EBM News Kannada
Leading News Portal in Kannada

ಉತ್ತರ ಪ್ರದೇಶ: ಈ ಊರಿನಲ್ಲಿ ನೊಣಗಳ ಕಾಟ, ಯುವಕರಿಗೆ ಯಾರು ಹೆಣ್ಣು ಕೊಡ್ತಿಲ್ವಂತೆ, ನೀರಿನ ಬೃಹತ್ ಟ್ಯಾಂಕ್ ಹತ್ತಿ ಗ್ರಾಮಸ್ಥರ ಪ್ರತಿಭಟನೆ – Kannada News | Uttar pradesh village people climb water tank to protest against severe fly problem

0


ಕೋಳಿಫಾರಂ ಕೊಳಕಿನಿಂದಾಗಿ ಊರಿನಲ್ಲಿ ನೊಣಗಳ ಕಾಟ ಹೆಚ್ಚಾಗಿದೆ ಎಂದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಹಳ್ಳಿಯ ಜನರು ನೀರಿನ ಬೃಹತ್ ಟ್ಯಾಂಕ್ ಏರಿ ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶ: ಈ ಊರಿನಲ್ಲಿ ನೊಣಗಳ ಕಾಟ, ಯುವಕರಿಗೆ ಯಾರು ಹೆಣ್ಣು ಕೊಡ್ತಿಲ್ವಂತೆ, ನೀರಿನ ಬೃಹತ್ ಟ್ಯಾಂಕ್ ಹತ್ತಿ ಗ್ರಾಮಸ್ಥರ ಪ್ರತಿಭಟನೆ

ನೀರಿನ ಟ್ಯಾಂಕ್

Image Credit source: India Today

ಕೋಳಿಫಾರಂ ಕೊಳಕಿನಿಂದಾಗಿ ಊರಿನಲ್ಲಿ ನೊಣಗಳ ಕಾಟ ಹೆಚ್ಚಾಗಿದೆ ಎಂದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಹಳ್ಳಿಯ ಜನರು ನೀರಿನ ಬೃಹತ್ ಟ್ಯಾಂಕ್ ಏರಿ ಪ್ರತಿಭಟನೆ ನಡೆಸಿದರು. ಕುಯ್ಯ ಗ್ರಾಮದಲ್ಲಿ 2017ರಲ್ಲಿ ಸಾಂಗ್ವಾನ್ ಫಾರ್ಮ್​ ಉತ್ಪಾದನೆಯನ್ನು ಪ್ರಾರಂಭಿಸಿತ್ತು, ಈ ಪ್ರದೇಶದಲ್ಲಿ ನೊಣಗಳ ಸಂಖ್ಯೆ ಹೆಚ್ಚಾಗಿದ್ದು, ಜನರಿಗೆ ಸಮಸ್ಯೆಯುಂಟಾಗಿದೆ.

ನೊಣಗಳ ಸಮಸ್ಯೆಯಿಂದಾಗಿ ಈ ಊರಿಗೆ ಮದುವೆಯಾಗಿ ಬರಲು ಹೆಣ್ಣುಮಕ್ಕಳು ನಿರಾಕರಿಸುತ್ತಿದ್ದಾರೆ, ಹಾಗೆಯೇ ಮದುವೆಯಾದ ಹೆಣ್ಣುಮಕ್ಕಳು ಕೂಡ ತವರುಮನೆಗೆ ಹೋಗಿದ್ದಾರೆ ಎನ್ನುವುದು ಕೆಲವರ ಅಳಲು.

ನೊಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಊಟ ಮಾಡಲು, ಕುಡಿಯುವ ನೀರನ್ನು ತೆರೆದಿಡಲು ಕೂಡ ಕಷ್ಟವಾಗಿದ್ದು, ಸೊಳ್ಳೆ ಪರದೆ ಹಾಕಿಕೊಂಡು ಮಲಗುವುದು ಅನಿವಾರ್ಯವಾಗಿದೆ.

ಈ ಸಮಸ್ಯೆಯು ಎಷ್ಟು ತೀವ್ರವಾಗಿದೆಯೆಂದರೆ, ಇದು ಗ್ರಾಮದ ನಿವಾಸಿಗಳ ಪ್ರಕಾರ, ಪ್ರದೇಶದ ಯುವಕರ ವಿವಾಹದ ವಿವಾಹದ ಮೇಲೂ ಪರಿಣಾಮ ಬೀರಿದೆ.

ಮತ್ತಷ್ಟು ಓದಿ: ಕೇರಳ: ಹಿಂಬಾಲಿಸಿದಕ್ಕೆ ತನ್ನ ಮೇಲೆ ದೂರು ನೀಡಿದ ಹುಡುಗಿಯ ಮನೆಯೊಳಗೆ ಹಾವು ಎಸೆದ ವ್ಯಕ್ತಿ

ನೊಣಗಳ ಸಮಸ್ಯೆಯಿಂದ ಕೆಲ ಮಹಿಳೆಯರು ಅತ್ತೆ ಮನೆ ಬಿಟ್ಟು ಹೋಗಿದ್ದು, ಸಂಬಂಧಿಕರು ಭೇಟಿ ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿಂದೆ ಹಲವು ಬಾರಿ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಏನೂ ಆಗಿಲ್ಲ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.
ಈ ಹಿಂದೆ ಹಲವು ಬಾರಿ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಏನೂ ಆಗಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಗಂಟೆಗಳ ಮಾತುಕತೆಯ ನಂತರ ಗ್ರಾಮಸ್ಥರನ್ನು ನೀರಿನ ಟ್ಯಾಂಕ್‌ನಿಂದ ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಗ್ರಾಮಸ್ಥರ ಸಮಸ್ಯೆ ಬಗೆಹರಿಸಿ ನೊಣಗಳ ಸಮಸ್ಯೆ ಬಗೆಹರಿಸುವುದಾಗಿ ಆಡಳಿತ ಭರವಸೆ ನೀಡಿದೆ.

ತಾಜಾ ಸುದ್ದಿ

Leave A Reply

Your email address will not be published.