Viral Video: ಮಹಾರಾಷ್ಟ್ರ; ‘ಬುದ್ಧಿ ಇದೆಯೇ ನಿನಗೆ?’ ಭಯೋತ್ಪಾದಕನಿಗೆ ಕಪಾಳಮೋಕ್ಷ, ಮುಂದೆ? – Kannada News | A Man Slaps to Terrorist at Dhule Temple Watch Viral Video
Terrorist : ಧುಲೆಯ ನಾರಾಯಣಸ್ವಾಮಿ ದೇವಸ್ಥಾನ ಮಕ್ಕಳು ಮಹಿಳೆಯರಿಂದ ಕಿಕ್ಕಿರಿದು ತುಂಬಿದೆ. ಆಗ ಅಲ್ಲಿಗೆ ಪ್ರವೇಶಿಸಿದ ಭಯೋತ್ಪಾದಕರು ಭಕ್ತನೊಬ್ಬನನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ನಿನಗೆ ಬುದ್ಧಿ ಇದೆಯೇ? ಎಂದು ಕೂಗಿದ ವ್ಯಕ್ತಿಯೊಬ್ಬ ಭಯೋತ್ಪಾದಕನ ಕಪಾಳಕ್ಕೆ ಏಟು ಕೊಡುತ್ತಾನೆ. ಮುಂದೇನಾಗುತ್ತದೆ? ವಿಡಿಯೋ ನೋಡಿ.
ಧುಲೆಯ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಿದ ಭಯೋತ್ಪಾದಕನ ಕಪಾಳಿಗೆ ಹೊಡೆಯುತ್ತಿರುವ ವ್ಯಕ್ತಿ
Dhule : ಮಹಾರಾಷ್ಟ್ರದ ಧುಲೆಯ ದೇವಸ್ಥಾನವೊಂದರಲ್ಲಿ ಭಯೋತ್ಪಾದಕನಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಓಡಾಡುತ್ತಿದೆ. ಕಿಕ್ಕಿರಿದು ತುಂಬಿರುವ ದೇವಸ್ಥಾನದಲ್ಲಿ ಭಯೋತ್ಪಾದಕ (Terrorist) ಭಕ್ತನೊಬ್ಬನನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಧೈರ್ಯದಿಂದ ಭಯೋತ್ಪಾದಕನ ಕಪಾಳಿಗೆ ಏಟು ಕೊಟ್ಟಿದ್ದಾನೆ. ಈತನ ಧೈರ್ಯದಿಂದಾಗಿ ಈ ವಿಡಿಯೋ ಗಮನ ಸೆಳೆದಿಲ್ಲ. ಆದರೆ ಭಯೋತ್ಪಾದಕನ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಇದು ವೈರಲ್ ಆಗಿದೆ.
महाराष्ट्र के धुले में एक मंदिर में चल रही थी पुलिस की मॉकड्रिल.
मॉकड्रिल देख वहा पर मौजूद छोटे बच्चे डर की वजह से रोने लगे.
इतने में बच्चो के परिवार में से एक आदमी ने मॉक ड्रिल के दौरान ही पुलिस को तप्पड़ जड़ दिया..#Maharashtra pic.twitter.com/hmjQIc3p30
— Vivek Gupta (@imvivekgupta) August 8, 2023
ನಿನಗೆ ಬುದ್ಧಿ ಇದೆಯಾ? ಎಂದು ಕೂಗಿ ಭಯೋತ್ಪಾದಕನ ಕೆನ್ನೆಗೆ ಏಟು ಕೊಟ್ಟ ವ್ಯಕ್ತಿ 35 ವರ್ಷದ ಪ್ರಶಾಂತ ಕುಲಕರ್ಣಿ. ಹತ್ತಿರದಲ್ಲಿಯೇ ಇನ್ನೊಬ್ಬ ಭಯೋತ್ಪಾದಕ ವಶಪಡಿಸಿಕೊಂಡ ಭಕ್ತನ ಮೇಲೆ ನಿಗಾ ಇಟ್ಟಿದ್ದಾನೆ. ಈ ದುಷ್ಕರ್ಮಿಗಳ ಹಠಾತ್ ಪ್ರವೇಶದಿಂದಾಗಿ ದೇವಸ್ಥಾನದಲ್ಲಿದ್ದ ಮಕ್ಕಳು ಮತ್ತು ಮಹಿಳೆಯರು ಭಯಭೀತರಾಗಿದ್ದಾರೆ. ಇಲ್ಲಿಯ ತನಕ ಅಂದುಕೊಂಡಂತೆ ಎಲ್ಲವೂ ಕರಾರುವಕ್ಕಾಗಿ ನಡೆದಿತ್ತು ಆದರೆ ಕೊನೆಯಲ್ಲಿ ಈ ಪ್ರಶಾಂತ ಕುಲಕರ್ಣಿಯ ಮಗಳು ಜೋರಾಗಿ ಅಳಲು ಶುರುಮಾಡಿಬಿಟ್ಟಳು!
ಈ ಘಟನೆ ಇನ್ನೇನು ಕೈಮೀರಿ ಹೋಗುತ್ತದೆ ಎನ್ನಿಸಿದಾಗ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ವಾಸ್ತವದಲ್ಲಿ ಇದು ಪೊಲೀಸರು ನಡೆಸಿದ ಅಣುಕು ಪ್ರದರ್ಶನ (Mock Drill)ವಾಗಿತ್ತು. ಕಪಾಳಮೋಕ್ಷ ಮಾಡಿಸಿಕೊಂಡ ವ್ಯಕ್ತಿ ಪೊಲೀಸ್ ಅಧಿಕಾರಿಯಾಗಿದ್ದರು. ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ, ಧುಲೆಯ ದೇವ್ಪುರ್ ಪ್ರದೇಶದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭಯೋತ್ಪಾದಕರು ಪ್ರವೇಶಿಸುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಗೆ ಕರೆಬಂದಿತ್ತು.
ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪೊಲೀಸರು ಏರ್ಪಡಿಸಿದ್ದ ಅಣುಕು ಪ್ರದರ್ಶನ ಇದಾಗಿದ್ದರೂ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಕಸ್ಮಾತ್ ಮುಸುಕುಧಾರಿ ಮನುಷ್ಯ ಭಯೋತ್ಪಾದಕನೇ ಆಗಿದ್ದಲ್ಲಿ ಯಾವ ವ್ಯಕ್ತಿಗೂ ಆತನನ್ನು ಎದುರಿಸುವ ಮತ್ತು ಕಪಾಳಕ್ಕೆ ಹೊಡೆಯುವ ಧೈರ್ಯ ಇರುತ್ತಿರಲಿಲ್ಲ ಎಂದಿದ್ದಾರೆ. ಆದರೆ ಈ ಅಣುಕು ಪ್ರದರ್ಶನ ಮಹಿಳೆ ಮತ್ತು ಮಕ್ಕಳಲ್ಲಿ ಆತಂಕ ತಂದಿದೆ ಎಂದಿದ್ದಾರೆ ಕೆಲವರು.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On – 1:13 pm, Thu, 10 August 23