ಬಿಹಾರ: ವೈದ್ಯಕೀಯ ಸಲಕರಣೆ ಕೊರತೆ, ಮೂತ್ರ ಚೀಲದ ಬದಲು, ಸ್ಪ್ರೈಟ್ ಬಾಟಲಿ ಬಳಸಿದ ವೈದ್ಯರು – Kannada News | Bihar: Short of medical equipment in bihar hospital, doctors uses sprite bottle in place of urinal bag
ಎಲ್ಲಾದರೂ ರಾಜಿ ಮಾಡಿಕೊಳ್ಳಬಹುದು ಆದರೆ ಆರೋಗ್ಯದ ವಿಚಾರಕ್ಕೆ ಬಂದರೆ ಎಷ್ಟಾದರೂ ಖರ್ಚಾಗಲು ಚಿಕಿತ್ಸೆ ಉತ್ತಮವಾಗಿರಲಿ ಎಂದು ಬಯಸುವುದು ಸಹಜ.
Image Credit source: Verywell Health
ಎಲ್ಲಾದರೂ ರಾಜಿ ಮಾಡಿಕೊಳ್ಳಬಹುದು ಆದರೆ ಆರೋಗ್ಯದ ವಿಚಾರಕ್ಕೆ ಬಂದರೆ ಎಷ್ಟಾದರೂ ಖರ್ಚಾಗಲು ಚಿಕಿತ್ಸೆ ಉತ್ತಮವಾಗಿರಲಿ ಎಂದು ಬಯಸುವುದು ಸಹಜ. ಯಾಕೆಂದರೆ ಪ್ರಾಣಕ್ಕಿಂತ ಹೆಚ್ಚು ಯಾವುದೂ ಇಲ್ಲ. ಜೀವರಕ್ಷಕ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ಬಿಹಾರದ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗೆ ಮೂತ್ರದ ಚೀಲದ ಬದಲಿಗೆ ಸ್ಪ್ರೈಟ್ ಬಾಟಲಿಯನ್ನು ಬಳಸಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಸದರ್ ಆಸ್ಪತ್ರೆಗೆ ಕರೆತರಲಾಯಿತು. ತಪಾಸಣೆಯ ನಂತರ ರೋಗಿಗೆ ಮೂತ್ರ ವಿಸರ್ಜಿಸಲು ಚೀಲವನ್ನು ನೀಡುವಂತೆ ಮತ್ತು ಇನ್ಸುಲಿನ್ ಚುಚ್ಚುಮದ್ದನ್ನು ನೀಡುವಂತೆ ವೈದ್ಯರು ಸೂಚಿಸಿದ್ದಾರೆ.
ಆದರೆ, ಅಗತ್ಯ ಉಪಕರಣಗಳು ಮತ್ತು ಔಷಧಗಳ ಕೊರತೆಯಿಂದಾಗಿ ಆಸ್ಪತ್ರೆಯ ಸಿಬ್ಬಂದಿ ಮೂತ್ರ ಚೀಲದ ಬದಲಿಗೆ ಸ್ಪ್ರೈಟ್ ಬಾಟಲಿಯನ್ನು ಜೋಡಿಸಿ ರೋಗಿಯ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಾರೆ.
ಮತ್ತಷ್ಟು ಓದಿ: Uttar Pradesh: ಆಸ್ಪತ್ರೆಯ ಲಿಫ್ಟ್ನಲ್ಲಿ ಸಿಲುಕಿಕೊಂಡ 12 ರೋಗಿಗಳು, 20 ನಿಮಿಷಗಳ ಬಳಿಕ ರಕ್ಷಣೆ
ರೋಗಿಯ ಕುಟುಂಬದವರು ಆಸ್ಪತ್ರೆಯ ವ್ಯವಸ್ಥಾಪಕ ರಮೇಶ್ ಪಾಂಡೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಮಂಗಳವಾರ ಬೆಳಗ್ಗೆ ಪರಿಸ್ಥಿತಿ ತಿಳಿಗೊಳಿಸಿ ಮೂತ್ರ ಚೀಲ ಸೇರಿದಂತೆ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿತ್ತು.
ಆಸ್ಪತ್ರೆಯಲ್ಲಿ ಯೂರಿನಲ್ ಬ್ಯಾಗ್‌ಗಳ ಕೊರತೆಯ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಮಾಹಿತಿ ಬಂದ ತಕ್ಷಣ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ವ್ಯಕ್ತಿ ಕಾಲು ಮುರಿತಕ್ಕೆ ಒಳಗಾಗಿದ್ದರು. ಅಗತ್ಯವಿರುವ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.