EBM News Kannada
Leading News Portal in Kannada

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 400 ಕೆಜಿ ತೂಕದ ಬೀಗ ಉಡುಗೊರೆ ನೀಡಲಿದ್ದಾರೆ ಅಲಿಗಢದ ಪ್ರಸಿದ್ಧ ಕುಶಲಕರ್ಮಿ ದಂಪತಿ – Kannada News | Aligarh artisan makes 400kg lock and 4 Foot Key for Ayodhya Ram Mandir

0


ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಅಲಿಗಢದ ಕುಶಲಕರ್ಮಿಯೊಬ್ಬರು 10 ಅಡಿ ಎತ್ತರದ 400 ಕೆಜಿ ತೂಕದ ಬೀಗ ಉಡುಗೊರೆಯಾಗಿ ನೀಡಲಿದ್ದಾರೆ.

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಅಲಿಗಢದ ಕುಶಲಕರ್ಮಿಯೊಬ್ಬರು 10 ಅಡಿ ಎತ್ತರದ 400 ಕೆಜಿ ತೂಕದ ಬೀಗ ಉಡುಗೊರೆಯಾಗಿ ನೀಡಲಿದ್ದಾರೆ. ಅಯೋಧ್ಯೆಯ ರಾಮಮಂದಿರ 2024ರ ಜನವರಿಯಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ವಿಶ್ವದ ಅತಿದೊಡ್ಡ ಬೀಗವನ್ನು ತಯಾರಿಸಿಲು ಕುಶಲಕರ್ಮಿ ಸತ್ಯ ಪ್ರಕಾಶ್ ಶರ್ಮಾ ತಿಂಗಳುಗಳಕಾಲ ಕಷ್ಟಪಟ್ಟಿದ್ದಾರೆ.

ತಮ್ಮ ಕುಟುಂಬವು ಸಾಕಷ್ಟು ವರ್ಷಗಳಿಂದ ಕೈಗಳಿಂದಲೇ ಬೀಗ ತಯಾರಿಸುವಲ್ಲಿ ಪ್ರಸಿದ್ಧವಾಗಿದೆ, ಈಗ ರಾಮ ಮಂದಿರವನ್ನು ಗಮನದಲ್ಲಿಟ್ಟುಕೊಂಡು ಅವರು 10 ಅಡಿ ಎತ್ತರ ಹಾಗೂ 4.5 ಅಡಿ ಅಗಲ ಹಾಗೂ 9.5 ಇಂಚು ದಪ್ಪವಿರುವ ಬೀಗವನ್ನು ತಯಾರಿಸಿದ್ದು ಅದಕ್ಕೆ ನಾಲ್ಕು ಅಡಿಯಷ್ಟು ದೊಡ್ಡ ಕೀಲಿ ಕೈಯನ್ನು ಕೂಡ ನಿರ್ಮಿಸಲಾಗಿದೆ.

ಮತ್ತಷ್ಟು ಓದಿ: ಅಯೋಧ್ಯೆಯಲ್ಲಿ ವೇಗ ಪಡೆದುಕೊಂಡ ರಾಮಮಂದಿರದ ಕೆಲಸ; ಕಾರ್ಮಿಕರ ಸಂಖ್ಯೆ ಹೆಚ್ಚಿಸಿದ ಟ್ರಸ್ಟ್

ಲಕ್ಷಾಂತರ ಭಕ್ತರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದೇವೆ ಮತ್ತು ಈ ಬೀಗವನ್ನು ಎಲ್ಲಿ ಬಳಸಬೇಕು ಎಂಬುದನ್ನು ನಂತರ ನಿರ್ಧರಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪತ್ನಿಯೊಂದಿಗೆ ಸೇರಿ ಈ ಬೀಗವನ್ನು ತಯಾರಿಸಿದ್ದೇನೆ ಎಂದು ಸತ್ಯ ಪ್ರಕಾಶ್ ಶರ್ಮಾ ಹೇಳಿದ್ದಾರೆ. ಈವರೆಗೆ ಒಂದೂವರೆ ಲಕ್ಷ ರೂ ಹಾಗೂ ಈಗ ಮೂರು ಲಕ್ಷ ರೂ. ಖರ್ಚಾಗಿದೆ. ಇಬ್ಬರೂ ಸೇರಿ 6 ತಿಂಗಳಲ್ಲಿ ಬೀಗ ಸಿದ್ಧಪಡಿಸಿದ್ದಾರೆ.

ಬೀಗವನ್ನು ಕಬ್ಬಿಣದಿಂದ ತಯಾರಿಸಲಾಗಿದೆ, ಆದರೆ ಅದರಲ್ಲಿ ಹಿತ್ತಾಳೆ, ಉಕ್ಕಿನ ಕೆಲಸವನ್ನೂ ಮಾಡಲು ಬಯಸುತ್ತೇವೆ. ಈಗ ನಮ್ಮ ಬಳಿ ಸಾಕಷ್ಟು ಹಣವಿಲ್ಲ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.