕಟ್ಟುನಿಟ್ಟಾಗಿ ಮಾಡದ ಹೊರತು, ಟಿವಿ ಸುದ್ದಿ ವಾಹಿನಿಗಳಿಗೆ ಅದನ್ನು ಅನುಸರಿಸಲು ಯಾವುದೇ ಒತ್ತಡವಿರುವುದಿಲ್ಲ ಎಂದು ಹೇಳಿದೆ.

ಹಲವು ವರ್ಷಗಳ ಹಿಂದೆ ನಿಗದಿಪಡಿಸಿದ ದಂಡದ ಪ್ರಮಾಣವನ್ನು ಅಂದಿನಿಂದ ಹೆಚ್ಚಿಸಲಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ, ʼ2008 ರಿಂದ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿಲ್ಲ. ಆ ಕಾರ್ಯಕ್ರಮದಿಂದ ಚಾನಲ್ ಕಂಡುಕೊಂಡ ಗಳಿಕೆಗೆ ಅನುಗುಣವಾಗಿ ದಂಡವನ್ನು ವಿಧಿಸಬೇಕುʼ ಎಂದು ಹೇಳಿದೆ.

Leave A Reply

Your email address will not be published.