EBM News Kannada
Leading News Portal in Kannada

ಸಂಸತ್​​ನಲ್ಲಿ ರಾಹುಲ್ ಗಾಂಧಿಯಿಂದ ‘ಫ್ಲೈಯಿಂಗ್ ಕಿಸ್’: ಆಕ್ಷೇಪ ವ್ಯಕ್ತಪಡಿಸಿದ ಸ್ಮೃತಿ ಇರಾನಿ, ಸ್ಪೀಕರ್​​ಗೆ ದೂರು – Kannada News | Smriti Irani objects to ‘s ‘flying kiss’ gesture BJP MPs complained to the Speaker

0


ಈ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, ನನಗಿಂತ ಮೊದಲು ಮಾತನಾಡಿದ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಸ್ತ್ರೀದ್ವೇಷಿಯಾಗಿರುವ ಪುರುಷ ಮಾತ್ರ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಬಹುದು. ಇದು ಅವರ ಕುಟುಂಬ ಮತ್ತು ಪಕ್ಷವು ಮಹಿಳೆಯರ ಬಗ್ಗೆ ಅವರ ಭಾವನೆ ಏನಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಅಮಾನವೀಯ ನಡವಳಿಕೆಯನ್ನು ದೇಶದ ಸಂಸತ್ತಿನಲ್ಲಿ ಹಿಂದೆಂದೂ ಕಂಡಿರಲಿಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ರಾಹುಲ್ ಗಾಂಧಿ- ಸ್ಮೃತಿ ಇರಾನಿ

ದೆಹಲಿ ಆಗಸ್ಟ್ 09: ಸಂಸತ್ ಸ್ಥಾನ ಮರುಸ್ಥಾಪನೆ ಆದ ಬಳಿಕ ರಾಹುಲ್ ಗಾಂಧಿ (Rahul Gandhi) ಬುಧವಾರ ಲೋಕಸಭೆಯಲ್ಲಿ (Lok Sabha) ಮೊದಲ ಬಾರಿ ಭಾಷಣ ಮಾಡಿದ್ದಾರೆ. ಆದರೆ ರಾಜಸ್ಥಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದ ಕಾರಣ ತಮ್ಮ ಭಾಷಣದ ಪ್ರತಿಕ್ರಿಯೆ ಕೇಳಲು ನಿಲ್ಲದೆ ಅವರು ಅಲ್ಲಿಂದ ಹೊರ ನಡೆದಿದ್ದಾರೆ. 2018 ರಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಕೊನೆಯ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅವರು ಮೋದಿಗೆ ಅಪ್ಪುಗೆ ನೀಡಿದ್ದು, ಕಣ್ಣು ಮಿಟುಕಿಸಿದ್ದರು. ಆದರೆ ಈ ಬಾರಿ ಫ್ಲೈಯಿಂಗ್ ಕಿಸ್ (Flying Kiss) ನೀಡಿದ್ದು ಸುದ್ದಿಯಾಗಿದೆ. ಅವಿಶ್ವಾಸ ನಿರ್ಣಯದ ಕುರಿತು ರಾಹುಲ್ ಗಾಂಧಿ ಭಾಷಣದ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಪ್ರತಿಕ್ರಿಯೆ ನೀಡಲು ಮುಂದಾದಾಗ, ರಾಹುಲ್ ಗಾಂಧಿ ಹೊರ ನಡೆದಿದ್ದಾರೆ. ಆಗ ಅವರು ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪವೆದ್ದಿದೆ.

ಏತನ್ಮಧ್ಯೆ, ಈ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, ನನಗಿಂತ ಮೊದಲು ಮಾತನಾಡಿದ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಸ್ತ್ರೀದ್ವೇಷಿಯಾಗಿರುವ ಪುರುಷ ಮಾತ್ರ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಬಹುದು. ಇದು ಅವರ ಕುಟುಂಬ ಮತ್ತು ಪಕ್ಷವು ಮಹಿಳೆಯರ ಬಗ್ಗೆ ಅವರ ಭಾವನೆ ಏನಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಅಮಾನವೀಯ ನಡವಳಿಕೆಯನ್ನು ದೇಶದ ಸಂಸತ್ತಿನಲ್ಲಿ ಹಿಂದೆಂದೂ ಕಂಡಿರಲಿಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಇದು ಅವಮಾನಕರ ರೀತಿಯ ವರ್ತನೆ: ಬಿಜೆಪಿ

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ರಾಹುಲ್ ಗಾಂಧಿಯವರ ‘ಫ್ಲೈಯಿಂಗ್ ಕಿಸ್’ ಖಂಡಿಸಿದ್ದು, ಇದು ಈ ನಾಚಿಕೆಗೇಡಿನ ವರ್ತನೆ ಎಂದಿದ್ದಾರೆ. ಕಳೆದ ಬಾರಿ ಕಣ್ಣು ಮಿಟುಕಿಸಿದ್ರು, ಆಗ ಫ್ಲೈಯಿಂಗ್ ಕಿಸ್. ಸ್ಮೃತಿ ಇರಾನಿ ಅವರ ವಿರುದ್ಧ ರಾಹುಲ್ ಗಾಂಧಿಯವರದ್ದು ನಾಚಿಕೆಗೇಡಿನ ವರ್ತನೆ. ಇದು ಅವಮಾನಕರ ಮತ್ತು ಚಿಚೋರಾ ರೀತಿಯ ನಡವಳಿಕೆಯಲ್ಲವೇ? ವಿಪರ್ಯಾಸವೆಂದರೆ ಅವರು ಮಹಿಳಾ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ ಶೆಹಜಾದ್.

2018ರಲ್ಲಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರು ಕುಳಿತಲ್ಲಿಗೆ ನಡೆದುಕೊಂಡು ಹೋಗಿ ಅಪ್ಪಿಕೊಂಡರು. ಅಷ್ಟೊತ್ತಿಗಾಗಲೇ ರಾಹುಲ್ ಗಾಂಧಿ ಮಾತನಾಡಿದ್ದರು. ಅವರು ತಮ್ಮ ಆಸನಕ್ಕೆ ಹಿಂತಿರುಗುತ್ತಿದ್ದಂತೆ  ಪಿಎಂ ಮೋದಿಯವರಿಗೆ ಹಠಾತ್ ಅಪ್ಪುಗೆಯ ಬಗ್ಗೆ ಸದನದಲ್ಲಿ ಸದಸ್ಯರು ಏನಾಯ್ತು ಎಂದು ನೋಡುತ್ತಿರುವಾಗಲೇ ಅವರು ಕಣ್ಣು ಮಿಟುಕಿಸಿ ನಕ್ಕಿದ್ದರು.

ಸ್ಮೃತಿ ಇರಾನಿ ಆಕ್ಷೇಪ ವ್ಯಕ್ತಪಡಿಸಿದ ನಂತರ, ರಾಹುಲ್ ಗಾಂಧಿ ಅವರ ಫ್ಲೈಯಿಂಗ್ ಕಿಸ್ ವಿರುದ್ಧ ಬಿಜೆಪಿ ಮಹಿಳಾ ಸಂಸದರು ಸ್ಪೀಕರ್‌ಗೆ ದೂರು ನೀಡಿದ್ದಾರೆ. ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಎಲ್ಲಾ ಮಹಿಳಾ ಸದಸ್ಯರಿಗೆ ಫ್ಲೈಯಿಂಗ್ ಕಿಸ್ ಕೊಟ್ಟು ರಾಹುಲ್ ಗಾಂಧಿ ಹೊರಟು ಹೋದರು. ಇದು ಸದಸ್ಯರೊಬ್ಬರ ಅನುಚಿತ ಮತ್ತು ಅಸಭ್ಯ ವರ್ತನೆ. ಇದು ಸದಸ್ಯನ ಅನುಚಿತ ಮತ್ತು ಅಸಭ್ಯ ವರ್ತನೆ ಎಂದು ಹಿರಿಯ ಸದಸ್ಯರು ಹೇಳುತ್ತಿದ್ದಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ನಡೆದಿಲ್ಲ…ಏನು ಈ ನಡವಳಿಕೆ?ಎಂತಹ ನಾಯಕ ಇವರು?ಅದಕ್ಕಾಗಿಯೇ ಇದರ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

Published On – 3:17 pm, Wed, 9 August 23

ತಾಜಾ ಸುದ್ದಿ



Leave A Reply

Your email address will not be published.