EBM News Kannada
Leading News Portal in Kannada

ಭಾರತ ಜನರ ಧ್ವನಿ, ಈ ಧ್ವನಿಗಳನ್ನು ಆಲಿಸಲು ನಾವು ಅಹಂ, ದ್ವೇಷಗಳನ್ನು ಬಿಟ್ಟುಬಿಡಬೇಕು: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತು – Kannada News | No confidence motion in Parliament Rahul Gandhi address to Loksabha thanks speaker for reinstatement

0


No-confidence motion in Parliament: ಸೋಮವಾರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ರಾಹುಲ್ ಗಾಂಧಿ ಸಂಸತ್ ಆಗಮಿಸಿದ್ದು ಇಂದು ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ. ಅವಿಶ್ವಾಸ ನಿರ್ಣಯದ ಕುರಿತು ಮಾತನಾಡುವಾಗ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪ್ರಯಾಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಚಾಲನೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಭಾರತ ಜನರ ಧ್ವನಿ, ಈ ಧ್ವನಿಗಳನ್ನು ಆಲಿಸಲು ನಾವು ಅಹಂ, ದ್ವೇಷಗಳನ್ನು ಬಿಟ್ಟುಬಿಡಬೇಕು: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತು

ಲೋಕಸಭೆಯಲ್ಲಿ ರಾಹುಲ್ ಗಾಂಧಿ

ದೆಹಲಿ ಆಗಸ್ಟ್ 09: ಬುಧವಾರ ಮಧ್ಯಾಹ್ನ 12ಕ್ಕೆ ಲೋಕಸಭೆ (Lok sabha) ಕಲಾಪ ಪುನಾರಂಭವಾಗಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಕಲಾಪ ಆರಂಭಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ (No Confidence Motion)ಚರ್ಚೆಯಲ್ಲಿ ಮಾತನಾಡುತ್ತಿದ್ದಾರೆ. ಸೋಮವಾರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ಇದು ರಾಹುಲ್ ಗಾಂಧಿಯವರ ಮೊದಲ ಭಾಷಣವಾಗಿದೆ. ಅವಿಶ್ವಾಸ ನಿರ್ಣಯದ ಚರ್ಚೆ ಬಗ್ಗೆ ಮಾತನಾಡಲು ಎದ್ದು ನಿಂತ ರಾಹುಲ್ ಗಾಂಧಿ ಹಿಂದಿನ ಸಂಸತ್ತಿನ ಅಧಿವೇಶನದಲ್ಲಿ ಭಾಷಣವನ್ನು ಉಲ್ಲೇಖಿಸಿದ್ದು,, ಸ್ಪೀಕರ್ ಈಗ ರಿಲ್ಯಾಕ್ಸ್ ಆಗಬಹುದು ಎಂದಿದ್ದಾರೆ.

ಅವಿಶ್ವಾಸ ನಿರ್ಣಯದ ಕುರಿತು ಮಾತನಾಡುವಾಗ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ತಮ್ಮ ಭಾರತ್ ಜೋಡೋ ಯಾತ್ರೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪ್ರಯಾಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಚಾಲನೆಯಲ್ಲಿದೆ ಎಂದು ಅವರು ಹೇಳಿದರು.

ಬಿಜೆಪಿಯನ್ನು ಟೀಕಿಸುವ ಮೂಲಕ ಭಾಷಣ ಆರಂಭಿಸಿದ ರಾಹುಲ್ “ನೀವು (ಬಿಜೆಪಿ) ಇಂದು ಭಯಪಡುವ ಅಗತ್ಯವಿಲ್ಲ, ನನ್ನ ಭಾಷಣವು ಅದಾನಿ ವಿಷಯದ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ . ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು ಯಾತ್ರೆ ಇನ್ನೂ ಮುಗಿದಿಲ್ಲ. ನೀವು ಯಾತ್ರೆಯನ್ನು (ಭಾರತ್ ಜೋಡೋ ಯಾತ್ರೆ) ಏಕೆ ಪ್ರಾರಂಭಿಸಿದ್ದೀರಿ ಎಂದು ಜನರು ನನ್ನನ್ನು ಕೇಳುತ್ತಿದ್ದರು. ನಾನು ಯಾಕೆ ಯಾತ್ರೆ ಆರಂಭಿಸಿದೆ ಎಂಬುದು ನನಗೇ ಗೊತ್ತಿಲ್ಲ. ಆದರೆ ಆ ಪ್ರಯಾಣದಲ್ಲಿ  ಜನರ  ನೋವು, ಸಂಕಟ, ಸಮಸ್ಯೆಗಳು ನನ್ನದೇ ಸಮಸ್ಯೆಗಳಾದವು. ಯಾತ್ರೆಯ ವೇಳೆ ನನ್ನಲ್ಲಿದ್ದ ಅಹಂಕಾರದ ಭಾವನೆ ಮಾಯವಾಯಿತು.

ನಾನು (ಯಾತ್ರೆ) ಪ್ರಾರಂಭಿಸಿದಾಗ, ನಾನು ಪ್ರತಿದಿನ 10 ಕಿಮೀ ಓಡಲು ಸಾಧ್ಯವಾದರೆ 25 ಕಿಮೀ ನಡೆಯುವುದು ದೊಡ್ಡ ವಿಷಯವಲ್ಲ ಎಂಬುದು ನನ್ನ ಮನಸ್ಸಿನಲ್ಲಿತ್ತು, ಇಂದು ನಾನು ಅದನ್ನು ನೋಡಿದಾಗ -ಅದು ದುರಹಂಕಾರವಾಗಿತ್ತು ಎಂಬುದು ಅರ್ಥವಾಗಿದೆ. ಆಗ ನನ್ನ ಹೃದಯದಲ್ಲಿ ದುರಹಂಕಾರವಿತ್ತು .ಆದರೆ ಭಾರತವು ದುರಹಂಕಾರವನ್ನು ಅಳಿಸಿಬಿಡುತ್ತದೆ, ಒಂದು ಸೆಕೆಂಡಿನಲ್ಲಿ ಅದು ಅಳಿಸಿಹಾಕುತ್ತದೆ. ಯಾತ್ರೆಯ 2-3 ದಿನಗಳಲ್ಲಿ ಮೊಣಕಾಲು ನೋಯಲಾರಂಭಿಸಿತು, ಅದು ಹಳೆಯ ಗಾಯವಾಗಿತ್ತು. ಮೊದಲ ದಿನಗಳಲ್ಲಿ ತೋಳ ಇರುವೆ ಆಗಿ ಬಿಟ್ಟಿತು.. ಜೋ ಹಿಂದೂಸ್ತಾನ್ ಕೋ ಅಹಂಕಾರ್ ಸೆ ದೇಖ್ನೆ ನಿಕ್ಲಾ ಥಾ, ವೋ ಪೂರಾ ಕಾ ಪೂರಾ ಅಹಂಕಾರ್ ಗಯಾಬ್ ಹೋ ಗಯಾ.. (ಅಹಂಕಾರದಿಂದ  ದೇಶವನ್ನು ಸುತ್ತಲು ಹೋಗಿದ್ದವನ ಎಲ್ಲ ಅಹಂಕಾರ ಇಳಿದು ಹೋಯ್ತು).

‘ಭಾರತ ಜನರ ಧ್ವನಿ. ಈ ಧ್ವನಿಗಳನ್ನು ಆಲಿಸಲು, ನಾವು ನಮ್ಮ ಆಸೆಗಳನ್ನು ತ್ಯಾಗ ಮಾಡಬೇಕು. ನಮ್ಮ ಅಹಂ ಮತ್ತು ದ್ವೇಷವನ್ನು ಬಿಟ್ಟುಬಿಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮಣಿಪುರ ವಿಷಯ ಪ್ರಸ್ತಾಪಿಸಿ ಪ್ರಧಾನಿ  ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್,  ಪ್ರಧಾನಿಯವರು ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ. ಅವರು ಮಣಿಪುರವನ್ನು ಎರಡಾಗಿ ವಿಭಜಿಸಿದ್ದಾರೆ. ಅವರು ಮಣಿಪುರದಲ್ಲಿ ಭಾರತವನ್ನು ಕೊಂದಿದ್ದಾರೆ, ಮಣಿಪುರವನ್ನು ಮಾತ್ರವಲ್ಲ, ಅವರು ಭಾರತವನ್ನು ಕೊಂದಿದ್ದಾರೆ. ಅವರ ರಾಜಕೀಯವು ಮಣಿಪುರವನ್ನು ಕೊಂದಿಲ್ಲ, ಆದರೆ ಅದು ಮಣಿಪುರದಲ್ಲಿ ಭಾರತವನ್ನು ಕೊಂದಿದೆ, ಅವರು ಮಣಿಪುರದಲ್ಲಿ ಭಾರತವನ್ನು ಕೊಂದಿದ್ದಾರೆ.

ಕೆಲವು ದಿನಗಳ ಹಿಂದೆ ನಾನು ಮಣಿಪುರಕ್ಕೆ ಹೋಗಿದ್ದೆ, ಇಲ್ಲಿವರೆಗೆ ನಮ್ಮ ಪ್ರಧಾನಿ ಹೋಗಿಲ್ಲ, ಏಕೆಂದರೆ ಅವರಿಗೆ ಮಣಿಪುರ ಭಾರತವಲ್ಲ, ನಾನು ಮಣಿಪುರ ಎಂಬ ಪದವನ್ನು ಬಳಸಿದ್ದೇನೆ ಆದರೆ ಅದು ಮಣಿಪುರವಾಗಿ ಉಳಿದಿಲ್ಲ ಎಂಬುದು ಸತ್ಯ . ನೀವು ಮಣಿಪುರವನ್ನು ಎರಡಾಗಿ ಮಾಡಿದ್ದೀರಿ, ನೀವು ಮಣಿಪುರವನ್ನು ಒಡೆದು ಹಾಕಿದ್ದೀರಿ ಎಂದು ಹೇಳಿ.

ನೀವು ರಾಜಸ್ಥಾನಕ್ಕೆ ಯಾವಾಗ ಹೋಗುತ್ತೀರಿ ಎಂದು ಆಡಳಿತಾರೂಢ ಸಂಸದರು ಕೇಳಿದಾಗ “ನಾನು ಇಂದು ಹೋಗುತ್ತಿದ್ದೇನೆ” ಎಂದಿದ್ದಾರೆ ರಾಹುಲ್.

ಭಾರತ ಒಂದು ಧ್ವನಿ, ಭಾರತ ನಮ್ಮ ಜನರ ಧ್ವನಿ, ಹೃದಯದ ದನಿ . ಆ ದನಿಯನ್ನು ನೀವು ಮಣಿಪುರದಲ್ಲಿ ಹತ್ಯೆ ಮಾಡಿದ್ದೀರಿ, ಇದರರ್ಥ ನೀವು ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಿದ್ದೀರಿ. ಮಣಿಪುರದಲ್ಲಿನ ಜನರನ್ನು ಹತ್ಯೆ ಮಾಡುವ ಮೂಲಕ ನೀವು ಭಾರತವನ್ನು ಕೊಂದಿದ್ದೀರಿ. ನೀವು ದೇಶಪ್ರೇಮಿಗಳಲ್ಲ,ದೇಶದ್ರೋಹಿಗಳು ಎಂದು ರಾಹುಲ್ ಗುಡುಗಿದ್ದಾರೆ.

Published On – 12:22 pm, Wed, 9 August 23

ತಾಜಾ ಸುದ್ದಿ



Leave A Reply

Your email address will not be published.