EBM News Kannada
Leading News Portal in Kannada

ರಾಹುಲ್ ಗಾಂಧಿಯನ್ನು ಮದುವೆಯಾಗುವೆ, ಆದರೆ ಒಂದು ಷರತ್ತು ಇದೆ: ನಟಿ ಶೆರ್ಲಿನ್ ಚೋಪ್ರಾ – Kannada News | Sherlyn Chopra response to marrying Rahul Gandhi But On One Condition video goes viral

0


ಶೆರ್ಲಿನ್ ಚೋಪ್ರಾ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದಾಗ, ಪಾಪರಾಜಿ ಒಬ್ಬರು ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೀರಾ ಎಂದು ತಮಾಷೆಯಾಗಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆರ್ಲಿನ್, “ಹೌದು, ವೈ ನಾಟ್. ಆದರೆ ಮದುವೆಯ ನಂತರ ನನ್ನ ಸರ್​​ನೇಮ್ ಬದಲಿಸಲ್ಲ ಎಂದು ಹೇಳಿದ್ದಾರೆ.

ಶೆರ್ಲಿನ್ ಚೋಪ್ರಾ

ದೆಹಲಿ ಆಗಸ್ಟ್ 08: ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಮತ್ತು ಪಾಪರಾಜಿಗಳೊಂದಿಗೆ ತಮಾಷೆಯ ಸಂವಾದದ ಸಮಯದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಮದುವೆಯಾಗಲು ಯೋಚಿಸುತ್ತೀರಾ ಎಂದು ಅವರಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಗೆ ಶೆರ್ಲಿನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಒಂದು ಒಂದು ಷರತ್ತನ್ನು ಇಟ್ಟಿದ್ದಾರೆ. ಶೆರ್ಲಿನ್ ಚೋಪ್ರಾಳ ಈ ಉತ್ತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್(Viral Video) ಆಗಿದೆ.

ರಾಹುಲ್ ಗಾಂಧಿಯನ್ನು ಮದುವೆಯಾಗುವೆ ಆದರೆ ಒಂದು ಷರತ್ತು

ಆಗಾಗ್ಗೆ ಪಾಪರಾಜಿಗಳ ಕಣ್ಣಿಗೆ ಬೀಳುವ ಶೆರ್ಲಿನ್ ಚೋಪ್ರಾ ಈ ಬಾರಿ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಸಿಕ್ಕಿದ್ದಾರೆ. ಆಕೆ ತಿಳಿ ಗುಲಾಬಿ ಫೆದರ್ಡ್ ಸ್ಲೀವ್ ಲೆಸ್ ಕ್ರಾಪ್ ಟಾಪ್ ಧರಿಸಿ, ಕಪ್ಪು ಮಿನಿ ಸ್ಕರ್ಟ್‌ ಧರಿಸಿ ಗಮನ ಸೆಳೆದಿದ್ದಾರೆ. ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದಾಗ, ಪಾಪರಾಜಿ ಒಬ್ಬರು ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೀರಾ ಎಂದು ತಮಾಷೆಯಾಗಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆರ್ಲಿನ್, “ಹೌದು, ವೈ ನಾಟ್. ಆದರೆ ಮದುವೆಯ ನಂತರ ನನ್ನ ಸರ್​​ನೇಮ್ ಬದಲಿಸಲ್ಲ ಎಂದು ಹೇಳಿದ್ದಾರೆ.

ಶೆರ್ಲಿನ್ ಅವರ ಹೇಳಿಕೆ ವೈರಲ್ ಆಗಿದ್ದರೂ, ರಾಹುಲ್ ಗಾಂಧಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಆಗಸ್ಟ್ 4 ರಂದು ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದ ನಂತರ ವಯನಾಡ್ ಕ್ಷೇತ್ರದ ಲೋಕಸಭಾ ಸಂಸದರಾಗಿ ರಾಹುಲ್ ಗಾಂಧಿ ಮತ್ತೆ ಮರಳಿದ್ದಾರೆ.  ‘ಮೋದಿ ಉಪನಾಮ’ ಟೀಕೆಗಳ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯವು ಅವರನ್ನು ಅಪರಾಧಿ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.ಈ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

ಕೇರಳದ ವಯನಾಡ್ ಕ್ಷೇತ್ರದಿಂದ ಲೋಕಸಭೆಯ ಸಂಸದರಾಗಿರುವ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ಮರುಸ್ಥಾಪಿಸಲಾಗಿದ್ದು, ಅವರೀಗ ಮುಂಗಾರು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.

ಯಾರು ಈ ನಟಿ?

ಶೆರ್ಲಿನ್ ದಿಟ್ಟ ಹೇಳಿಕೆಗಳನ್ನು ನೀಡುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನೇರಾ ನೇರಾ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಹೊಸದೇನಲ್ಲ. ಕಳೆದ ತಿಂಗಳು, ಅವರು ಮುಂಬೈ ಮೂಲದ ಫೈನಾನ್ಷಿಯರ್ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ವಿಡಿಯೊ ರೆಕಾರ್ಡಿಂಗ್‌ಗಾಗಿ ಹಣ ನೀಡುವ ನೆಪದಲ್ಲಿ ಫೈನಾನ್ಷಿಯರ್ ತನ್ನನ್ನು ಕಿರುಕುಳ ನೀಡಿದ್ದಾನೆ ಎಂದು ಶೆರ್ಲಿನ್ ಆರೋಪಿಸಿದ್ದಾಳೆ. ಇದಕ್ಕಿಂತ ಮುಂಚೆ ‘ಬಿಗ್ ಬಾಸ್ 16’ ನಲ್ಲಿ #MeToo ಆರೋಪವಿರುವ ಸಾಜಿದ್ ಖಾನ್ ಭಾಗವಹಿಸುವಿಕೆಯ ವಿರುದ್ಧ ಈಕೆ ಧ್ವನಿಯೆತ್ತಿದ್ದರು.

ಪ್ರಸ್ತುತ, ಶೆರ್ಲಿನ್ ಚೋಪ್ರಾ ಏಕ್ತಾ ಕಪೂರ್ ನಿರ್ಮಿಸಿದ ವೆಬ್ ಸರಣಿ ‘ಪೌರಶ್‌ಪುರ 2’  ಪ್ರಚಾರದಲ್ಲಿ ನಿರತರಾಗಿದ್ದಾರೆ.  ದೀರ್ಘ ಬ್ರೇಕ್  ಆಕೆ ಮತ್ತೆ ನಟನೆಗೆ ಮರಳಿದ್ದು ಜುಲೈ 28 ರಂದು ಇದು OTT ವೇದಿಕೆಯಲ್ಲಿ ಬಿಡುಗಡೆಯಾಗಿದೆ.

‘ದೋಸ್ತಿ: ಫ್ರೆಂಡ್ಸ್ ಫಾರೆವರ್,’ ‘ರೆಡ್ ಸ್ವಸ್ತಿಕ್,’ ‘ವಾಜಾ ತುಮ್ ಹೋ,’ ‘ಗೇಮ್,’ ‘ಚಮೇಲಿ,’ ಮತ್ತು ‘ಜವಾನಿ ದಿವಾನಿ: ಎ ಯೂತ್‌ಫುಲ್ ಜಾಯ್​​ರೈಡ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತನ್ನ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸುತ್ತಾ, ಅವರು ಈಗ ಕಿರುಚಿತ್ರಗಳ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ.

ತಾಜಾ ಸುದ್ದಿ



Leave A Reply

Your email address will not be published.