ಲೋಕಸಭೆ: ಅವಿಶ್ವಾಸ ನಿರ್ಣಯದಲ್ಲಿ ‘ಇಂಡಿಯಾ’ಗೆ ಸೋಲು – Kannada News | No Confidence Motion defeated in the Lok Sabha through voice vote
No-Confidence Motion: ಲೋಕಸಭೆಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ನೀಡಿದ್ದಾರೆ. ವಿಪಕ್ಷ ನಾಯಕರು ಕೇಳಿದ ಪ್ರಶ್ನೆಗಳಿಗೆ ಸುದೀರ್ಘ ಭಾಷಣದ ಮೂಲಕ ಮೋದಿ ಉತ್ತರ ನೀಡಿದ ನಂತರ ಧ್ವನಿ ಮತ ಮೂಲಕ ಮತದಾನ ನಡೆದಿದೆ.
ದೆಹಲಿ ಆಗಸ್ಟ್ 10:ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ ನಂತರ ಮತದಾನ ನಡೆದಿದೆ. ಮೋದಿ ಭಾಷಣ ನಡೆಯುತ್ತಿದ್ದಂತೆ ವಿಪಕ್ಷ ಸಂಸದರು ಸಭಾತ್ಯಾಗ ಮಾಡಿದ್ದಾರೆ. ನಿರ್ಣಯ ಬಗ್ಗೆ ಧ್ವನಿ ಮತದಾನ ನಡೆದಿದ್ದು, ವಿಪಕ್ಷದ ಈ ಗೊತ್ತುವಳಿಗೆ ಸೋಲುಂಟಾಗಿದೆ.
#WATCH | No Confidence Motion defeated in the Lok Sabha through voice vote. https://t.co/hRwQT75Z6n pic.twitter.com/SfPOzCEFNO
— ANI (@ANI) August 10, 2023
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)