EBM News Kannada
Leading News Portal in Kannada

ಕೊರೊನಾದಿಂದ ಮೃತಪಟ್ಟ ಹೆಂಡತಿಯ ನೆನಪಿಗಾಗಿ ದೇವಸ್ಥಾನ ಕಟ್ಟಿಸಿ, ನಿತ್ಯಪೂಜೆ ಮಾಡುತ್ತಿರುವ ಗಂಡ – Kannada News | husband built Temple in the memory of his wife who died due to coronavirus in Uttar Pradesh, worships every day

0


ಫತೇಪುರ್ ಜಿಲ್ಲೆಯ ಬಕ್ವಾರ್ ವ್ಯಾಪ್ತಿಯ ಪದಾರ ಗ್ರಾಮದ ನಿವಾಸಿ ರಾಮ್ ಸೇವಕ ರೈದಾಸ್ ಎಂಬಾತ ತನ್ನ ಪತ್ನಿಯ ಸ್ಮರಣಾರ್ಥ ದೇವಾಲಯವನ್ನು ನಿರ್ಮಿಸಿದ್ದಾನೆ. ರಾಮಸೇವಕ್ ಅವರ ಪತ್ನಿ 18 ಮೇ 2020 ರಂದು ಕೊರೊನಾ ಸಮಯದಲ್ಲಿ ನಿಧನರಾದರು. ಹೆಂಡತಿಯ ಮರಣದ ನಂತರ.. ರಾಮ್ ಸೇವಕ ರೈದಾಸ್ ಮೌನವಾಗಿರಲು ಪ್ರಾರಂಭಿಸಿದರು.

ಹೆಂಡತಿಯ ನೆನಪಿಗಾಗಿ ದೇವಸ್ಥಾನ ಕಟ್ಟಿಸಿ, ನಿತ್ಯಪೂಜೆ

ಉತ್ತರ ಪ್ರದೇಶದ (Uttar Pradesh) ಫತೇಪುರ್ ಜಿಲ್ಲೆಯಲ್ಲಿ ಪತಿಯೊಬ್ಬ ತನ್ನ ಹೆಂಡತಿಯ (wife) ನೆನಪಿಗಾಗಿ (memory) ದೇವಾಲಯವನ್ನು (Temple) ನಿರ್ಮಿಸಿದ್ದಾರೆ. ವಿಶೇಷವೆಂದರೆ ಆ ದೇವಸ್ಥಾನದಲ್ಲಿ ಯಾವುದೇ ದೇವರ ವಿಗ್ರಹ ಪ್ರತಿಷ್ಠಾಪಿಸಲಿಲ್ಲ. ಬದಲಿಗೆ ಆತ ತನ್ನ ಪತ್ನಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾನೆ. ಆತ ತನ್ನ ಹೆಂಡತಿಯ ಈ ವಿಗ್ರಹಕ್ಕೆ ಬೆಳಿಗ್ಗೆ ಮತ್ತು ಸಂಜೆ ಪೂಜಿಸುತ್ತಾನೆ. ಹೆಂಡತಿಯ ಮೂರ್ತಿಯ ಮುಂದೆ ಕುಳಿತು ಪಾರಾಯಣ ಮಾಡುತ್ತಾನೆ. ಪತ್ನಿಯ ಮೇಲಿನ ಪತಿಯ ಪ್ರೀತಿಯನ್ನು ಕಂಡ ಸ್ಥಳೀಯರು ಇದನ್ನು ಷಹಜಹಾನ್ ಮತ್ತು ಮುಮ್ತಾಜ್ ಪ್ರೇಮಕಥೆ ಎಂದು ವ್ಯಾಖ್ಯಾನಿಸುತ್ತಾರೆ. ಷಹಜಹಾನ್ ಮುಮ್ತಾಜ್ ಗಾಗಿ ತಾಜ್ ಮಹಲ್ ನಿರ್ಮಿಸಿದನೆಂದು ಹೇಳಲಾಗುತ್ತದೆ, ಅದೇ ರೀತಿ ತನ್ನ ಹೆಂಡತಿಗಾಗಿ ದೇವಾಲಯವನ್ನು ನಿರ್ಮಿಸಿದ ಪತಿ ಕೂಡ ಮಹಾನ್ ಪ್ರೇಮಿ ಎನಿಸಿಕೊಂಡಿದ್ದಾನೆ.

ಜಿಲ್ಲೆಯ ಬಕ್ವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಪದಾರ ಗ್ರಾಮದ ನಿವಾಸಿ ರಾಮ್ ಸೇವಕ ರೈದಾಸ್ ಎಂಬಾತ ತನ್ನ ಪತ್ನಿಯ ಸ್ಮರಣಾರ್ಥ ದೇವಾಲಯವನ್ನು ನಿರ್ಮಿಸಿದ್ದಾನೆ. ರಾಮಸೇವಕ್ ರೈದಾಸ್ ಅವರ ಪತ್ನಿ 18 ಮೇ 2020 ರಂದು ಕೊರೊನಾ ಸಮಯದಲ್ಲಿ ನಿಧನರಾದರು. ಹೆಂಡತಿಯ ಮರಣದ ನಂತರ.. ರಾಮ್ ಸೇವಕ ರೈದಾಸ್ ಮೌನವಾಗಿರಲು ಪ್ರಾರಂಭಿಸಿದರು. ಪತ್ನಿಯ ಸಾವಿನಿಂದ ತುಂಬಾ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿಗಾಗಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಈಗ ಆತ ತನ್ನ ಹೆಂಡತಿಗಾಗಿ ದೇವಾಲಯವನ್ನು ನಿರ್ಮಿಸಿದ ನಂತರ ಅಲ್ಲಿ ಪೂಜೆಯನ್ನೂ ಪ್ರಾರಂಭಿಸಿದ್ದಾನೆ.

ಅಮೀನ್ ಕೆಲಸದಿಂದ ನಿವೃತ್ತರಾಗಿರುವ ರಾಮಸೇವಕ ರೈದಾಸ್ ಜಮೀನಿನಲ್ಲಿ ದೇವಸ್ಥಾನ ಕಟ್ಟಿದ್ದಾರೆ. ಹೆಂಡತಿಯ ಮರಣದ ನಂತರ, ಅವರು ಕೆಲವು ತಿಂಗಳುಗಳ ಕಾಲ ಸಾಕಷ್ಟು ನೋವು ಅನುಭವಿಸಿದನು. ಅದರ ನಂತರ ಅವರು ದೇವಾಲಯವನ್ನು ನಿರ್ಮಿಸಿದರು. ದೇವಾಲಯದ ನಿರ್ಮಾಣಕ್ಕಾಗಿ ಅವರು ತಮ್ಮ ಕೃಷಿ ಭೂಮಿಯನ್ನು ಆಯ್ಕೆ ಮಾಡಿದರು. ಅವರು ಎರಡು ಅಂತಸ್ತುಗಳಲ್ಲಿ ದೇವಾಲಯವನ್ನು ನಿರ್ಮಿಸಿದರು. ಅದರಲ್ಲಿ ತನ್ನ ಪತ್ನಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. ರಾಮಸೇವಕ ರೈದಾಸ್ ಅವರಿಗೆ 5 ಮಕ್ಕಳು. ಮೂವರು ಗಂಡು ಮತ್ತು ಇಬ್ಬರು ಹುಡುಗಿಯರಿದ್ದಾರೆ.

Also Read: Viral: ‘ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು’ ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು?

ರಾಮ್ ಸೇವಕ ರೈದಾಸ್ ಅವರ ಪತ್ನಿ 18 ಮೇ 1961 ರಂದು ಜನಿಸಿದರು. ನಂತರ ಅವರು 18 ಮೇ 1977 ರಂದು ವಿವಾಹವಾದರು ಎಂದು ಹೇಳಿದರು. ಅವರು ತಮ್ಮ ಜೀವನವನ್ನು ಬಹಳ ಸಂತೋಷದಿಂದ ಕಳೆದರು ಎನ್ನುತ್ತಾರೆ. ಅವರ ಪತ್ನಿ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ನಿಧನರಾದರು. ಅಂದಿನಿಂದ ಅವರು ಏಕಾಂಗಿಯಾಗಿದ್ದೇನೆ ಎಂದು ಹೇಳಿದರು. ಈ ದೇವಾಲಯವನ್ನು ನಿರ್ಮಿಸಿ ವಿಗ್ರಹವನ್ನು ಸ್ಥಾಪಿಸಿದ ನಂತರ ಅವರು ತಮ್ಮ ಹೆಂಡತಿ ತಮ್ಮ ಎದುರೇ ಜೀವಂತವಾಗಿರುವಂತೆ, ತಮ್ಮೊಂದಿಗೆ ಬಾಳ್ವೆ ನಡೆಸುತ್ತಿರುವಂತೆ ಅನುಭವ ಆಗುತ್ತಿದೆ ಎಂದು ಅವರು ಹೇಳಿದರು.

ಆರಂಭದಲ್ಲಿ ರಾಮ್ ಸೇವಕ ರೈದಾಸ್ ತಮ್ಮ ಹೆಂಡತಿಗೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದಾಗ ಗ್ರಾಮಸ್ಥರು ಅವರ ನಿರ್ಧಾರವನ್ನು ಸ್ವಾಗತಿಸಲಿಲ್ಲ. ಕೆಲವರು ಗೇಲಿ ಮಾಡಿದರು… ಆದರೆ ದೇವಸ್ಥಾನ ಕಟ್ಟಿದ ನಂತರ ಅವರ ಪತ್ನಿಯ ಮೇಲಿನ ಪ್ರೀತಿ ಎಷ್ಟು ಸತ್ಯ ಎಂಬುದು ಎಲ್ಲರಿಗೂ ಅರ್ಥವಾಯಿತು.

Published On – 12:10 pm, Tue, 8 August 23

ತಾಜಾ ಸುದ್ದಿ

Leave A Reply

Your email address will not be published.